ಪಿಂಚಣಿದಾರರ ಸಂಘದ ವಾರ್ಷಿಕ ಮಹಾಸಭೆ ಬಿ.ಸಿ.ರೋಡ್ ನ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು. ಪಿಂಚಣಿದಾರರ ಸಂಘದ ಅಧ್ಯಕ್ಷ ಬಿ.ತಮ್ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಿವೃತ್ತ ಉಪಪ್ರಾಂಶುಪಾಲ ಮತ್ತು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ತುಕಾರಾಮ ಪೂಜಾರಿ, ನಿವೃತ್ತ ಉಪನ್ಯಾಸಕ ಮಧುಕರ ಮಲ್ಯ, ಬಂಟ್ವಾಳ ತಾಲೂಕು ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಉಮಾನಾಥ ರೈ ಪಿಂಚಣಿದಾರರ ದ.ಕ.ಜಿಲ್ಲಾ ಪ್ರತಿನಿಧಿ ಮೋಹನ್ ನಂಬಿಯಾರ್, ಉಪಾಧ್ಯಕ್ಷರಾದ ಎ.ಲಿಂಗಪ್ಪ ಕೈಕುಂಜೆ , ವಿ.ಸೋಮಪ್ಪ, ಎನ್.ಕೃಷ್ಣರಾಜ ಶೆಟ್ಟಿ , ಸಂಘಡನಾ ಕಾರ್ಯದರ್ಶಿಗಳಾದ ರಮೇಶ್ ಭಟ್, ಚಂದ್ರಶೇಖರ ಗಟ್ಟಿ ಉಪಸ್ಥಿತರಿದ್ದರು. ಲೋಕನಾಥ ಶೆಟ್ಟಿ, ಕೆ.ಚಂದು ನಾಯಕ್, ಎಂ.ರಾಘವನ್ ನಾಯರ್ ಮತ್ತು ದಿನಕರ್ ಸನ್ಮಾನಿತರ ನ್ನು ಪರಿಚಯಿಸಿದರು.
ಹಿರಿಯ ಪಿಂಚಣಿದಾರ ಸದಸ್ಯರುಗಳಾದ ಎ. ರಾಮಚಂದ್ರ ಭಟ್ ಮೊಡಂಕಾಪು, ಎನ್. ರಾಮಚಂದ್ರ ನರಿಕೊಂಬು, ದೇಜಪ್ಪ ಕೋಡಿ ನರಿಕೊಂಬು, ಬಿ.ರಾಮಚಂದ್ರ ರಾವ್ ಅಲೆತ್ತೂರು, ಕೆ.ಪರಮೇಶ್ವರ ಕರಿಂಗಾಣ, ಕೆ. ರಾಘವಾಚಾರ್ ಸಂಚಯಗಿರಿ, ಕೆ.ನಾರಾಯಣ ನಾಯಕ್ ಕರ್ಪೆ, ತುಕ್ರ ಗಟ್ಟಿ ಸಜಿಪಮುನ್ನೂರು, ನಾರಾಯಣ ಶೆಟ್ಟಿ ಪೂಂಜೆರೆಕೋಡಿ, ಕೆ.ನೇಮು ಮೊಡಂಕಾಪು, ಬಿ.ಕೃಷ್ಣ ಮಂಜೇಶ್ವರ ಮತ್ತು ರವೀಂದ್ರ ನಾಯಕ್ ಮೊಗರ್ನಾಡು ಅವರುಗಳನ್ನು ಸನ್ಮಾನಿಸಲಾಯಿತು.
ಪ್ರಧಾನ ಕಾರ್ಯದರ್ಶಿ ನೀಲೋಜಿ ರಾವ್ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಜಲಜಾಕ್ಷಿ ಕುಲಾಲ್ ಲೆಕ್ಕಪತ್ರ ಮಂಡಿಸಿದರು. ಎನ್.ಶಿವಶಂಕರ್ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ದಾಮೋದರ್ ವಂದಿಸಿ ಸೇಸಪ್ಪ ಮಾಸ್ತರ್ ಕಾರ್ಯಕ್ರಮ ನಿರೂಪಿಸಿದರು.