ಏ.18ರಂದು ನಡೆಯುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಮತಗಟ್ಟೆ ಅಧಿಕಾರಿಗಳನ್ನು ಸಜ್ಜುಗೊಳಿಸಲು ಮತಯಂತ್ರದ ಕುರಿತ ತರಬೇತಿ ಮೊಡಂಕಾಪು ಇನ್ಫೆಂಟ್ ಜೀಸಸ್ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಭಾನುವಾರ ನಡೆಯಿತು.
ಬೆಳಗ್ಗಿನಿಂದ ಸಂಜೆವರೆಗೂ ನಡೆದ ಕಾರ್ಯಕ್ರಮದಲ್ಲಿ ಸೆಕ್ಟರ್ ಅಧಿಕಾರಿಗಳು ಮತಯಂತ್ರ, ವಿವಿ ಪ್ಯಾಟ್ ಮತ್ತು ಮತದಾನ ಪ್ರಕ್ರಿಯೆಗಳಲ್ಲಿ ಆಧುನಿಕ ತಂತ್ರಜ್ಞಾನಗಳ ಕುರಿತು ಮಾಹಿತಿ ನೀಡಿದರು.
ಒಟ್ಟು 21 ಕೊಠಡಿಗಳಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮತಗಟ್ಟೆ ಅಧಿಕಾರಿಗಳಾದ ಪಿಆರ್ ಒ ಮತ್ತು ಎಪಿಆರ್ಒಗಳಿಗೆ ತರಬೇತಿ ನೀಡಲಾಯಿತು. ಇಡೀ ಬಂಟ್ವಾಳ ತಾಲೂಕಿನಿಂದ ಒಟ್ಟು 576 ಮಂದಿ ಭಾಗವಹಿಸಿ ವಿವಿಧ ಮಾಹಿತಿಗಳನ್ನು ಪಡೆದುಕೊಂಡರು.
ಸಹಾಯಕ ಚುನಾವಣಾಧಿಕಾರಿ ಮಹೇಶ್, ತಹಶೀಲ್ದಾರ್ ಸಣ್ಣರಂಗಯ್ಯ, ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಬಂಟ್ವಾಳ ಶಿಕ್ಷಣಾಧಿಕಾರಿ ಶಿವಪ್ರಕಾಶ್ , ಚುನಾವಣ ಉಪತಹಶೀಲ್ದಾರ್ ದಾದಾ ಫೈರೋಜ್, ಪ್ರಥಮ ದರ್ಜೆ ಸಹಾಯಕ ರಾಜಕುಮಾರ್ ಸಹಿತ ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿ ಹಲವು ಅಧಿಕಾರಿಗಳು ಹಾಜರಿದ್ದರು.