ಕಾಂಗ್ರೆಸ್ ಪಕ್ಷದ ದಕ್ಷಿಣ ಕನ್ನಡ ಲೋಕಸಭೆ ಅಭ್ಯರ್ಥಿ ಮಿಥುನ್ ರೈ ಗುರುವಾರ ಬಂಟ್ವಾಳ, ಸರಪಾಡಿ, ಕಕ್ಯಪದವು, ಕಕ್ಯೆಬೀಡು,ಕಾವಳಕಟ್ಟೆ,ವಗ್ಗ, ಕಾರಿಂಜಾ,ಪೂಂಜಾ, ಕೆರೆಬಳಿ,ಸಂಗಬೇಟ್ಟು, ಕಲ್ಕುರಿ, ಸಿದ್ದಕಟ್ಟೆ,ಕರೊಪಾಡಿ,ಸಾಲೆತ್ತೂರು, ಕನ್ಯಾನ ಮೊದಲಾದೆಡೆ ರೋಡ್ ಶೋ ನಡೆಸಿ ಮತಯಾಚನೆ ಮಾಡಿದರು. ಬಂಟ್ವಾಳ ಬಡ್ಡಕಟ್ಟೆ ಹನುಮಂತ ದೇವಾಲದಲ್ಲಿ ಪೂಜೆ ಸಲ್ಲಿಸಿದ ಬಳಿಕ ಬಂಟ್ವಾಳ ಪೇಟೆಯಲ್ಲಿ ತೆರೆದ ವಾಹನದಲ್ಲಿ ರೋಡ್ ಶೋ ಮೂಲಕ ಮತಯಾಚನೆ ನಡೆಸಿದರು.
ಈ ಸಂದರ್ಭ ಮಾತನಾಡಿದ ಅವರು, ಈ ಬಾರಿ ಬದಲಾವಣೆ ನಿಶ್ಚಿತ, ಕಾಂಗ್ರೆಸ್ ಗೆಲುವು ಖಚಿತ ಯುವಕರು ಒಗ್ಗಟ್ಟಿನಿಂದ ವಿಶ್ರಾಂತಿ ಪಡೆಯದೆ ಕೆಲಸ ಮಾಡಿ ಎಂದು ಹೇಳಿದರು. ಬದಲಾವಣೆ ಯ ಮಂತ್ರ ಪ್ರತಿಯೊಬ್ಬ ಕಾರ್ಯಕರ್ತನ ಬಾಯಲ್ಲಿಯೂ ಬರಬೇಕಾಗಿದೆ ಎಂದು ಅವರು ಹೇಳಿದರು.
ಮಾಜಿ ಸಚಿವ ಬಿ.ರಮಾನಾಥ ರೈ ಅವರು ಮಾತನಾಡಿ ಅಭಿವೃದ್ಧಿ ಗಾಗಿ ಯುವಕ ಮಿಥುನ್ ರೈ ಅವರಿಗೆ ಬೆಂಬಲ ನೀಡಬೇಕು. ದ.ಕ.ಜಿಲ್ಲೆಯನ್ನು ಮಾದರಿ ಜಿಲ್ಲೆಯಾಗಿ ಪರಿವರ್ತನೆ ಮಾಡಲು ನಿಮ್ಮ ಮತ ಕಾಂಗ್ರೇಸ್ ಗೆ ನೀಡಿ ಎಂದರು.
ಈ ಸಂದರ್ಭ ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ್ ಜೈನ್, ಪ್ರಮುಖರಾದ ಮಾಯಿಲಪ್ಪ ಸಾಲ್ಯಾನ್, ಸುದರ್ಶನ ಜೈನ್, ಅಬ್ಬಾಸ್ ಆಲಿ, ವಾಸು ಪೂಜಾರಿ, ಗಂಗಾಧರ ಪೂಜಾರಿ, ಜನಾರ್ದನ ಚೆಂಡ್ತಿಮಾರ್, ಬೇಬಿ ಕುಂದರ್, ಸುದೀಪ್ ಶೆಟ್ಟಿ, ಬಿ.ಎಚ್.ಖಾದರ್, ಚಿತ್ತರಂಜನ್ ಶೆಟ್ಟಿ, ಜೆ.ಡಿ.ಎಸ್ .ಪ್ರಮುಖರಾದ ಬಿ.ಮೋಹನ್, ಹಾರೂನ್ ರಶೀದ್, ಪಿ.ಎ.ರಹೀಂ ಮತ್ತಿತರರು ಹಾಜರಿದ್ದರು
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…