Categories: ಬಂಟ್ವಾಳ

ಉತ್ತಮ ಫಲಿತಾಂಶಕ್ಕೆ ಪೋಷಕರ ಜವಾಬ್ದಾರಿಯೂ ಪ್ರಮುಖ: ಡಾ. ಪಾಂಡುರಂಗ ನಾಯಕ್

ಬಂಟ್ವಾಳ: ವಿದ್ಯಾರ್ಥಿಯಾದವನು ತನ್ನ ಕಲಿಕೆಯ ಸಮಯದಲ್ಲಿ ವಿಶೇಷ ಆಸಕ್ತಿಯೊಂದಿಗೆ ಅಹರ್ನಿಶಿ ಪ್ರಯತ್ನವನ್ನು ಮಾಡಬೇಕು ಆಧುನಿಕ ಆಕರ್ಷಣೆಯಿಂದ ತನ್ನ ಕರ್ತವ್ಯದ ಕಡೆ ಗಮನ ನೀಡಬೇಕು. ಓರ್ವ ವಿದ್ಯಾರ್ಥಿ ಉತ್ತಮ ಫಲಿತಾಂಶ ಪಡೆಯುವಲ್ಲಿ ಆತನ ದುಡಿಮೆಯೊಂದಿಗೆ ಪೋಷಕರ ಮತ್ತು ಶಿಕ್ಷಕರ ಜವಾಬ್ದಾರಿಯು ಅಷ್ಟೇ ಮುಖ್ಯವಾದುದು. ಎಂದು ಬಂಟ್ವಾಳದ ಎಸ್.ವಿ.ಎಸ್ ಕಾಲೇಜಿನ ಪ್ರಿನ್ಸಿಪಾಲ್ ಡಾ. ಪಾಂಡುರಂಗ ನಾಯಕ್ ಹೇಳಿದರು

ಅವರು ಇಂದು ಕಾಲೇಜಿನ ಶಿಕ್ಷಕ-ರಕ್ಷಕ ಸಂಘದ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಸಂಸ್ಥೆಯೊಂದರಲ್ಲಿರುವ ನಿಯಾಮಾವಳಿಗಳು ಇರುವುದು ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಅದನ್ನು ಪಾಲಿಸಿ ಕಲಿತವರಿಗೆ ಯಶಸ್ಸು ನಿಶ್ಚಿತ. ಆದರೆ ಮೊಬೈಲ್ ನಂತಹ ಆಧುನಿಕ ಸಾಧನಗಳು ಇಂದು ಮಕ್ಕಳ ಮನೋಸ್ಥಿತಿ ಹಾಳು ಮಾಡುತ್ತಿರುವುದು ವಿಷಾದನೀಯ. ಹೋಸ ಜೀವನ ಶೈಲಿಯ ಕಡೆಗೆ ತಿರುಗಿದಂತೆ ನೋಡಿಕೊಳ್ಳವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ. ವಿದ್ಯಾರ್ಥಿ ಉತ್ತಮ ಫಲಿತಾಂಶ ಪಡೆದಾಗ ಆತನ ಸಂತೋಷದೊಂದಿಗೆ ಹೆತ್ತವರಿಗೆ ಮತ್ತು ಕಾಲೇಜಿಗೆ ಕೀರ್ತಿ ಬರುತ್ತದೆ ಎಂದವರು ಹೇಳಿದರು. ಕಾಲೇಜಿನಲ್ಲಿ ಇವರೆಗೆ ನಡೆದ ಕಾರ್ಯಕ್ರಮಗಳು ಮತ್ತು ವಿದ್ಯಾರ್ಥಿಗಳ ಸಾಧನೆಯನ್ನು ಪ್ರಾತ್ಯಕ್ಷಿಕೆಯೊಂದಿಗೆ ವಿವರಿಸಿದರು.

ಮಂಗಳೂರು ವಿಶ್ವವಿದ್ಯಾನಿಲಯದ ೨೦೧೭-೧೮ನೇ ಸಾಲಿನ ಬಿ.ಎಸ್ಸಿ ಪರೀಕ್ಷೆಯಲ್ಲಿ ೪ನೇ ರ್‍ಯಾಂಕ್ ಗಳಿಸಿದ ಸುರಕ್ಷಾ ಮತ್ತು ೯ನೇ ರ್‍ಯಾಂಕ್ ಗಳಿಸಿದ ನತಾಷಾ ಜಾಸ್ಮಿನ್ ಡಿಸೋಜ ಇವರನ್ನು ಮತ್ತು ಪಿ.ಎಚ್.ಡಿ ಪದವಿ ಪಡೆದ ಕಾಲೇಜಿನ  ಜೀವಶಾಸ್ತ್ರ ಉಪನ್ಯಾಸಕಿಯಾದ ಡಾ| ದಾಕ್ಷಯಿಣಿ ಹಾಗೂ ಕಾಲೇಜಿನಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾಥಿಗಳು ಮತ್ತು ಸ್ಟೂಡೆಂಟ್ ಫೆಕಲ್ಟಿ ತರಗತಿ ನಡೆಸಿದ ವಿದ್ಯಾರ್ಥಿಗಳನ್ನು ಈ ಸಂದರ್ಭ ಗೌರವಿಸಲಾಯಿತು. ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ರೊನಾಲ್ಡ್ ಡಿಸೋಜ ಮಹಾಸಭೆಯ ಅಧ್ಯಕ್ಷತೆ ವಹಿಸಿ ವರದಿ ವರ್ಷದಲ್ಲಿ ತನಗೆ ಕೊಟ್ಟ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.

ಸಂಘದ ನೂತನ ಕಾರ್ಯಕಾರಿ ಸಮಿತಿಯನ್ನು ಈ ಸಂದರ್ಭದಲ್ಲಿ ರಚಿಸಲಾಯಿತು. ಅಧ್ಯಕ್ಷರಾಗಿ ರೊನಾಲ್ಡ್ ಡಿಸೋಜ ಪುನರಾಯ್ಕೆಯಾದರು. ಉಪಪ್ರಿನ್ಸಿಪಾಲ್ ಡಾ. ಎಚ್ ಆರ್  ಸುಜಾತ  ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮ ಪಾಲಕ ಪ್ರೊ ನಾರಾಯಣ ಭಂಡಾರಿ ವಂದಿಸಿದರು. ಪ್ರೊ ನಾರಾಯಣ ಭಂಡಾರಿ ನೂತನ ಕಾರ್ಯಕಾರಿ ಸಮಿತಿಯ ರಚನೆಯನ್ನು ನಿರ್ವಹಿಸಿದರು. ಶಾಂತಿ ರೋಚಿ ಸಕೀನಾ ನಾಝಿರ್ ಪುರಸ್ಕಾರಗೊಂಡ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಕಿಟ್ಟು ರಾಮಕುಂಜ ಕಾರ್ಯಕ್ರಮ ನಿರೂಪಿಸಿದರು.

 

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts