Categories: ಕಲ್ಲಡ್ಕ

ಕಲ್ಲಡ್ಕದಲ್ಲಿ ಮಾತೆಯರಿಗೆ ಪಾದಪೂಜೆ, ಮಕ್ಕಳ ಹುಟ್ಟುಹಬ್ಬ ಆಚರಣೆ

ಶ್ರೀರಾಮ ಶಿಶುಮಂದಿರ ಕಲ್ಲಡ್ಕದಲ್ಲಿ ಮಾತೆಯರ ಪಾದಪೂಜೆ ಮತ್ತು ಮಾರ್ಚ್, ಎಪ್ರಿಲ್, ಮೇ ತಿಂಗಳಲ್ಲಿ ಹುಟ್ಟಿದ ಮಕ್ಕಳ ಸಾಮೂಹಿಕ ಹುಟ್ಟುಹಬ್ಬ ನಡೆಯಿತು.

ಮಕ್ಕಳಿಗೆ ತಾಯಂದಿರ ಕೇವಲ ಪಾದಗಳು ಮಾತ್ರ ಕಾಣುವರೀತಿಯಲ್ಲಿ ಪರದೆಯನ್ನುಕಟ್ಟಲಾಗಿತ್ತು. ಪುಟಾಣಿಗಳು ಅಮ್ಮನ ಪಾದವನ್ನೇನೋಡಿ ಗುರುತಿಸಿ ಅದರ ಪಕ್ಕದಲ್ಲಿ ಕುಳಿತು ಕೊಳ್ಳುತ್ತಿದ್ದರು. ನಂತರ ಪರದೆಯನ್ನು ಬಿಚ್ಚಲಾಗಿತ್ತು. ಎಲ್ಲಾ ಪುಟಾಣಿಗಳು ಅವರ ಅಮ್ಮನ ಪಾದಗಳಿಗೆ ನೀರು ಹಾಕಿ ಅರಶಿನ ಕುಂಕುಮ ಹಚ್ಚಿ ಪುಷ್ಪವನ್ನು ಅರ್ಪಿಸಿ ಪಾದಪೂಜೆ ಮಾಡಿದರು.

ಮಕ್ಕಳಿಗೆ ಆರತಿಎತ್ತಿ,ತಿಲಕಇಟ್ಟು, ಅಕ್ಷತೆ ಹಾಕಿ, ಸಿಹಿಯನ್ನು ನೀಡಿ ಮಾತೆಯರು ಶುಭ ಹಾರೈಸಿ ೫೨ ಮಕ್ಕಳ ಹುಟ್ಟುಹಬ್ಬವನ್ನು ಆಚರಿಸಲಾಯಿತು.

ವಸಂತ ಮಾಧವ ನಾಗೇಶ್ ಕಲ್ಲಡ್ಕಹಾಗೂ ಡಾ. ಕಮಲಾ ಭಟ್ ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ೧೪೧ ಮಾತೆಯರು ಭಾಗವಹಿಸಿದರು. ಕಾರ್ಯಕ್ರಮವನ್ನು ವಿದ್ಯಾ ಸ್ವಾಗತಿಸಿ, ರೋಹಿಣಿ ಅಶೋಕ್ ವಂದಿಸಿ, ಪರಿಮಳ ನಿರೂಪಿಸಿದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts