ಬಂಟ್ವಾಳ ತಾಲೂಕಿನ ಮಂಚಿಸುಳ್ಯ ಶ್ರೀ ಮಹಾದೇವ ದೇವರ ವಾರ್ಷಿಕ ಜಾತ್ರಾ ಮಹೋತ್ಸವ ಮತ್ತು ಶ್ರೀ ವ್ಯಾಘ್ರಚಾಮುಂಡಿ ದೈವದ ನೇಮವು ಮಂಕುಡೆ ರಾಮಣ್ಣ ಆಚಾರ್ ಉಪಸ್ಥಿತಿಯಲ್ಲಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿ ಹಿರಿತನದಲ್ಲಿ ನಡೆಯಲಿದೆ.
23ರಿಂದ ಆರಂಭಗೊಂಡು 25ರವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಣೇಶ ಐತಾಳ್ ಚೌಕದಪಾಲು, ಭಕ್ತ ಮಂಡಳಿ ಅಧ್ಯಕ್ಷ ಕೇಶವ ರಾವ್ ನೂಜಿಪ್ಪಾಡಿ, ಭಜನಾ ಮಂಡಳಿ ಅಧ್ಯಕ್ಷ ಲೋಹಿತ್ ಸುಳ್ಯ ಮತ್ತು ಮಹಿಳಾ ವಿಭಾಗದ ಅಧ್ಯಕ್ಷೆ ವಿಜಯಾ ದಯಾನಂದ ಸುಳ್ಯ ತಿಳಿಸಿದ್ದಾರೆ.
18ರಂದು ಬೆಳಗ್ಗೆ ಗೊನೆ ಕಡಿಯುವ ಮುಹೂರ್ತದೊಂದಿಗೆ ಕಾರ್ಯಕ್ರಮಗಳು ಆರಂಭಗೊಂಡಿದ್ದು, 24ರಂದು ಸಾಮೂಹಿಕ ಅಪ್ಪದ ಪೂಜೆ, ಸಾಮೂಹಿಕ ಆಶ್ಲೇಷಾ ಬಲಿ ಉತ್ಸವ, ರಾತ್ರಿ ಮಹಾಗಣಪತಿ, ಮಹಾದೇವ ದೇವರಿಗೆ ರಂಗಪುಜೆ, ಪ್ರಸಾದ ಭೋಜನ, ಶ್ರೀ ದೇವರ ಬಲಿ ಹೊರಟು ಉತ್ಸವಾದಿಗಳು ನಡೆಯಲಿವೆ. 25ರಂದು ವಿವಿಧ ಧಾರ್ಮಿಕ ಕಾರ್ಯಮ್ರಗಳು ನಡೆಯಲಿದ್ದು, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ವ್ಯಾಘ್ರಚಾಮುಂಡಿ ದೈವದ ನೇಮೋತ್ಸವ, ಪ್ರಸಾದ ಭೋಜನ ಬಳಿಕ ಹನುಮಗಿರಿ ಮೇಳದಿಂದ ಮಾಯಾವಿಹಾರಿ ಯಕ್ಷಗಾನ ಬಯಲಾಟ ನಡೆಯಲಿದೆ.