ಬೆಳಗ್ಗಿನ ವೇಗ, ಮಧ್ಯಾಹ್ನ ನಿಧಾನಗತಿಯಲ್ಲಿದ್ದ ಮತದಾನ ಕೊಂಚ ಏರುಹಾದಿಯಲ್ಲಿದೆ. ಲೋಕಸಭೆಯ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಮಧ್ಯಾಹ್ನ 3 ಗಂಟೆ ವೇಳೆ ಶೇ.60.02 ಪ್ರಮಾಣ ದಾಖಲಾಗಿತ್ತು. ಸಂಜೆ ವೇಳೆ ಇನ್ನೂ ಜಾಸ್ತಿಯಾಗುವ ಸಂಭವ ಇದೆ. 2014ರ ಲೋಕಸಭೆ ಚುನಾವಣೆ ಸಂದರ್ಭ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಶೇ.77.14 ಮತದಾನವಾಗಿತ್ತು.
ಮಧ್ಯಾಹ್ನ 3 ಗಂಟೆ ವೇಳೆ ಕ್ಷೇತ್ರವಾರು ಮತದಾನದ ಪ್ರಮಾಣ ಹೀಗಿತ್ತು.
ಬೆಳ್ತಂಗಡಿ- ಶೇ.60.57, ಮೂಡುಬಿದಿರೆ- ಶೇ.59.02, ಮಂಗಳೂರು ಉತ್ತರ- ಶೇ.58.33, ಮಂಗಳೂರು ದಕ್ಷಿಣ- ಶೇ.54.49, ಮಂಗಳೂರು- ಶೇ.57.42, ಬಂಟ್ವಾಳ- ಶೇ.62.05, ಪುತ್ತೂರು- ಶೇ.64.06 ಹಾಗೂ ಸುಳ್ಯ- ಶೇ.65.04 ಮತದಾನವಾಗಿದೆ. ಜಿಲ್ಲೆಯ ಸುಳ್ಯ ವಿಧಾನಸಭೆ ಕ್ಷೇತ್ರದಲ್ಲಿ ಶೇ.65.04 ಅತಿ ಹೆಚ್ಚಿನ ಮತದಾನ ನಡೆದ ಕ್ಷೇತ್ರವಾಗಿದೆ.
ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ