ಹೇಗಿದ್ದ ಮನೆ ಹೇಗಾಯ್ತು ಗೊತ್ತಾ?

ಸುದ್ದಿ, ಲೇಖನಗಳಿಗೆ www.bantwalnews.comಸಂಪಾದಕ: ಹರೀಶ ಮಾಂಬಾಡಿ

ಜಾಹೀರಾತು

ಬೀಳುವ ಸ್ಥಿತಿಯಲ್ಲಿದ್ದ ಮನೆಯಲ್ಲಿ ಮಳೆಗಾಲದಲ್ಲಿ ದಿನ ಹೇಗೆ ಕಳೆಯುವುದು ಎಂದು ಆತಂಕದಲ್ಲಿದ್ದ ಕಲ್ಲಡ್ಕ ಸಮೀಪ ನೆಟ್ಲ ಬಳಿಯ ಪಿಲಿಂಜ ಎಂಬ ಪ್ರದೇಶದಲ್ಲಿರುವ 65 ವರ್ಷದ ಧರ್ಣಮ್ಮಜ್ಜಿಯ ಮುಖದಲ್ಲೀಗ ಸಂತಸದ ಕಳೆ. ನೆಟ್ಲ ಪರಿಸರದ ಯುವಕರ ತಂಡ ‘ಕುಟುಂಬ’ದ ಸದಸ್ಯರು ತಾವೇ ಪರಿಶ್ರಮಪಟ್ಟು ನಿರ್ಮಿಸಿದ ಮನೆಗೆ ಇಂದು ಗೃಹಪ್ರವೇಶ ಮಾಡಲಿದ್ದಾರೆ ಧರ್ಣಮ್ಮ.

ಮಗ ವರ್ಷದ ಮೊದಲು ಮೃತಪಟ್ಟಿದ್ದರು. ಈಗ ಬೀಳುವ ಸ್ಥಿತಿಯಲ್ಲಿರುವ ಮನೆಯೇ ಆಧಾರವಾಗಿದ್ದ ಧರ್ಣಮ್ಮ ಅವರ ಸ್ಥಿತಿ ಗಮನಿಸಿ ಬೀಟ್ ಪೊಲೀಸ್ ಸಿಬ್ಬಂದಿ ಗಮನಿಸಿದ್ದರು. ಬಂಟ್ವಾಳ ನಗರ ಠಾಣಾ ಎಸ್.ಐ. ಚಂದ್ರಶೇಖರ್ ಮಾರ್ಗದರ್ಶನದಲ್ಲಿ ಬೀಟ್ ಪೊಲೀಸ್ ನಾಗರಾಜ್ ಕೆ ಮತ್ತು ಪೊಲೀಸ್ ಸಿಬ್ಬಂದಿ ಚೆನ್ನಪ್ಪ ಗೌಡ ಅವರು ಧರ್ಣಮ್ಮ ಅವರ ಸಂಕಷ್ಟದ ಸ್ಥಿತಿಯನ್ನು ಗಮನಿಸಿ ಕುಟುಂಬ ತಂಡದ ಸದಸ್ಯರ ಸಹಕಾರದೊಂದಿಗೆ ಮನೆ ಕಟ್ಟುವ ಕಾರ್ಯ ನಡೆಸಿದರು.

ಒಂದೇ ತಿಂಗಳಲ್ಲಿ ಮನೆ ಮರುನಿರ್ಮಾಣ ಆಯಿತು. 55 ಸದಸ್ಯರನ್ನು ಹೊಂದಿರುವ ಕುಟುಂಬ ತಂಡದ ಸದಸ್ಯರು ಧರ್ಣಮ್ಮ ಅವರ ಮನೆ ಮರುನಿರ್ಮಾಣಕ್ಕೆ ಕೈಜೋಡಿಸಿದರು. ತಾವೇ ಕಲ್ಲು ಹೊತ್ತು, ಗೋಡೆ ಕಟ್ಟಿದರು. ಇದಕ್ಕೆ ಸಾಲಿಯಾನ್ ಸರ್ವೀಸಸ್ ಮಾಲೀಕ ಚಂದ್ರಶೇಖರ್ ಮತ್ತು ಪಂಚಾಯತ್ ಸದಸ್ಯ ಗಿರೀಶ್ ಕುಲಾಲ್ ಅವರ ನೆರವೂ ಇತ್ತು ಎನ್ನುತ್ತಾರೆ ತಂಡದ ಅಧ್ಯಕ್ಷ ಧನಂಜಯ ಗುಂಡಿಮಜಲು.

ಏನೇನ್ ಮಾಡ್ತಾರೆ?
ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಅಭಿಯಾನ, ಧಾರ್ಮಿಕ ಕ್ಷೇತ್ರಗಳಲ್ಲಿ ಸ್ವಚ್ಛತಾ ಕಾರ್ಯ, ಕಷ್ಟಕಾಲದಲ್ಲಿ ರೋಗಿಗಳಿಗೆ ಆರ್ಥಿಕ ಬಲದ ಸಹಾಯಕೊಡಲಾಗದಿದ್ದರೂ ರಕ್ತ ಕೊಡುವುದು, ಪರಿಸರ ಸಂರಕ್ಷಣೆ, ಹಳ್ಳಿ ಪ್ರದೇಶಗಳಲ್ಲಿ ಇರುವ ಅತ್ಯಂತ ಬಡ ಕುಟುಂಬಗಳಿಗೆ ನೆರವು, ಬಡ ಕುಟುಂಬದ ವಿದ್ಯಾರ್ಥಿಗಳಿಗೆ ನೆರವು, ಬಡ ಕುಟುಂಬಗಳಿಗೆಸರಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಂಬಂಸಿದ ಇಲಾಖೆಗಳೊಂದಿಗೆ ಚರ್ಚಿಸಿ ನೆರವು ಒದಗಿಸುವುದು, ಪ್ರಾಕೃತಿಕ ವಿಕೋಪದ ಸಂದರ್ಭ ರಕ್ಷಣಾ ತಂಡಕ್ಕೆ ಸಹಕರಿಸುವುದು ಸಂಸ್ಥೆಯ ಕೆಲಸ ಕಾರ್ಯಗಳು

ಕುಸಿದು ಬೀಳುವ ಧರ್ಣಮ್ಮಜ್ಜಿ ಮನೆಗೆ ಹೊಸ ಮಾಡು, ಜಗಲಿ, ಬಾಗಿಲು, ಟಾಯ್ಲೆಟ್, ಬಾತ್ ರೂಮ್ ನಿರ್ಮಿಸಿಕೊಟ್ಟಿರುವ ಸದಸ್ಯರು ಸದ್ಯಕ್ಕೆ ಗಣಹೋಮ ನೆರವೇರಿಸುವುದರ ಮೂಲಕ ಧರ್ಣಮ್ಮಜ್ಜಿಗೆ ಮನೆ ಪ್ರವೇಶಕ್ಕೆ ಅನುವು ಮಾಡಲು ನೆರವಾಗಿದ್ದಾರೆ.

ಕುಟುಂಬದ ಕುರಿತು –

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.