ಇದು ಟು ಲೆಟ್ ಎಂಬ ಟೈಟಲ್ ಹೊಂದಿರುವ ಸಿನಿಮಾ. ಭಾಷೆ – ತಮಿಳು. ಮನೆ ಇಲ್ಲ, ಬಾಡಿಗೆ ಮನೆಯೇ ಎಲ್ಲ ಎಂದು ಹೊರಟವರು ಅನುಭವಿಸುವ ಕಷ್ಟಗಳ ಕುರಿತು ಕತೆ ಹೇಳುತ್ತದೆ. ರಾ ಚೆಝಿಯನ್ ನಿರ್ದೇಶನ, ಸಂತೋಷ್ ಶ್ರೀರಾಮ್, ಶೀಲಾ ರಾಜ್ ಕುಮಾರ್, ದರುಣ್ ಮೊದಲಾದವರ ಅಭಿನಯ.
ಮಹಾನಗರಗಳಲ್ಲಿ ಬಾಡಿಗೆ ಮನೇಲಿರುವವರ ಪಾಡು ಬಹುತೇಕ ವಲಸೆ ಬಂದ ನಮ್ಮ ನಿಮ್ಮಂತಹವರಿಗೆ ತಿಳಿದದ್ದೇ! ಬ್ಯಾಚುಲರ್ ಆಗಿದ್ದಾಗ,ಕಾಲೇಜಿಗೆ ಹೋಗುತ್ತಿದ್ದಾಗ ,ಮದುವೆ ಆಗಿ ಸಂಸಾರವಂದಿಗ ಆದ ಬಳಿಕ ಒಂದೊಂದು ಹಂತದ ಬಾಡಿಗೆದಾರರ ಅನುಭವ ಒಂದೊಂದು ತರಹ.ಇಂತಹ ಒಂದು ಕುಟುಂಬದ ಪಾಡು ನೈಜವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ.
ಕರೆಂಟು ಹೋದಾಗ ಮಗ ‘ಅಪ್ಪ,ನೀನು ಕತ್ತಲಿಗೆ ಹೆದರ್ತೀಯಾ?’ ‘ಇಲ್ಲ’ ‘ಹಾಗಾದ್ರೆ ನೀನು ಹೆದರುವುದು ಅಮ್ಮನಿಗೆ ಮಾತ್ರವಾ?’ ಎಂಬಂತಹ ಸಂಭಾಷಣೆಗಳು, ದುಡ್ಡು ಹೊಂದಿಸಲು ಡೈರಿಯ ಎಡೆಯಲ್ಲಿಟ್ಟ ನೋಟುಗಳ ಹುಡುಕಿ ಹುಡುಕಿ ಎಣಿಸುವ ಚಿತ್ರಣಗಳು..ಹೀಗೆ ಚಿಕ್ಕ ಚಿಕ್ಕ ಪರಿಣಾಮಕಾರಿ ದೃಶ್ಯಗಳ ಮೂಲಕ ಸಿನಿಮಾ ನಮ್ಮನ್ನು ಆವರಿಸಿಬಿಡುತ್ತದೆ. Amazon prime ನಲ್ಲಿ ಬಂದಿದೆ. ನೋಡಿ. ಖುಷಿಪಡುವ ಸಿನಿಮಾ ಅಲ್ಲ ಇದು. ಆದರೆ ಗಾಢವಾದ ಸಿನಿಮಾ.