ಸ್ತ್ರೀ ಸಂವೇದನೆಯ ಹಿನ್ನೆಲೆಯಲ್ಲಿ ಮೂಡಿ ಬಂದ ಕೃತಿ ಮೌಲ್ಯ ಯುತವಾಗಿ ಗುರುತಿಸಲ್ಪಡುತ್ತದೆ. ಮಹಿಳಾ ಸಾಹಿತ್ಯದ ಕೃತಿ ಗಳಿಗೆ ಪ್ರೋತ್ಸಾಹ ದ ಅಗತ್ಯವಿದೆ ಎಂದು ಉದಯೋನ್ಮುಖ ಕವಯತ್ರಿ ಪಲ್ಲವಿ ಕಾರಂತ್ ಹೇಳಿದರು.
ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಯ ಅಂಗವಾಗಿ ‘ ಮಹಿಳೆ ಮತ್ತು ಸಾಹಿತ್ಯ ‘ ಎಂಬ ವಿಷಯದಲ್ಲಿ ಮಾತನಾಡಿದರು. ರೋಟರಿ ಅಸಿಸ್ಟೆಂಟ್ ಗವರ್ನರ್ ಪ್ರಕಾಶ್ ಕಾರಂತ್ ಕ್ಲಬ್ ನ ಮಹಿಳಾ ಸದಸ್ಯರನ್ನು ಗೌರವಿಸಿ ಶುಭ ಹಾರೈಸಿದರು.ರೋಟರಿ ಕ್ಲಬ್ ಬಂಟ್ವಾಳ ಟೌನ್ ಅಧ್ಯಕ್ಷರಾದ ಉಮೇಶ್ ನಿರ್ಮಲ್ ಸಮಾರಂಭದಅಧ್ಯಕ್ಷತೆ ವಹಿಸಿ ಕಾರ್ಯದರ್ಶಿ ಜಯರಾಜ್ ಬಂಗೇರ ವಂದಿಸಿದರು.