ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯನ್ನು ಕಾಯ್ದಕೊಳ್ಳಲು ಕೌಶಲ ಕೇಂದ್ರಿತ ಶಿಕ್ಷಣವು ಇವತ್ತಿನ ಅಗತ್ಯವಾಗಿದೆ. ಬೌದ್ದಿಕ ಚಟುವಟಿಕೆಯಾದ ಪಠ್ಯ ಕೇಂದ್ರಿತ ಶಿಕ್ಷಣದ ಜೊತೆಯಲ್ಲಿ ಸ್ವಾಸ್ಥ್ಯ ಮನಸ್ಸುಗಳನ್ನು ನಿರ್ಮಾಣಮಾಡಬಲ್ಲ ಕೌಶಲ ಕೇಂದ್ರಿತ ಶಿಕ್ಷಣವು ವರ್ತಮಾನದ ತುರ್ತಾಗಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಸದಸ್ಯ ಗೋಪಾಲ್ ಅಂಚನ್ ಅಭಿಪ್ರಾಯಪಟ್ಟರು.
ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜಿನಲ್ಲಿ ರೋಟರಾಕ್ಸ್ ಸನ್ನದು ಪ್ರದಾನ ಸಮಾರಂಭ ಹಾಗೂ ಅರ್ಥಶ್ರಾಸ್ತ್ರ ವಿಭಾಗದ ಸಹಯೋಗದಲ್ಲಿ ಇತ್ತೀಚೆಗೆ ನಡೆದ ಕೌಶಲಾಭಿವೃಧ್ಧಿ ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ವರ್ತಮಾನದ ಮಾನವನ ಬದುಕು ಬಹುಮುಖವಾಗಿ ವಿಸ್ತರಣೆಗೊಳ್ಳತ್ತಿದೆ. ವೈಜ್ಞಾನಿಕತೆ ಬೆಳೆದಂತೆ ಮನುಷ್ಯ ತನ್ನ ಬದುಕಿನ ರೀತಿಯನ್ನು ಬಹುಮುಖಿಯಾಗಿ ವಿನ್ಯಾಸಗೊಳಿಸುತ್ತಾನೆ. ಸ್ಪರ್ಧಾತ್ಮಕ ಯುಗದಲ್ಲಿ ಬದುಕುತ್ತಿರುವ ಮಾನವನು ಕೌಶಲ ಕೇಂದ್ರಿತವಾಗಿ ಮುನ್ನಡೆಯುತ್ತಿದ್ದಾನೆ. ವಿದ್ಯಾರ್ಥಿಗಳು ತಮ್ಮ ಕಲಿಕೆಯ ಹಂತದಲ್ಲೇ ಬದುಕಿಗೆ ಪೂರಕವಾದ ಕೌಶಲಗಳನ್ನು ರೂಧಿಸಿಕೊಳ್ಳವುದು ಅಗತ್ಯ ಎಂದವರು ಹೇಳಿದರು.
ಮುಖ್ಯ ಅತಿಥಿಯಾಗಿ ರೋಟರಿಕ್ಲಬ್‌ನ ವಲಯ ನಾಲ್ಕರ ವಲಯ ಕಾರ್ಯದರ್ಶಿಯಾಗಿರುವ ನಾರಾಯಣ ಹೆಗ್ಡೆ ರೋಟರಿ ಕ್ಲಬ್‌ನ ಸ್ವರೂಪ ಕಾರ್ಯದ ಬಗ್ಗೆ ಮಾಹಿತಿ ನೀಡಿದರು.
ರೋಟರಿ ಕ್ಲಬ್ ಬಂಟ್ವಾಳ ಟೌನ್‌ನ ಅಧ್ಯಕ್ಷ ಉಮೇಶ್ ನಿರ್ಮಲ್ ಎಸ್ ವಿ ಎಸ್ ಕಾಲೇಜು ರೋಟರಾಕ್ಸ ಕ್ಲಬ್‌ನ ನೂತನ ಅಧ್ಯಕ್ಷ ವಿದ್ಯಾರ್ಥಿ ಕಾರ್ತಿಕ್‌ಗೆ ಸನ್ನದು ಪ್ರದಾನ ಮಾಡಿದರು ಎಸ್.ವಿ.ಎಸ್ ಕಾಲೇಜಿನ ಪ್ರಾಂಶುಪಾಲ ಡಾ| ಪಾಂಡುರಂಗ ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿ ಸೂಕ್ತ ತರಬೇತಿ ಮೂಲಕ ಪರಿಪೂರ್ಣ ವ್ಯಕ್ತಿತ್ವ ರೂಪುಗಳ್ಳುತ್ತದೆ ಎಂದರು.
ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಸಕೀನಾ ನಾಝಿರ್ ಸ್ವಾಗತಿಸಿದರು. ವಿದ್ಯಾರ್ಥಿ ಭರತ್ ಪ್ರಾರ್ಥಿಸಿದರು. ರೋಟರಾಕ್ಸ್ ಕ್ಲಬ್‌ನ ಸಂಯೋಜಕ ಚೇತನ್ ಮುಂಡಾಜೆ ಧನ್ಯವಾದ ಸಲ್ಲಿಸಿದರು. ವಿದ್ಯಾರ್ಥಿನಿ ಪ್ರಜ್ಞಾ ಪಿ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಮೂರನೇ ವರ್ಷದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಬಂಟ್ವಾಳ ತಾಲೂಕಿನ ಸುದ್ದಿಗಳನ್ನು ಒದಗಿಸುವ ಮೊದಲನೇ ವೆಬ್ ಪತ್ರಿಕೆ