Categories: ಸಿನಿಮಾ

ತಂದೆ, ಮಗನ ಭಾವನೆಗಳ ಬಂಧನ – Like Father, Like Son

ಲೈಕ್ ಫಾದರ್, ಲೈಕ್ ಸನ್(Like Father Like Son) 

2013ರಲ್ಲಿ ಬಿಡುಗಡೆಯಾದ ಈ ಜಪಾನೀ ಚಿತ್ರ ಕ್ಯಾನೆ ಚಿತ್ರೋತ್ಸವದಲ್ಲಿ ಪ್ರಶಸ್ತಿ ಪಡೆದದ್ದಷ್ಟೇ ಅಲ್ಲ, ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನೂ ಪಡೆದಿದೆ. ಚಿತ್ರವನ್ನೇಕೆ ನೋಡಬೇಕು ಎಂಬುದರ ಕುರಿತು ಬರೆದಿದ್ದಾರೆ ಪ್ರಶಾಂತ್ ಭಟ್

ಜಾಹೀರಾತು

 

  • ಪ್ರಶಾಂತ್ ಭಟ್

ಅವನೊಬ್ಬ ಬಿಸಿನೆಸ್‌ಮೆನ್.ತನ್ನ ಕೆಲಸದಲ್ಲಿ ಮುಳುಗಿ ಪುಟ್ಟ ಮಗ,ಪತ್ನಿಗೆ ಸಮಯ ಕೊಡಲು‌ ಕಷ್ಟಪಡುತ್ತಿರುತ್ತಾನೆ. ಮಗ ಹೀಗೇ ಆಗಲಿ ಅಂತ ಅವನಾಸೆ. ಒಂದು ದಿನ ಕೆಲಸದಿಂದ ಮರಳಬೇಕಾದರೆ ಅವನಿಗೆ ಪತ್ನಿ ಅವರ ಮಗ ಹುಟ್ಟಿದ ಆಸ್ಪತ್ರೆಯಿಂದ ಪೋನ್ ಬಂದಿತ್ತು. ಹೆರಿಗೆಯಾದ ಬಳಿಕ ಒಂದು ತಪ್ಪು ನಡೆದು ಮಕ್ಕಳು ಅದಲುಬದಲಾಗಿದೆ ಎಂದು ತಿಳಿಸುತ್ತಾಳೆ. ಅವರು ,ಅವರ ನಿಜವಾದ ಮಗ ಇರುವ ದಂಪತಿಗಳ ಭೇಟಿಯಾಗುತ್ತಾರೆ. ಆ ದಂಪತಿಗಳು ಬಡವರು, ಆದರೆ ಅವರೊಳಗೂ ಅವರ ಮಕ್ಕಳೊಂದಿಗೂ ಸಂಬಂಧ ಚೆನ್ನಾಗಿದೆ. ಹಲವಾರು ಭೇಟಿಗಳ‌ ನಂತರ ಒಂದು ದಿನದ ಮಟ್ಟಿಗೆ ತಮ್ಮ ತಮ್ಮ ಮಕ್ಕಳ ಬಳಿ ಆ ಇಬ್ಬರು ದಂಪತಿಗಳು ಸಮಯ ಕಳೆಯುತ್ತಾರೆ.
ಈಗ ಪ್ರಶ್ನೆ ಹುಟ್ಟಿನಲ್ಲಿ ತನ್ನದಾದ ಆದರೆ ಬೇರಡಯವರ ಜೊತೆ ಬೆಳೆದ ಮಗುವನ್ನು ತನ್ನದಾಗಿಸಿಕೊಳ್ಳುವುದಾ? ಅಥವಾ ತಮ್ಮೊಡನೇ ಬೆಳೆದ ಇನ್ನೊಬ್ಬರ ಮಗುವನ್ನು ಅಪ್ಪಿಕೊಳ್ಳುವುದಾ?
ಇಡೀ ಸಿನಿಮಾ ಒಂದು ದೊಡ್ಡ ಕವಿತೆಯಂತಿದೆ.

ತಂದೆ ತಾಯಂದಿರ ಭಾವನೆಗಳು,ಪುಟ್ಟ ಮಕ್ಕಳ ಓಡಾಟಗಳು,ಮಿಡಿವ ಸಂಗೀತ ಎಲ್ಲವೂ ಕಾಡುತ್ತವೆ.

ವಿಳಾಸ ಗೊತ್ತಾಗದೆ ಕವಲಾಗುವ ದಾರಿಯಲ್ಲಿ ಎಡಕ್ಕೆ ತಿರುಗಲಾ ಬಲಕ್ಕೆ ತಿರುಗಲಾ ಅಂತ ಯೋಚಿಸುವ ಗಳಿಗೆ ಇದೆಯಲ್ಲ ಅದು ಬದುಕಿನ ನಿರ್ಧಾರಗಳಲ್ಲೂ ಬಂದರೆ…

******************************************************************************************************

ಸುದ್ದಿ, ಲೇಖನಗಳಿಗೆ www.bantwalnews.comಸಂಪಾದಕ: ಹರೀಶ ಮಾಂಬಾಡಿ

ಮೂರನೇ ವರ್ಷದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಬಂಟ್ವಾಳ ತಾಲೂಕಿನ ಸುದ್ದಿಗಳನ್ನು ಒದಗಿಸುವ ಮೊದಲನೇ ವೆಬ್ ಪತ್ರಿಕೆ

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts