Categories: ಬಂಟ್ವಾಳ

ಶಾಂತಿಯುತ ಮತದಾನಕ್ಕೆ ಸಕಲ ಸಿದ್ಧತೆ

ಶಾಂತಿಯುತ ಮತದಾನಕ್ಕೆ ಸಕಲ ಸಿದ್ಧತೆಗಳನ್ನು ನಡೆಸಲಾಗಿದೆ ಜಿಪಂ ಸಿಇಒ ಡಾ. ಸೆಲ್ವಮಣಿ ತಿಳಿಸಿದ್ದಾರೆ.

ಜಾಹೀರಾತು

ಗುರುವಾರ ನಡೆಯುವ ಲೋಕಸಭಾ ಚುನಾವಣೆಯ ಮಸ್ಟರಿಂಗ್ ಕಾರ್ಯ ಬುಧವಾರ ಮೊಡಂಕಾಪು ಶಾಲೆಯಲ್ಲಿ ನಡೆಯಿತು. ಈ ಸಂದರ್ಭ ರಾಜ್ಯ ಚುನಾವಣಾ ಪರಿವೀಕ್ಷಕರು ಬೆಳಿಗ್ಗೆಯಿಂದಲೇ ಮೊಡಂಕಾಪುವಿಗೆ ಆಗಮಿಸಿ, ಜಿಪಂ ಸಿಇಒ ಡಾ. ಸೆಲ್ವಮಣಿ, ಎಆರ್‌ಒ ಮಹೇಶ್, ತಹಶೀಲ್ದಾರ್ ಸಣ್ಣ ರಂಗಯ್ಯ ಮತ್ತು ತಾಪಂ ಮುಖ್ಯಕಾರ್ಯ ನಿರ್ವಹಣಾಧಿಕಾರಿ ರಾಜಣ್ಣ ಅವರಿಂದ ಮಸ್ಟರಿಂಗ್ ಕಾರ್ಯದ ಮಾಹಿತಿ ಪಡೆದರು.

ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,22,166 ಮತದಾರರಿದ್ದು, 1,09,351 ಪುರುಷ ಹಾಗೂ 1,12,810 ಮಹಿಳಾ ಮತದಾರಿದ್ದು, ಐವರು ಇತರ ಮತದಾರರಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 249 ಮತಗಟ್ಟೆಗಳಿವೆ.

ಇವುಗಳಲ್ಲಿ 85 ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಮತಗಟ್ಟೆಗಳನ್ನಾಗಿ ವಿಂಗಡಿಸಿ ಗುರುತು ಮಾಡಲಾಗಿದೆ. 35 ಮತಗಟ್ಟೆಗಳಲ್ಲಿ ಮೈಕ್ರೋ ಅಫೀಸರ್‌ಗಳನ್ನು ನೇಮಕ ಮಾಡಲಾಗಿದೆ. ಅದೇ ರೀತಿ 17 ಕಡೆಗಳಲ್ಲಿ ನೇರವಾಗಿ ವೆಬ್ ಕಾಸ್ಟಿಂಗ್ ಸಿಸ್ಟೆಮ್ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ವಿಶೇಷವಾಗಿ 15 ಮತಗಟ್ಟೆಗಳ ಕಡೆಗಳಲ್ಲಿ ಪೂರ್ಣ ಪ್ರಮಾಣದ ವೀಡಿಯೋ ಗ್ರಾಫರ್‌ಗಳನ್ನು ನೇಮಿಸಲಾಗಿದೆ ಎಂದು ಎಆರ್‌ಒ ಮಹೇಶ್ ಮಾಹಿತಿ ನೀಡಿದರು.

ಬಂಟ್ವಾಳದ ಬೂತ್ ನಂ. 61 ಲೊರೆಟ್ಟೊ ಶಾಲೆ ಮತಗಟ್ಟೆಯನ್ನು ಸಖಿ ಬೂತ್ ಎಂದು ಪರಿಗಣಿಸಿ ಅಲ್ಲಿಗೆ ವಿಶೇಷವಾಗಿ ಪೂರ್ವ ಸಿದ್ಧತೆಗಳನ್ನು ಮಾಡಲಾಗಿದೆ.

ಪ್ರತಿ ಬೂತ್‌ಗಳಲ್ಲಿ ಬಿಎಲ್‌ಒ ಹಾಗೂ ಬೂತ್ ಲೆವಲ್ ಅಸಿಸ್ಟೆಂಟ್ ಅನ್ನು ನೇಮಕ ಮಾಡಲಾಗಿದೆ. ವಿಶೇಷ ಚೇತನರಿಗೆ ವೀಲ್ ಚೇರ್ ಕೂಡಾ ವ್ಯವಸ್ಥೆ ಮಾಡಲಾಗಿದೆ. ಮತಗಟ್ಟೆಗಳಲ್ಲಿರುವ ಸಿಬ್ಬಂದಿಗಳಿಗೆ ನೀರಿನ ವ್ಯವಸ್ಥೆ ಹಾಗೂ ಊಟದ ವ್ಯವಸ್ಥೆ ಜೊತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಬಂಟ್ವಾಳ ತಾಲೂಕಿನ ಲೊರೆಟ್ಟೊದಲ್ಲಿರುವ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 61 ರಲ್ಲಿ ಪುರುಷ ಮತದಾರರ ಸಂಖ್ಯೆ 347. ಮಹಿಳೆಯರು 382. ಒಟ್ಟು 729 ಮತದಾರರಿರುವ ಈ ಮತಗಟ್ಟೆಯನ್ನು ಈ ಬಾರಿ ಚುನಾವಣಾ ಆಯೋಗ ಸಖಿ ಬೂತ್ ಎಂದು ಗುರುತಿಸಿದೆ. ಮಹಿಳಾಸ್ನೇಹಿ ಮತಗಟ್ಟೆಯಾಗಿರುವ ಇಲ್ಲಿ ಮತಗಟ್ಟೆ ಅಧಿಕಾರಿ, ಪೋಲಿಂಗ್ ಆಫೀಸರ್ ಸಹಿತ ಬಹುತೇಕ ಸಿಬಂದಿಗಳು ಮಹಿಳೆಯರಾಗಿದ್ದು, ಈಗಾಗಲೇ ಮತಗಟ್ಟೆಯನ್ನು ಅಲಂಕರಿಸಿಡಲಾಗಿದೆ. ಮಹಿಳೆಯರು ಭಯ, ಭೀತಿ, ಆತಂಕವಿಲ್ಲದೇ ಮುಕ್ತವಾಗಿ ಮತದಾನ ಮಾಡಬಹುದಾಗಿದೆ. ಆ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಉದ್ದೇಶವಿದೆ. ಹಾಗಾಗಿ ಚುನಾವಣೆ ಆಯೋಗ ಈ ಕ್ರಮ ಕೈಗೊಂಡಿದೆ.


ಸುದ್ದಿ, ಲೇಖನಗಳಿಗೆ www.bantwalnews.comಸಂಪಾದಕ: ಹರೀಶ ಮಾಂಬಾಡಿ

ಮೂರನೇ ವರ್ಷದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಬಂಟ್ವಾಳ ತಾಲೂಕಿನ ಸುದ್ದಿಗಳನ್ನು ಒದಗಿಸುವ ಮೊದಲನೇ ವೆಬ್ ಪತ್ರಿಕೆ ಜಾಹೀರಾತುಗಳಿಗೆ ಸಂಪರ್ಕ ಸಂಖ್ಯೆ: 9448548127

 

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.