ಬಂಟ್ವಾಳ: ಬಂಟ್ವಾಳ ತಾಲೂಕಿನ ಅನುದಾನಿತ ಮತ್ತು ಅನುದಾನ ರಹಿತ ಶಾಲಾ ಶಿಕ್ಷಕರ ಕನ್ನಡ ಮುಂಭಡ್ತಿ ವೇತನದ ಕುರಿತು ಮಾ.23 ರಂದು ಅಪರಾಹ್ನ 2ಕ್ಕೆ ಪಾಣೆಮಂಗಳೂರು ಎಸ್.ವಿ.ಎಸ್. ಶಾಲೆಯಲ್ಲಿ ಸಮಾಲೋಚನಾ ಸಭೆ ಜರಗಲಿದೆ.
1974ರಿಂದ 1997ರ ವರೆಗೆ ಸೇವೆಗೈದ ಹಾಗೂ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಶಿಕ್ಷಕ/ ಶಿಕ್ಷಕಿಯರಿಗೆ ಹೆಚ್ಚುವರಿ ವೇತನ ಭಡ್ತಿ ನೀಡುವಂತೆ ಹೈಕೋರ್ಟ್ ಆದೇಶ ನೀಡಿದ ಹಿನ್ನೆಲೆಯಲ್ಲಿ ಈ ಸಭೆ ಕರೆಯಲಾಗಿದ್ದು, ಶಿಕ್ಷಕರು ಭಾಗವಹಿಸಬೇಕಾಗಿ ನಿವೃತ್ತ ಶಿಕ್ಷಕ ಕೆ. ಜಯಂತ ನಾಯಕ್ ಅವರು ತಿಳಿಸಿದ್ದು, ಹೆಚ್ಚಿನ ಮಾಹಿತಿಗಾಗಿ 994573640 ಸಂಪರ್ಕಿಸಬಹುದಾಗಿದೆ.