Categories: ಬಂಟ್ವಾಳ

ಚುನಾವಣಾ ಆಯೋಗ ಹೈಟೆಕ್ – ನೀತಿ ಸಂಹಿತೆ ಕುರಿತು ಕಟ್ಟುನಿಟ್ಟು

ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ

ಮೂರನೇ ವರ್ಷದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಬಂಟ್ವಾಳ ತಾಲೂಕಿನ ಸುದ್ದಿಗಳನ್ನು ಒದಗಿಸುವ ಮೊದಲನೇ ವೆಬ್ ಪತ್ರಿಕೆ

ಪ್ರತಿ ಚುನಾವಣೆಗೂ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳುವ ಉದ್ದೇಶದಿಂದ ತನ್ನ ನೀತಿಗಳನ್ನು ಅಪ್ ಡೇಟ್ ಮಾಡುತ್ತಿರುವ ಚುನಾವಣಾ ಆಯೋಗ, ಈ ಬಾರಿ ತಂತ್ರಜ್ಞಾನದ ಸದ್ಬಳಕೆಯೊಂದಿಗೆ ಚುನಾವಣೆ ಎದುರಿಸಲು ಸನ್ನದ್ಧವಾಗಿದೆ. ಬಂಟ್ವಾಳ ತಾಲೂಕಿನ ವಿಧಾನಸಭೆಯ ಬಂಟ್ವಾಳ ಕ್ಷೇತ್ರಕ್ಕೆ ಒಳಪಟ್ಟಂತೆ ಇರುವ 249 ಮತಗಟ್ಟೆಗಳಲ್ಲಿ 21 ಸೆಕ್ಟರ್ ಅಧಿಕಾರಿಗಳ ತಂಡ ಹಾಗೂ 9 ಫ್ಲೈಯಿಂಗ್ ಸ್ಕ್ವಾಡ್ ಗಳ ತಂಡಗಳು ದಿನ,ರಾತ್ರಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಕ್ರಮ ಕೈಗೊಳ್ಳುತ್ತದೆ.

ಬಂಟ್ವಾಳ ತಾಲೂಕಿನ ಸಹಾಯಕ ಚುನಾವಣಾಧಿಕಾರಿ ಮಹೇಶ್, ಮಂಗಳವಾರ ಈ ಕುರಿತು ಮಾಹಿತಿ ನೀಡಿದರು.

ಬಂಟ್ವಾಳ ತಾಲೂಕಿನಲ್ಲಿ ಒಟ್ಟು 3,29,047 ಮತದಾರರಿದ್ದು, ಇವರಲ್ಲಿ 1,62,936 ಪುರುಷರು ಮತ್ತು 1,66,107 ಮಹಿಳೆಯರು ಇದ್ದಾರೆ. ಬಂಟ್ವಾಳ ತಾಲೂಕಿನಲ್ಲಿ ಮಂಗಳೂರು ಮತ್ತು ಪುತ್ತೂರು ವಿಧಾನಸಭಾ ಕ್ಷೇತ್ರಗಳ ಭಾಗ ಒಳಪಡುತ್ತಿದ್ದು, ಬಂಟ್ವಾಳ ತಾಲೂಕಿಗೆ ಒಳಪಡುವ ಮಂಗಳೂರು ಕ್ಷೇತ್ರದಲ್ಲಿ 27,113 ಪುರುಷರು ಮತ್ತು 27,335 ಮಹಿಳೆಯರು ಮತ್ತು 4 ಇತರರು ಸೇರಿ ಒಟ್ಟು 54,452 ಮತದಾರರಿದ್ದಾರೆ. ಬಂಟ್ವಾಳ ಕ್ಷೇತ್ರದಲ್ಲಿ 249 ಮತಗಟ್ಟೆಗಳಿದ್ದು, 1,08,469 ಪುರುಷರು, 1,11,233 ಮಹಿಳೆಯರು ಸೇರಿ ಒಟ್ಟು 2,19,702 ಮತದಾರರಿದ್ದಾರೆ. ಬಂಟ್ವಾಳ ತಾಲೂಕಿಗೆ ಒಳಪಡುವ ಪುತ್ತೂರು ಕ್ಷೇತ್ರದಲ್ಲಿ 61 ಮತಗಟ್ಟೆಗಳಿದ್ದು, 27,354 ಪುರುಷರು, 27,539 ಮಹಿಳೆಯರು ಸೇರಿ ಒಟ್ಟು 54,893 ಮತದಾರರು ಜನವರು 16ರಂದು ಸೇರ್ಪಡೆಯಾದ ಮತದಾರರ ಪಟ್ಟಿಯನ್ವಯ ಇದ್ದಾರೆ ಎಂದು ಅವರು ತಿಳಿಸಿದರು.

ಬಂಟ್ವಾಳ ಕ್ಷೇತ್ರದಲ್ಲಿ 249 ಬೂತ್ ಗಳಿದ್ದು, ಇವುಗಳ ಪೈಕಿ 83 ಸೂಕ್ಷ್ಮಾತಿಸೂಕ್ಷ್ಮ ಮತಗಟ್ಟೆಗಳು. ಇವುಗಳ ಮೇಲೆ ನಿಗಾ ಇಡಲು 21 ಸೆಕ್ಟರ್ ಆಫೀಸರ್ ಗಳು 9 ತಂಡಗಳ ಫ್ಲೈಯಿಂಗ್ ಸ್ಕ್ವಾಡ್ ಗಳು ದಿನದ 24 ತಾಸುಗಳೂ ತಂಡಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ಬಾರಿ ಚುನಾವಣಾ ಆಯೋಗ ಸಾರ್ವಜನಿಕರಿಗೆ ಏಕಗವಾಕ್ಷಿ ಮೂಲಕ ಇಡೀ ಕ್ಷೇತ್ರಕ್ಕೊಳಪಟ್ಟ ರಾಜಕೀಯ ಕಾರ್ಯಕ್ರಮಗಳನ್ನು ನಡೆಸುವ ಹಾಗೂ ಇತರೆ ಚುನಾವಣೆಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಅನುಮತಿ ನೀಡಲು ಸಹಾಯವಾಗುವಂತೆ ವ್ಯವಸ್ಥೆ ಕಲ್ಪಿಸಿದೆ. ಆನ್ ಲೈನ್ ನಲ್ಲಿ ಅನುಮತಿಗಳು ಸುವಿಧಾ ಮೂಲಕ ದೊರೆಯಲಿದೆ ಎಂದು ಮಹೇಶ್ ತಿಳಿಸಿದರು.

ಸಾರ್ವಜನಿಕರಿಗೆ ಅನುಕೂಲ:

ಸಾರ್ವಜನಿಕರಿಗೆ ದೂರು ನೀಡಲು ಸಿ ವಿಜಿಲ್ cvigil   ಆಪ್ ಇದ್ದು, ಇದನ್ನು ನೇರವಾಗಿ ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಬಹುದು. ದೂರು ನೀಡಿದ 90 ನಿಮಿಷಗಳಲ್ಲಿ ದೂರಿನ ಕುರಿತು ಮಾಹಿತಿಯನ್ನು ಅದು ಒದಗಿಸುತ್ತದೆ. ರಾಷ್ಟ್ರೀಯ ಮಟ್ಟದ ಅಹವಾಲು ವಿಲೇವಾರಿ ಘಟಕವೂ ಇದ್ದು, ಈ ಚುನಾವಣೆಯಲ್ಲಿ ಕಾರ್ಯನಿರ್ವಹಿಸುತ್ತದೆ.

ಬಂಟ್ವಾಳ ತಾಲೂಕಿಗೆ ಚುನಾವಣೆಗೆ ಸಂಬಂಧಿಸಿ ನೋಡಲ್ ಅಧಿಕಾರಿಯಾಗಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಯಾಗಿರುವ ರಾಜಣ್ಣ ಅವರು ಕಾರ್ಯನಿರ್ವಹಿಸುತ್ತಾರೆ. ಈಗಾಗಲೇ ಮತದಾರರ ಜಾಗೃತಿಗೆ ಸಂಬಂಧಿಸಿ ಸ್ವೀಪ್ ಅಭಿಯಾನ ಆರಂಭಗೊಂಡಿದೆ. ತಾಲೂಕಿನ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಸಹಿತ ಚುನಾವಣೆಗೆ ಸಂಬಂಧಿತ ಎಲ್ಲರೂ ಪಾಲ್ಗೊಳ್ಳುತ್ತಿದ್ದಾರೆ ಬಂಟ್ವಾಳ ತಹಶೀಲ್ದಾರ್ ಸಣ್ಣರಂಗಯ್ಯ, ಚುನಾವಣಾ ನೋಡಲ್ ಅಧಿಕಾರಿ ರಾಜಣ್ಣ ಈ ಸಂದರ್ಭ ಉಪಸ್ಥಿತರಿದ್ದು, ಪೂರಕ ಮಾಹಿತಿ ನೀಡಿದರು.

ಈ ನಂಬರ್ ಗೆ ಕರೆ ಮಾಡಿ:

ಸಾರ್ವಜನಿಕರಿಗೆ ನೀತಿ ಸಂಹಿತೆ ಉಲ್ಲಂಘನೆಯ ಕುರಿತು ದೂರುಗಳೇನಾದರೂ ಇದ್ದರೆ ಜಿಲ್ಲಾ ಮಟ್ಟದಲ್ಲಿ 1950 ಮತ್ತು ತಾಲೂಕು ಮಟ್ಟದಲ್ಲಿ 08255-232500 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ