ಪಂಜಿಕಲ್ಲು ಗ್ರಾಮದ ಸುವರ್ಣನಾಡು ಶ್ರೀ ಸಿದ್ದೇಶ್ವರಿ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಮತ್ತು ವರ್ಷಾವಧಿ ಮಹೋತ್ಸವ ಮಾ.30ರಂದು ಶನಿವಾರ ನಡೆಯಲಿದೆ.
ಬೆಳಗ್ಗೆ ಸಾಮೂಹಿಕ ಪ್ರಾಥ೯ನೆ, ಗುರುಗಣಪತಿ ಪೂಜೆ, ಪುಣ್ಯಾ ಪಂಚಗವ್ಯ ಶುದ್ಧಿ, ಗಣಪತಿ ಹವನ, ನಾಗದೇವರಿಗೆ ಕಲಶಾಭಿಷೇಕ, ತಂಬಿಲ ಸೇವೆ, ಆಶ್ಲೇಷಾ ಬಲಿ ಸೇವೆ, ಶ್ರೀ ದೇವರಿಗೆ ನವಕ ಪ್ರಧಾನ ಕಲಶಾಭಿಷೇಕ, ದುರ್ಗಾಹೋಮ, ಮಧ್ಯಾಹ್ನ ಅನ್ನಸಂತಪ೯ಣೆ ಸಾಯಂಕಾಲ ಸಾರ್ವಜನಿಕ ದುರ್ಗಾ ನಮಸ್ಕಾರ ಪೂಜೆ, ಭಜನೆ ಸೇವೆ ಶ್ರೀ ದುರ್ಗಾಂಬಿಕಾ ಸಿದ್ದೇಶ್ವರಿ ಭಜನಾ ಮಂಡಳಿ ಇವರಿಂದ ಪೂಜಾ ಸೇವೆ ರಾತ್ರಿ ಕಲ್ಲುರ್ಟಿ ಕಲ್ಕುಡ ದೈವಗಳಿಗೆ ಗಗ್ಗರ ಸೇವೆ ನಡೆಯಲಿದೆ ಪ್ರಧಾನ ಅರ್ಚಕ ರಾಧಾಕೃಷ್ಣ ಭಟ್ ಪೆದಮಲೆ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀ ವಿಶ್ವನಾಥ ಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)