Categories: ಬಂಟ್ವಾಳ

ಗುರುಛಾಯೆ, ಗುರುತತ್ವದಡಿ ಶಾಂತಿ, ಸಮಾಧಾನ: ರಾಘವೇಶ್ವರ ಶ್ರೀಗಳು

ಗುರು ಛಾಯೆಯಲ್ಲಿ, ಗುರುತತ್ವದ ಆಸರೆಯಲ್ಲಿ ಶಾಂತಿ ಸಮಾಧಾನ ಸದಾ ಇರಲು ಸಾಧ್ಯ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀರಾಘವೇಶ್ವರಭಾರತೀ ಸ್ವಾಮೀಜಿ ಹೇಳಿದರು.

ಜಾಹೀರಾತು

ಮಂಗಳವಾರ ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರಮಠದಲ್ಲಿ 26ನೇ ಸನ್ಯಾಸಗ್ರಹಣ ದಿನಾಚರಣೆ ಅಂಗವಾಗಿ ನಡೆದ ಜೀವನದಾನ ಕಾರ್ಯಕ್ರಮದ ಧರ್ಮ ಸಭೆಯಲ್ಲಿ ಆಶೀರ್ವಚನ ನೀಡಿದರು.

ಗುರುವಿನ ಕೃಪೆಯ ಮಳೆ ಇದ್ದಾಗ ಬದುಕು ತಂಪಾಗಿರುತ್ತದೆ. ಗುರು ಇರುವವರ ಬದುಕು ತಂಪಿನಿಂದ ಕೂಡಿದ್ದರೆ, ಗುರು ಇಲ್ಲದರವರ ಬದುಕಿನಲ್ಲಿ ತಾಪ ಮಾತ್ರ ಇರುತ್ತದೆ. ಬದುಕಿನ ಭಾರಗಳನ್ನು, ಬಂಧನಗಳನ್ನು ಕಳೆದುಕೊಳ್ಳುವಂತಹದ್ದು ಸನ್ಯಾಸ. ಶಿಷ್ಯ ಭಕ್ತರ ಅಪೇಕ್ಷೆಯಂತೆ ಕುಟುಂಬದ ದೀಪವನ್ನು ಹಚ್ಚಿ ಸನ್ಯಾಸ ಸ್ವೀಕಾರ ದಿನವನ್ನು ಆಚರಿಸುವ ಜತೆಗೆ ಅಭಯವನ್ನು ನೀಡಲಾಗುತ್ತಿದೆ. ಅಗತ್ಯವಿಲ್ಲದ್ದು ನಮ್ಮಲ್ಲಿ ಸೇರಿಕೊಂಡಾಗ ಕಷ್ಟಕೊಡದೆ ಇರುವುದಿಲ್ಲ. ಅದನ್ನು ಕಳೆದುಕೊಂಡಾಗ ಹಗುರವಾಗತ್ತದೆ. ಬೆಳಕು ನೀಡುವ ಸಂಗತಿಯನ್ನು ಎತ್ತರದಲ್ಲಿ ಇಟ್ಟಾಗ ಎಲ್ಲಾ ಕಡೆಗೆ ಪಸರಿಸಿ ಹೆಚ್ಚು ಜನರಿಗೆ ಸಿಗಲು ಸಾಧ್ಯ ಎಂದು ತಿಳಿಸಿದರು.

ಶ್ರೀ ಮಠದ ಜೀವನದಾನ ಟ್ರಸ್ಟ್ ಮೂಲಕ ಬದುಕು ನಡೆಸಲಸಾಧ್ಯದ ಬಡ ಕುಟುಂಬದ ಜವಾಬ್ದಾರಿಯನ್ನು ನೋಡಿಕೊಳ್ಳುವ ಕಾರ್ಯಕ್ರಮದ ಅಂಗವಾಗಿ ಹೊನ್ನಾವರದ ಕಡ್ಲೆಯ ಗೋವಿಂದ ಹೆಗಡೆ ಅವರ ಕುಟುಂಬಕ್ಕೆ ಜೀವನದಾನ ನೀಡಲಾಯಿತು.

ಮಹಾಪಾದುಕೆ ನಿರ್ಮಾಣ ಮಾಡಿದ ಶಿಲ್ಪಿ ಸದಾಶಿವ ಗುಡಿಯಾರ್, ಕೆಲಸದ ಉಸ್ತುವಾರಿ ನೋಡಿಕೊಂಡ ಮುರಳಿಕೃಷ್ಣ ಮಾನಸವನ ಅವರನ್ನು ಗೌರವಿಸಲಾಯಿತು.

ಪದ್ಮಭೂಷಣ ಡಾ.ಗಿರೀಶ ಭಾರದ್ವಾಜ, ಶ್ರೀ ಮಠದ ಕಾರ್ಯನಿರ್ವಾಹಕ ಅಧಿಕಾರಿ ಕೆ. ಜಿ. ಭಟ್, ಹವ್ಯಕ ಮಹಾಮಂಡಲ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಕಾರ್ಯದರ್ಶಿ ಹರಿಪ್ರಸಾದ್ ಪೆರಿಯಾಪ್ಪು, ಜೀವನದಾನ ಮತ್ತು ಯೋಗಪಟ್ಟಾಭಿಷೇಕ ದಿನ ಆಯೋಜನ ಸಮಿತಿ ಅಧ್ಯಕ್ಷ ಹಾರಕರೆ ನಾರಾಯಣ ಭಟ್, ಆಯೋಜನ ಸಮಿತಿ ಪ್ರಧಾನ ಕಾರ್ಯದರ್ಶಿ ಸೇರಾಜೆ ಸುಬ್ರಹ್ಮಣ್ಯ ಭಟ್, ಕೋಶಾಧಿಕಾರಿ ಬಂಗಾರಡ್ಕ ಜನಾರ್ದನ ಭಟ್, ಗಣೇಶ್ ಭಟ್ ಮೈಕೆ ಮತ್ತು ಮಠದ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮುಳ್ಳೇರಿಯ ಮಂಡಲ ಕೋಶಾಧಿಕಾರಿ ಸುಬ್ರಹ್ಮಣ್ಯ ಭಟ್ ಗಬ್ಬಲಡ್ಕ, ಯು. ಎಸ್. ವಿಶ್ವೇಶ್ವರ ಭಟ್ ಕಾರ್ಯಕ್ರಮ ನಿರೂಪಿಸಿದರು.

ಮಹಾ ಪಾದುಕೆ ಪ್ರತಿಷ್ಠೆ:

ಮಾಣಿಮಠದ ಆವರಣದಲ್ಲಿ ಸ್ಥಾಪನೆಯಾಗಲಿರುವ ಶಿಲಾಮಯವಾದ ಶಂಕರರ ಮಹಾಪಾದುಕೆಯನ್ನು ವೇಣೂರು, ಗುರುವಾಯನಕೆರೆ, ಉಪ್ಪಿನಂಗಡಿ, ಪುತ್ತೂರು ಮಾರ್ಗವಾಗಿ ಭವ್ಯ ಶೋಭಾಯಾತ್ರೆ ಮೂಲಕ ಪೆರಾಜೆ ಮಠಕ್ಕೆ ಸೋಮವಾರ ಸಂಜೆ ತರಲಾಯಿತು. ಮಂಗಳವಾರ ಮಧ್ಯಾಹ್ನ ೧೨ ಗಂಟೆಗೆ ಮಾಣಿಮಠದಲ್ಲಿ ಮಹಾಪಾದುಕೆ ಸ್ಥಾಪನೆ ಧಾರ್ಮಿಕ ವಿಧಿವಿಧಾನದ ಮೂಲಕ ನಡೆಯಿತು.

ಯಕ್ಷಗಾನ: ಪಾದುಕಾ ಪ್ರದಾನ ಯಕ್ಷಗಾನ ತಾಳಮದ್ದಳೆ ನಡೆಯಿತು. ಕಲಾವಿದರಾಗಿ ಕುರಿಯ ಗಣಪತಿ ಶಾಸ್ತ್ರಿ, ಉಮಾಕಾಂತ ಭಟ್ ಮೇಲುಕೋಟೆ, ಮೋಹನ ಭಾಸ್ಕರ ಹೆಗಡೆ, ಅಂಬಾಪ್ರಸಾದ ಪಾತಾಳ ಮತ್ತಿತರರು ಭಾಗವಹಿಸಿದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ಮಂಗಳೂರು ಕಡಲ ತೀರ ʼಕಡಲ ಪವನ ಶಕ್ತಿ ಉತ್ಪಾದನಾ ವಲಯʼವಾಗಿ ಅಭಿವೃದ್ಧಿಪಡಿಸಲು ಕೇಂದ್ರಕ್ಕೆ ಮನವಿ

ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)

37 minutes ago