ಮಧ್ಯಾಹ್ನ 1 ಗಂಟೆ ವೇಳೆಗೆ ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಶೇ.48.85 ಮತದಾನವಾಗಿದೆ. ಸುಳ್ಯ – 53.13, ಪುತ್ತೂರು – 51.66, ಬಂಟ್ವಾಳ 50.60, ಮೂಡುಬಿದಿರೆ 48.55, ಬೆಳ್ತಂಗಡಿ 48.36, ಮಂಗಳೂರು ಉತ್ತರ – 47.24, ದಕ್ಷಿಣ 43.34, ಮಂಗಳೂರು 45.80 ಶೇಕಡಾವಾರು ಮತ ಚಲಾವಣೆ ಆಗಿದೆ.
ದಕ್ಷಿಣ ಕನ್ನಡ, ಉಡುಪಿ, ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಮತದಾನ ಚುರುಕುಗೊಂಡಿದ್ದರೆ, ಬೆಂಗಳೂರು ನಗರ, ಬೆಂಗಳೂರು ಕೇಂದ್ರ, ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಇನ್ನೂ ಶೇ.25ರಷ್ಟು ದಾಟಿಲ್ಲ. ಆದರೆ ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಬಿರುಸಿನ ಮತದಾನವಾಗುತ್ತಿದೆ. ಬೆಳಗ್ಗೆ 9 ಗಂಟೆ ವೇಳೆ ಒಟ್ಟಾರೆಯಾಗಿ ಶೇ.15.11 ಮತ ಚಲಾವಣೆಯಾಗಿತ್ತು. ಬೆಳ್ತಂಗಡಿ 33.80, ಮೂಡುಬಿದಿರೆ 31.65, ಮಂಗಳೂರು ಉತ್ತರ 31.91, ದಕ್ಷಿಣ 29.63, ಮಂಗಳೂರು 31.3, ಬಂಟ್ವಾಳ 33.8, ಪುತ್ತೂರು 33.16 ಮತ್ತು ಸುಳ್ಯದಲ್ಲಿ 32.34 ಮತದಾನವಾಗಿದೆ. ಒಟ್ಟಾರೆಯಾಗಿ ಬೆಳಗ್ಗೆ 11 ಗಂಟೆ ವರೆಗೆ 32.34 ಮತದಾನವಾಗಿತ್ತು. ಮಧ್ಯಾಹ್ನ 1 ಗಂಟೆ ವೇಳೆಗೆ ಶೇ.48.85 ಮತದಾನವಾಗಿತ್ತು.