Categories: ಬಂಟ್ವಾಳ

ವಿದ್ಯಾರ್ಥಿ ಜೀವನದಲ್ಲೇ ಉದ್ಯೋಗಾವಕಾಶ ಅರಿವು ಅಗತ್ಯ: ಸುರೇಶ್ ಎಂ.ಎಸ್.

ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜಿನಲ್ಲಿ ಶುಕ್ರವಾರ ಮಾನವಿಕ ಸಂಘದ ಆಶ್ರಯದಲ್ಲಿ ಉದ್ಯೋಗಾವಕಾಶ ಮತ್ತು ಭವಿಷ್ಯದ ಕುರಿತು ವಿಶೇಷ ಉಪನ್ಯಾಸ ನಡೆಯಿತು. ಈ ಸಂದರ್ಭ ಉದ್ಯೋಗಗಳ ಆಯ್ಕೆ ಕುರಿತು ಮಾತನಾಡಿದ ಮಂಗಳೂರಿನ ಸರ್ವಜ್ಞ ಐ.ಎ.ಎಸ್ ಎಕಾಡಮಿ ನಿರ್ದೇಶಕ ಸುರೇಶ್ ಎಂ. ಎಸ್, ಹಲವು ವಿಚಾರಗಳ ಕುರಿತು ಮಾರ್ಗದರ್ಶನ ನೀಡಿದರು.

ಜಾಹೀರಾತು

ಜೀವನ ನಿರ್ವಹಣೆಗೆ ಪೂರಕವಾದ ಉದ್ಯೋಗವನ್ನು ಆಯ್ದುಕೊಳ್ಳುವುದು ಇಂದು ಪ್ರತಿಯೊಬ್ಬನ ಅಗತ್ಯವಾಗಿದೆ. ಈ ಉದ್ಯೋಗದ ದಿಕ್ಕುದೆಸೆಗಳು ವಿದ್ಯಾರ್ಥಿ ಜೀವನದಲ್ಲೇ ಅರಿತಿರಬೇಕು. ಮತ್ತು ಅದಕ್ಕೆ ಅಗತ್ಯವಾದ ಪೂರಕವಾದ ಮಾಹಿತಿಯನ್ನು ಪಡೆದುಕೊಳ್ಳಬೇಕು. ಇಂದು ಉದ್ಯೋಗಗಳ ಆಯ್ಕೆಯು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನಡೆಯುತ್ತವೆ ಯಾವುದೇ ರೀತಿಯ ಪರೀಕ್ಷೆಗಳಾಗಲಿ ಅದನ್ನು ಲಘುವೆಂದು ಪರಿಗಣಿಸಬಾರದು. ಅದನ್ನು ಗಂಭಿರವಾಗಿ ಪರಿಭಾವಿಸಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ಸಹಜ. ಉದ್ಯೋಗ ಗಳಿಸುವಲ್ಲಿ ಅದರಲ್ಲಿ ಪಡೆದ ಉತ್ತಮ ಅಂಕಗಳು ಅತೀ ಮುಖ್ಯ ಮಾನದಂಡವಾಗುತ್ತದೆ. ಇದಕ್ಕೆ ನಿರಂತರ ಪರಿಶ್ರಮ, ನಿರ್ದಿಷ್ಠವಾದ ಪೂರ್ವ ತಯಾರಿ ಅಗತ್ಯ ಎಂದವರು ಹೇಳಿದರು ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ವಿಷಯಗಳು, ಅರ್ಹತೆ , ಕಲಿಕೆಯ ವಿಧಾನ ಇವುಗಳನ್ನು ಪ್ರಾತ್ಯಕ್ಷಿಕೆಗಳ ಮೂಲಕ ವಿವರಿಸಿದರು.

ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಿನ್ಸಿಪಾಲ್ ಡಾ. ಪಾಂಡುರಂಗ ನಾಯಕ್ ಮಾತನಾಡಿ ಉದ್ಯೋಗ ಗಳಿಸುವಲ್ಲಿ ಬೇಕಾದ ಪರೀಕ್ಷೆಗಳು, ಅದಕ್ಕೆ ಬೇಕಾದ ಮಾಹಿತಿ ಇವನ್ನು ವಿದ್ಯಾರ್ಥಿಗಳು ಜೀವನದಲ್ಲಿ ಪಡೆಯಲೇಬೇಕು. ಮಾನವಿಕ ವಿಷಯಗಳನ್ನು ಕಲಿಯುತ್ತಿರುವ ವಿದ್ಯಾರ್ಥಿಗಳು ಅತೀ ಅಗತ್ಯವಾಗಿ ಈ ಮಾಹಿತಿ ತಿಳಿದಿರಬೇಕು ಎಂದವರು ಹೇಳಿದರು

ಮಾನವಿಕ ಸಂಘದ ಅಧ್ಯಕ್ಷೆ ಉಪನ್ಯಾಸಕಿ ರೂಪಾ ಅತಿಥಿ ಪರಿಚಯದೊಂದಿಗೆ  ಸ್ವಾಗತಿಸಿದರು. ವಿದ್ಯಾರ್ಥಿನಿ ಸುಷ್ಮಾ ವಂದಿಸಿದರು. ವಿಜೇತ ಕಾರ್ಯಕ್ರಮ ನಿರೂಪಿಸಿದರು ವಿದ್ಯಾರ್ಥಿ ಭರತ್ ಪ್ರಾರ್ಥಿಸಿದರು. ಮಾನವಿಕ ಸಂಘದ ಕಾರ್ಯದರ್ಶಿ ಯಜ್ಞೇಶ್ವರ್ ಉಪಸ್ಥಿತರಿದ್ದರು.


ಸುದ್ದಿ, ಲೇಖನಗಳಿಗೆ www.bantwalnews.comಸಂಪಾದಕ: ಹರೀಶ ಮಾಂಬಾಡಿ

ಮೂರನೇ ವರ್ಷದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಬಂಟ್ವಾಳ ತಾಲೂಕಿನ ಸುದ್ದಿಗಳನ್ನು ಒದಗಿಸುವ ಮೊದಲನೇ ವೆಬ್ ಪತ್ರಿಕೆ For News and Advertisements Phone: 9448548127

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.