ಬಂಟ್ವಾಳ ತಾಲೂಕಿನ ಮಂಚಿ ಕುಕ್ಕಾಜೆಯಲ್ಲಿರುವ ಬಿ.ವಿ. ಕಾರಂತ ರಂಗಭೂಮಿಕಾ ಟ್ರಸ್ಟ್ ವತಿಯಿಂದ ಕರ್ನಾಟಕ ನಾಟಕ ಅಕಾಡೆಮಿ ಪ್ರಾಯೋಜಕತ್ವದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಮಾ.27ರಂದು ಸಂಜೆ 4.30ಕ್ಕೆ ಮಂಚಿ ಲಯನ್ಸ್ ಸಭಾಭವನದಲ್ಲಿ ನಡೆಯಲಿದೆ. ಲಯನ್ಸ್ ಕ್ಲಬ್ ಸಾಲೆತ್ತೂರು ಇದಕ್ಕೆ ಸಹಕಾರ ನೀಡಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಕಜೆ ರಾಮಚಂದ್ರ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿ.ವಿ.ಕಾರಂತ (ಬಾಬುಕೋಡಿ ವೆಂಕಟರಮಣ ಕಾರಂತ). ಇವರು ಮಂಚಿಯ ಬಾಬುಕೋಡಿಯವರು ಹಾಗೂ ವಿಶ್ವಮಾನ್ಯ ನಾಟಕಕಾರರು. ಮಂಚಿಯಲ್ಲಿ ಕಾರಂತ ಹೆಸರಿನ ಟ್ರಸ್ಟ್ ಕಾರ್ಯಾಚರಿಸುತ್ತಿದ್ದು, ಪ್ರತಿ ವರ್ಷ ಬಿ.ವಿ.ಕಾರಂತ ನೆನಪಿನಲ್ಲಿ ನಾಟಕೊತ್ಸವ ಆಯೊಜಿಸುತ್ತಿದೆ.
ಸಂಜೆ 4.30ಕ್ಕೆ ಪುತ್ತೂರಿನ ರಂಗದೀಪ ತಂಡದಿಂದ ರಂಗಗೀತೆಗಳ ಬಳಿಕ 5.15ಕ್ಕೆ ಸಭಾ ಕಾರ್ಯಕ್ರಮ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಬಾಸುಮ ಕೊಡಗು ಅಧ್ಯಕ್ಷತೆಯಲ್ಲಿ ನಡೆಯುವುದು. ಹಿರಿಯ ರಂಗನಟ, ಸಂಘಟಕ ಮಹಾಬಲೇಶ್ವರ ಹೆಬ್ಬಾರ ಆಧುನಿಕ ರಂಗಭೂಮಿ ಕುರಿತು ಉಪನ್ಯಾಸ ನೀಡುವರು. ಈ ಸಂದರ್ಭ ಹಿರಿಯ ರಂಗ ಕಲಾವಿದ ಮಂಜು ವಿಟ್ಲ ಅವರನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ ಮಾಂಬಾಡಿ, ರಂಗಕರ್ಮಿ, ಪತ್ರಕರ್ತ ಮೌನೇಶ ವಿಶ್ವಕರ್ಮ, ಲಯನ್ಸ್ ಕ್ಲಬ್ ಸಾಲೆತ್ತೂರು ಮಂಚಿ ಅಧ್ಯಕ್ಷ ಮನರಂಜನ್ ಭಾಗವಹಿಸುವರು ಎಂದು ಅವರು ತಿಳಿಸಿದ್ದಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…