ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ನಾಟಕಗಳೇ ಹೆಚ್ಚಾಗುತ್ತಿದೆ ಎಂಬ ಮಾತು ಕೇಳಿಬರುತ್ತಿರುವ ಹೊತ್ತಿನಲ್ಲಿ ಬಂಟ್ವಾಳದಲ್ಲಿ ಕಲಾವಿದರ ತಂಡವೊಂದು ಕುರುಕ್ಷೇತ್ರ ಎಂಬ ಕರ್ನಾಟಕದಾದ್ಯಂತ ಜನಮನಸೂರೆಗೊಂಡಿರುವ ಪೌರಾಣಿಕ ನಾಟಕವನ್ನು ಏ.5ರಂದು ಶುಕ್ರವಾರ ಸಂಜೆ 7 ಗಂಟೆಗೆ ಸ್ಪರ್ಶ ಕಲಾ ಮಂದಿರದಲ್ಲಿ ಅಭಿನಯಿಸಲಿದೆ.
ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್ (ರಿ) ಮಂಚಿ ಮತ್ತು ಅಭಿರುಚಿ ಜೋಡುಮಾರ್ಗ ಪ್ರಸ್ತುತಪಡಿಸುವ ಸತ್ಯಶೋಧನಾ ರಂಗ ಸಮುದಾಯ, ಹೆಗ್ಗೋಡು (ರಿ) ಅರ್ಪಿಸುವ ಕುರುಕ್ಷೇತ್ರ ನಾಟಕವೊಂದು ಅಪರೂಪದ ಪ್ರಯೋಗವಾಗಿದ್ದು, ಬಂಟ್ವಾಳ, ಮಂಗಳೂರು ಮತ್ತು ಪುತ್ತೂರು ಸುತ್ತಮುತ್ತಲಿನ ರಂಗಾಸಕ್ತರಿಗೆ ಇದೊಂದು ಸದವಕಾಶ ಎಂದು ಆಯೋಜಕರಾದ ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್ ಅಧ್ಯಕ್ಷ ಕಜೆ ರಾಮಚಂದ್ರ ಭಟ್ ಮತ್ತು ಅಭಿರುಚಿ ಜೋಡುಮಾರ್ಗದ ಮಹಾಬಲೇಶ್ವರ ಹೆಬ್ಬಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿ.ಪುಟ್ಟಸ್ವಾಮಯ್ಯ, ಪಿ.ವಜ್ರಪ್ಪ, ಕಲ್ಲೂರು ಶ್ರೀನಿವಾಸ್ ಹಾಗೂ ಕುವೆಂಪು ಅವರ ಕೃತಿಗಳನ್ನಾಧರಿಸಿದ ಮಹಾನ್ ಸಂಗೀತಮಯ ನಾಟಕವಿದು. ಪರಿಕಲ್ಪನೆ ಮತ್ತು ನಿರ್ದೇಶನ ಡಾ. ಎಂ.ಗಣೇಶ ಹೆಗ್ಗೋಡು ಅವರದ್ದಾದರೆ, ರವಿಕುಮಾರ್ ಬೆಣ್ಣಿ ಮತ್ತು ಭರತ್ ಡಿಂಗ್ರಿ ಸಂಗೀತ ನಿರ್ವಹಣೆ ಮಾಡಲಿದ್ದಾರೆ ಎಂದವರು ತಿಳಿಸಿದ್ದು, ವಕೀಲರ ಸಂಘ ಬಂಟ್ವಾಳ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಬಂಟ್ವಾಳ ಮತ್ತು ಲಯನ್ಸ್ ಕ್ಲಬ್ ಕೊಳ್ನಾಡು – ಸಾಲೆತ್ತೂರು ಪ್ರದರ್ಶನಕ್ಕೆ ಸಹಕಾರ ನೀಡಲಿದೆ ಎಂದು ಅವರು ಹೇಳಿದ್ದಾರೆ.
ಕೆ.ಎನ್.ಆರ್. ಕನ್ಸಸ್ಟ್ರಕ್ಷನ್ಸ್ ಗುತ್ತಿಗೆ ವಹಿಸಿಕೊಂಡಿರುವ ಬಿ.ಸಿ.ರೋಡ್ ಭಾಗದ ಕಾಮಗಾರಿಯಲ್ಲಿ ಸೇತುವೆ ಪೂರ್ಣಗೊಳಿಸಿ ಓಡಾಟ ಆರಂಭಗೊಂಡಿರುವುದು ಮಹತ್ವದ ಹೆಜ್ಜೆಯಾಗಿದ್ದು, ಬಿ.ಸಿ.ರೋಡ್ ಸರ್ಕಲ್…