ಕಲ್ಲಡ್ಕ ಸಮೀಪ ಬಾಳ್ತಿಲ ಎಂಬಲ್ಲಿ ಸೋಮವಾರ ಮಧ್ಯಾಹ್ನ ನಡೆದ ಘಟನೆಯಲ್ಲಿ ಮನೆಗೆ ಆಕಸ್ಮಿಕವಾಗಿ ಬೆಂಕಿ ತಗಲಿ ಬಹುತೇಕ ಮನೆ ಭಸ್ಮಗೊಂಡಿದೆ. ಇದರಿಂದ ಲಕ್ಷಾಂತರ ರೂ ಮೌಲ್ಯದ ವಸ್ತುಗಳು ನಾಶವಾಗಿವೆ.
ಕಲ್ಲಡ್ಕ ಬಾಳ್ತಿಲ ಗ್ರಾಮದ ದಂಡೆಮಾರು ಕಲ್ಲಪಾಪು ಎಂಬಲ್ಲಿರುವ ಚಂದ್ರಶೇಖರ ನಾಯ್ಕ್ ಹಾಗೂ ಅವರ ಮನೆಮಂದಿ ಸಂಬಂಧಿಕರ ಮದುವೆಗೆಂದು ಬ್ರಹ್ಮರಕೂಟ್ಲುವಿನಲ್ಲಿರುವ ಬಂಟರ ಭವನಕ್ಕೆ ತೆರಳಿದ್ದ ವೇಳೆ ಘಟನೆ ಸಂಭವಿಸಿದೆ. ಈ ಸಂದರ್ಭ ವಾಸದ ಮನೆ ಮತ್ತು ದಾಸ್ತಾನಿರಿಸಲಾಗಿದ್ದ ಸುಮಾರು 40 ಕ್ವಿಂಟಲ್ ಅಡಕೆ ಸುಟ್ಟು ಕರಕಲಾಗಿವೆ. ಬಂಟ್ವಾಳ ಅಗ್ನಿಶಾಮಕದಳದ ತಂಡ ಆಗಮಿಸಿ ಬೆಂಕಿ ನಂದಿಸುವಲ್ಲಿ ಸಹಕರಿಸಿದರು.
ಸ್ಥಳಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಬಂಟ್ವಾಳ ತಹಶಿಲ್ದಾರ್ ಸಣ್ಣರಂಗಯ್ಯ ಭೇಟಿ ನೀಡಿದರು. ತಾಲೂಕು ಪಂಚಾಯತ್ ಸದಸ್ಯೆ ಲಕ್ಷ್ಮಿ ಗೋಪಾಲ, ಪ್ರಮುಖರಾದ ಚೆನ್ನಪ್ಪ ಕೋಟ್ಯಾನ್, ದೇವದಾಸ್ ಶೆಟ್ಟಿ, ದಿನೇಶ ಅಮ್ಟೂರು, ಶ್ರೀಕಾಂತ್ ಶೆಟ್ಟಿ , ಶೋಬಿತ್ ಪೂಂಜ, ಆನಂದ ಶೆಟ್ಟಿ, ತಾಲೂಕು ಆಡಳಿತ ಶಾಖೆಯ ಸೀತಾರಾಮ ಕಮ್ಮಾಜೆ ತಾಲೂಕು ಗ್ರಾಮ ಲೆಕ್ಕಾಧಿಕಾರಿ ನಾಗರಾಜ್ ಗ್ರಾಮ ಸಹಾಯಕ ದಿವಾಕರ ಪರಿಶೀಲನೆ ನಡೆಸಿ ದರು ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.
ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಮೂರನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಬಂಟ್ವಾಳ ತಾಲೂಕಿನ ಸುದ್ದಿಗಳನ್ನು ಒದಗಿಸುವ ಮೊದಲನೇ ವೆಬ್ ಪತ್ರಿಕೆ ಜಾಹೀರಾತುಗಳಿಗೆ ಸಂಪರ್ಕ ಸಂಖ್ಯೆ: 9448548127