ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳ ಜೋಡನೆ ಸಿದ್ಧತೆ ಕೆಲಸವು ಮೊಡಂಕಾಪು ಇನ್ಪೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಯ ಹಾಲ್ ನಲ್ಲಿ ಗುರುವಾರ ರಾತ್ರಿ ನಡೆಯಿತು. ದ.ಕ. ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಅವರು ಕೇಂದ್ರಕ್ಕೆ ಭೇಟಿ ನೀಡಿ ಮತ ಯಂತ್ರ ಜೋಡಣೆ, ಸಿದ್ಧತೆ
ಹಾಗೂ ಚುನಾವಣೆ ಕಾರ್ಯಯೋಜನೆಗಳ ಕುರಿತು ಪರಿಶೀಲಿಸಿ ಸಲಹೆ, ಸೂಚನೆಗಳನ್ನು ನೀಡಿದರು 21 ಸೆಕ್ಟರ್ ಆಧಿಕಾರಿ,ಗ್ರಾಮ ಲೆಕ್ಕಾಧಿಕಾರಿ ಹಾಗೂ ಗ್ರಾಮ ಸಹಾಯಕರೊಂದಿಗೆ ಕೆಲಸ ಕಾರ್ಯ ನಡೆಯಿತು. ಭೂಮಾಪನ ಇಲಾಖೆಯ ಸಿಬ್ಬಂದಿಗಳು ಸಹಿತ ಹಲವಾರು ಈ ಸಂದರ್ಭದಲ್ಲಿ ಕಾರ್ಯನಿರತರಾಗಿದ್ದು ಸಿದ್ದತೆ ಕೆಲಸವು ರಾಜಕೀಯ ಪಕ್ಷದ ಮುಖಂಡರ ಸಮಕ್ಷಮ ನಡೆಯಿತು. ಬಂಟ್ವಾಳ ಚುನಾವಣಾಧಿಕಾರಿ ಮಹೇಶ್, ಬಂಟ್ವಾಳ ತಹಶೀಲ್ದಾರ್ ಸಣ್ಣ ರಂಗಯ್ಯ , ಚುನಾವಣಾ ಉಪತಹಶೀಲ್ದಾರ್ ದಾದಾ ಪೈರೋಜ್, ಚುನಾವಣಾ ಉಪತಹಶೀಲ್ದಾರ್ ರವಿಶಂಕರ್, ಬಂಟ್ವಾಳ ಕಂದಾಯ ನಿರೀಕ್ಷಕ ನವೀನ್ ಬೆಂಜನ ಪದವು,ಸದಾಶಿವ ಕೈಕಂಬ ಹಾಗೂ ಇತರ ಇಲಾಖಾ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು