Categories: ನಾಟಕ

ದಶಕಗಳ ಹಿಂದಿನ ಕಂಪನಿ ನಾಟಕಗಳ ನೆನಪಿಸಿದ ಕುರುಕ್ಷೇತ್ರ

ಬಂಟ್ವಾಳ: ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್ ಮತ್ತು ಅಭಿರುಚಿ ಜೋಡುಮಾರ್ಗ ವತಿಯಿಂದ ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಶುಕ್ರವಾರ ರಾತ್ರಿ ಆಯೋಜಿಸಲಾದ ಹೆಗ್ಗೋಡಿನ ಸತ್ಯಶೋಧನ ರಂಗಸಮುದಾಯ ಅರ್ಪಿಸಿದ ಜನುಮದಾಟ ಅಭಿನಯದ ಪೌರಾಣಿಕ, ಸಂಗೀತಮಯ ನಾಟಕ ಕುರುಕ್ಷೇತ್ರ ಪ್ರೇಕ್ಷಕರನ್ನು ದಶಕಗಳ ಹಿಂದಕ್ಕೆ ಕರೆದೊಯ್ಯಿತು.

ಹಿರಿಯ ರಂಗಕರ್ಮಿ ಅಭಿರುಚಿ ಜೋಡುಮಾರ್ಗದ ಮಹಾಬಲೇಶ್ವರ ಹೆಬ್ಬಾರ್, ಸುಂದರ ರಾವ್, ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್ ಅಧ್ಯಕ್ಷ ಕಜೆ ರಾಮಚಂದ್ರ ಭಟ್, ಕಸಾಪ ತಾಲೂಕು ಅಧ್ಯಕ್ಷ ಕೆ. ಮೋಹನ ರಾವ್ ಮತ್ತು ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ ಮಾಂಬಾಡಿ ನಾಟಕಕ್ಕೆ ಚಾಲನೆ ನೀಡಿದರು.

ಬಳಿಕ ಸುಮಾರು ಎರಡೂವರೆ ತಾಸು ಡಾ.ಎಂ.ಗಣೇಶ್ ಹೆಗ್ಗೋಡು ಪರಿಕಲ್ಪನೆ ಮತ್ತು ನಿರ್ದೇಶನದ ಈ ನಾಟಕವನ್ನು ನುರಿತ ಕಲಾವಿದರನ್ನು ಒಳಗೊಂಡ ಯುವಕರ ತಂಡ ದಶಕಗಳ ಹಿಂದಿನ ಕಂಪನಿ ನಾಟಕಗಳಲ್ಲಿರುವ ಪರಿಕರಗಳನ್ನು ಬಳಸಿ ಅಭಿನಯಿಸಿ ಗಮನ ಸೆಳೆದರು. ಕುರುಕ್ಷೇತ್ರ ಯುದ್ಧದ ಪೂರ್ವಭಾವಿ ಸನ್ನಿವೇಶಗಳು ಹಾಗೂ ದ್ರೋಣ, ಅಭಿಮನ್ಯುವಿನ ಅವಸಾನ, ಗದಾಯುದ್ಧದ ಸನ್ನಿವೇಶಗಳನ್ನು ಕಲಾವಿದರು ಕಟ್ಟಿಕೊಟ್ಟರು. ದಾಯಾದಿ ಕಲಹ, ಅಸೂಯೆ, ಮತ್ಸರ, ಸೇಡು ಮೊದಲಾದ ಮನಸ್ಸಿನ ಪಲ್ಲಟಗಳು, ನೋವು, ಕುತಂತ್ರ, ಕುಂತಿ, ಗಾಂಧಾರಿಯ ಪುತ್ರ ವ್ಯಾಮೋಹದಂಥ ಸನ್ನಿವೇಶಗಳು ಇಂದಿಗೂ ಪ್ರಸ್ತುತ ಎಂಬ ಭಾವನೆ ಮೂಡಿಸುವಂತೆ ಮಾಡಲು ಯಶಸ್ವಿಯಾದವು. ನಾಟಕ ಪ್ರದರ್ಶನದ ಬಳಿಕ ಕಲಾವಿದ ಮಂಜು ಸಿರಿಗೇರಿ ನಾಟಕದ ಕುರಿತು ಮಾಹಿತಿ ನೀಡಿದರು. ನ್ಯಾಯವಾದಿ ಅಜಿತ್ ಕುಮಾರ್ ಅಡ್ಡೂರು ಅನಿಸಿಕೆ ವ್ಯಕ್ತಪಡಿಸಿದರು.


ಸುದ್ದಿ, ಲೇಖನಗಳಿಗೆ www.bantwalnews.comಸಂಪಾದಕ: ಹರೀಶ ಮಾಂಬಾಡಿ

ಮೂರನೇ ವರ್ಷದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಬಂಟ್ವಾಳ ತಾಲೂಕಿನ ಸುದ್ದಿಗಳನ್ನು ಒದಗಿಸುವ ಮೊದಲನೇ ವೆಬ್ ಪತ್ರಿಕೆ ಜಾಹೀರಾತುಗಳಿಗೆ ಸಂಪರ್ಕ ಸಂಖ್ಯೆ: 9448548127

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts