ರಾಜಕೀಯ ಸಂಬಂಧಿ ಜಾಹೀರಾತು ಮತ್ತು ಭಿತ್ತಿಪತ್ರಗಳ ಮೇಲೆ ಮುದ್ರಣಕಾರರು ತಮ್ಮ ಹಾಗೂ ಜಾಹೀರಾತು ನೀಡಿದವರ ವಿವರ ಪ್ರಕಟಿಸದಿದ್ದರೆ ಸಮಸ್ಯೆ ಎದುರಿಸಬೇಕಾದೀತು!!
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರನ್ನು ಸೆಳೆಯಲು ಜಾಹೀರಾತು ನೀಡುವುದು, ಭಿತ್ತಿಪತ್ರ ಹಂಚುವುದು ಸೇರಿ ಇನ್ನಿತರ ಕಾರ್ಯಗಳ ಮೇಲೆ ನಿಗಾವಹಿಸಲಾಗುತ್ತದೆ. ರಾಜಕೀಯ ಸಂಬಂಧಿ ಜಾಹೀರಾತು ಮತ್ತು ಭಿತ್ತಿಪತ್ರ ಮುದ್ರಣಕ್ಕೆ ಸೂಚಿಸುವವರ ವಿವರ ನೀಡಬೇಕಾಗುತ್ತದೆ. ಅಲ್ಲದೆ, ಜಾಹೀರಾತು ಮತ್ತು ಭಿತ್ತಿಪತ್ರಗಳ ಮೇಲೆ ಮುದ್ರಣಕಾರರು ಮತ್ತು ಜಾಹೀರಾತು ನೀಡಿದವರ ವಿವರ ಆಯೋಗಕ್ಕೆ ಒದಗಿಸಬೇಕಾಗುತ್ತದೆ.
ಜಾಹೀರಾತು ಪ್ರಕಟಿಸುವುದಕ್ಕೂ ಮುನ್ನ ಸಂಬಂಧಪಟ್ಟ ಚುನಾವಣಾ ತಂಡಗಳಿಂದ ಅನುಮತಿ ಪಡೆಯಬೇಕು ಹಾಗೂ ಅದನ್ನು ಚುನಾವಣಾಧಿಕಾರಿಗಳು ಅನುಮೋದಿಸಬೇಕು. ಒಂದು ವೇಳೆ ಅನುಮತಿ ಪಡೆಯದಿದ್ದರೆ ಅಂತಹ ಮುದ್ರಣಕಾರರಿಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಲಾಗುವುದು ಎಂಬುದು ಆಯೋಗದ ಮಾಹಿತಿ.