ಅಭಿವೃದ್ಧಿ ವಿಷಯದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದ.ಕ.ಜಿಲ್ಲೆ ಗುರುತಿಸುವಂತೆ ಮಾಡುವೆ: ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಭರವಸೆ

ಸುದ್ದಿ, ಲೇಖನಗಳಿಗೆ www.bantwalnews.comಸಂಪಾದಕ: ಹರೀಶ ಮಾಂಬಾಡಿ

ಜಾಹೀರಾತು

ಈ ಬಾರಿಯ ಚುನಾವಣೆಯಲ್ಲಿ ಜನರು ಬದಲಾವಣೆ ಬಯಸಿದ್ದು, ಗೆದ್ದರೆ ಅಭಿವೃದ್ಧಿ ವಿಷಯದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದ.ಕ.ಜಿಲ್ಲೆ ಗುರುತಿಸುವಂತೆ ಮಾಡುವೆ ಎಂದು ದಕ್ಷಿಣ ಕನ್ನಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಭರವಸೆ ನೀಡಿದ್ದಾರೆ.

ಫರಂಗಿಪೇಟೆಯಲ್ಲಿ ಶನಿವಾರ ರಾತ್ರಿ ಕಾಂಗ್ರೆಸ್ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿ, ಬಿಜೆಪಿ ಮತ್ತು ಹಾಲಿ ಸಂಸದರ ಕಾರ್ಯವೈಖರಿಯನ್ನು ಜನರೇ ಟೀಕಿಸುತ್ತಿದ್ದು, ಬದಲಾವಣೆ ಬಯಸಿದ್ದಾರೆ ಎಂದರು.

ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಿಜೆಪಿಯನ್ನು ಟೀಕಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಮಾತನಾಡಿ ನಾವು ನೇರವಾದ ಕೆಲಸ ಮಾಡುವವರು, ಜನರೊಂದಿಗೆ ಬೆರೆಯುವ ಕೆಲಸ ಮಾಡುವ ಕಾರಣ ಜನಾಶೀರ್ವಾದ  ದೊರಕಲಿದೆ ಎಂದು ಆಶಿಸಿದರು.

ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ಡಿ.ಎಸ್. ಗಟ್ಟಿ, ಶಾಹುಲ್ ಹಮೀದ್ ತಾಪಂ  ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ಇಕ್ಬಾಲ್ ಸುಜೀರ್ರಮ್ಲಾನ್ ಮಾರಿಪಳ್ಳ, ಹಾಶಿರ್ ಪೆರಿಮಾರ್, ಆಸಿಫ್ ಇಕ್ಬಾಲ್, ಲಿಡಿಯೋ ಪಿಂಟೋ, ವೃಂದಾ ಪೂಜಾರಿ, ಭಾಸ್ಕರ್ ರೈ, ಕೆ.ಇ.ಎಲ್ ಇಸ್ಮಾಯಿಲ್, ಶೋಭಾ, ಇಕ್ಬಾಲ್ ಸುಜೀರ್, ಮುಹಮ್ಮದ್ ಮೋನು, ಮಮ್ತಾಝ್ ಸುಜೀರು, ಮುಸ್ತಫಾ ಅಮೆಮಾರ್, ಝಾಹಿರ್ ಅಬ್ಬಾಸ್, ರಿಯಾಝ್ ಕುಂಪನಮಜಲು, ರಫೀಕ್ ಪೆರಿಮಾರ್, ಕಿಶೋರ್ ಸುಜೀರು, ಮಜೀದ್ ಪೆರಿಮಾರ್, ಪ್ರಶಾಂತ್ ಕಾಜವ, ಎಂ.ಕೆ. ಮುಹಮ್ಮದ್, ಸಲಾಂ ಮಲ್ಲಿ, ಇಸ್ಮಾಯಿಲ್, ಹಕೀಂ ಮಾರಿಪಳ್ಳ, ಅಬ್ದುಲ್ ಸಮದ್, ಇಮ್ತಿಯಾಝ್ ತುಂಬೆ, ಶುಭೋದಯ ಆಳ್ವ, ಶ್ರೀಶೈಲ, ಜಯಶೀಲ ಉಪಸ್ಥಿತರಿದ್ದರು.

ಮುಹಮ್ಮದ್ ಗಝಾಲಿ ನಿರೂಪಿಸಿದರು.ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ದ.ಕ.ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಉಮ್ಮರ್ ಫಾರೂಕ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ರಫೀಕ್ ಪೆರಿಮಾರ್ ವಂದಿಸಿದರು ಮುಹಮ್ಮದ್ ಗಝಾಲಿ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts