ತೆಲಂಗಾಣದ ನಾರಾಯಣ ಪೇಟೆ ಜಿಲ್ಲೆಯ ಮಕಹತಾಲ್ ಪಟ್ಟಣದಲ್ಲಿ ನಡೆದ ಘಟನೆ ಇದು. ಪ್ರವಾಸಕ್ಕೆಂದು ಆ ಮನೆಯ ಮಾಲೀಕ ತೆರಳಿ ಮರಳಿ ಬಂದಾಗ ಸ್ನಾನಗೃಹದಲ್ಲಿ ಬಾಲಕಿಯೋರ್ವಳು ಬಿದ್ದದ್ದನ್ನು ಕಂಡರು. ಆ ಬಾಲಕಿಗೆ ಏಳರ ಹರೆಯ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ಏನಾಯಿತು:
ಎರಡನೇ ತರಗತಿ ಓದುತ್ತಿದ್ದ ಕುರವಕಚೇರಿ ಅಖಿಲ ಎಂಬಾಕೆ ಟೆರೇಸ್ ಮೇಲೆ ಆಡುತ್ತಿದ್ದಾಗ ಆಯತಪ್ಪಿ ನೆರೆಮನೆಯ ಬಾತ್‌ರೂಂ ಮೇಲೆ ಬಿದ್ದಿದ್ದಾಳೆ. ಪ್ಲಾಸ್ಟಿಕ್ ಬಲೆಯಿಂದ ಛಾವಣಿ ನಿರ್ಮಿಸಲಾಗಿತ್ತು. ಹೀಗಾಗಿ ಬಾಲಕಿ ನೇರವಾಗಿ ಒಳಗಡೆ ಏ. 20ರಂದು ಬಿದ್ದಿದ್ದಳು. ಹಗ್ಗ ಮತ್ತು ಬಟ್ಟೆಯಿಂದಾಗಿ ಯಾವುದೇ ಗಾಯಗಳಾಗಿಲ್ಲ. ಹೊರಗಿನಿಂದ ತುಂಬ ದೂರದಲ್ಲಿದ್ದದ್ದರಿಂದಾಗಿ ಆಕೆಯ ಅಳುವಿನ ಶಬ್ದ ಕೂಡ ಹೊರಗೆ ಕೇಳಿಸಿರಲಿಲ್ಲ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಬಾಲಕಿಯ ಪಾಲಕರಾದ ಸುರೇಶ್ ಮತ್ತು ಮಹದೇವಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ಮರುದಿನ ದೂರು ನೀಡಿದ್ದರು. ಪೊಲೀಸರು ತಂಡ ರಚಿಸಿ ಬಾಲಕಿಯ ಶೋಧ ಕಾರ್ಯ ಕೈಗೊಂಡರೂ ಕೂಡ ಯಾವುದೇ ಸುಳಿವು ಪತ್ತೆಯಾಗಿರಲಿಲ್ಲ. ಐದು ದಿನಗಳ ಕಾಲ ಆಕೆ ಬಾತ್ ರೂಮ್ ನಲ್ಲಿದ್ದ ನೀರು ಕುಡಿದೇ ಬದುಕಿ ಉಳಿದ್ದಳು.