Categories: ಬಂಟ್ವಾಳ

ಬೇಸಗೆಯಲ್ಲೂ ಸರ್ವೀಸ್ ರಸ್ತೆಯಲ್ಲಿ WATER SUPPLY

ಸುದ್ದಿ, ಲೇಖನಗಳಿಗೆ www.bantwalnews.comಸಂಪಾದಕ: ಹರೀಶ ಮಾಂಬಾಡಿ

ಬಿ.ಸಿ.ರೋಡ್ ನಲ್ಲಿ ಸುಸಜ್ಜಿತ ಕೆಎಸ್ಸಾರ್ಟಿಸಿ ಬಸ್ ನಿರ್ಮಿಸಿದ ಸಂದರ್ಭ ರಸ್ತೆಯಿಂದ ನಿಲ್ದಾಣಕ್ಕೆ ಬಸ್ ಹೇಗೆ ಹೋಗುವುದು ಎಂದು ಕೇಳಿದರೆ, ಅದನ್ನು ಆಮೇಲೆ ನೋಡೊಣ ಎಂದೇ ಸಾರ್ವಜನಿಕರಿಗೆ ಉತ್ತರ ನೀಡುತ್ತಿದ್ದ ಆಡಳಿತ ಮತ್ತು ರಾಜಕಾರಣಿಗಳು ಇದೀಗ ಅಲ್ಲಿಗೆ ಬಸ್ ಮತ್ತು ಪ್ರಯಾಣಿಕರು ಬರುವಂತೆ ಮಾಡುವುದು ಹೇಗೆ ಎಂಬ ಚಿಂತೆಯನ್ನು ಅಧಿಕಾರಿಗಳಿಗೆ ವರ್ಗಾಯಿಸಿದ್ದು ಕಳೆದ ವಾರದ ವಿಚಾರ.

ಈ ಬಗ್ಗೆ ಸಾರ್ವಜನಿಕರ ಪ್ರತಿಕ್ರಿಯೆಗಳು ಖಾರವಾಗತೊಡಗಿದಾಗ ಈ ಕುರಿತು ಅಭಿಪ್ರಾಯಗಳನ್ನು ಆಲಿಸಿದ ಪೊಲೀಸ್ ಇಲಾಖೆ, ತಾತ್ಕಾಲಿಕವಾಗಿ ಮೊದಲಿನಂತೆ ಬಸ್ಸುಗಳನ್ನು ಸರ್ವೀಸ್ ರಸ್ತೆಯಲ್ಲೇ ಕಳುಹಿಸುತ್ತಿದ್ದು, ಮುಂದಿನ ಬದಲಾವಣೆಗೆ ಕಾಯುತ್ತಿದೆ.

ಗಾಯದ ಮೇಲೆ ಬರೆ ಎಳೆದಂತೆ ಸರ್ವೀಸ್ ರಸ್ತೆಯಲ್ಲಿ ಬಿರುಬೇಸಗೆಯಲ್ಲೂ ಸೋಮವಾರ ಕೆಸರುನೀರು ಕಾಣಿಸಿಕೊಂಡಿತು. ಪೈಪ್ ಸಮಸ್ಯೆಯಿಂದಾಗಿ ನೀರು ರಸ್ತೆಯಲ್ಲೇ ಹರಿಯತೊಡಗಿತು.

 

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts