ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಮುಂದಿನ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಇವಿಎಂ ಮತಯಂತ್ರದ ಹಾಗೂ ಚುನಾವಣಾ ಪ್ರಕ್ರಿಯೆ ಕುರಿತು ಮಾರ್ಗದರ್ಶನ ಕಾರ್ಯಕ್ರಮ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು, ಬಂಟ್ವಾಳ ಮತ್ತು ವಿಟ್ಲ ಹೋಬಳಿಗಳಲ್ಲಿ ಮಾ.18ರಿಂದ ಆರಂಭಗೊಂಡಿದ್ದು, ಮಾ.30ರವರೆಗೆ ನಡೆಯಲಿದೆ. ಬಂಟ್ವಾಳ ತಾಲೂಕಿನ ಸಹಾಯಕ ಚುನಾವಣಾಧಿಕಾರಿ ಮಹೇಶ್ ಈ ಕುರಿತು ವಿವರಗಳನ್ನು ನೀಡಿದ್ದಾರೆ. ಅವರ ಸೂಚನೆಯಂತೆ ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಅವರ ನೇತೃತ್ವದಲ್ಲಿ ಸ್ವೀಪ್ ಆರಂಭಗೊಂಡಿದೆ. ತಾಲೂಕಿನ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಸಹಿತ ಚುನಾವಣೆಗೆ ಸಂಬಂಧಿತ ಎಲ್ಲರೂ ಪಾಲ್ಗೊಳ್ಳಲಿದ್ದಾರೆ.
ಬಂಟ್ವಾಳ ಹೋಬಳಿ ವಿವರ:
ಮಾ.18ರಂದು ಚೆನ್ನೈತೋಡಿ ಗ್ರಾಮದಲ್ಲಿ ಕಾರ್ಯಕ್ರಮ ನಡೆಯಲಿದೆ. 19ರಂದು ಬೆಳಗ್ಗೆ ರಾಯಿ, ಮಧ್ಯಾಹ್ನ ಅರಳ, 20ರಂದು ಬೆಳಗ್ಗೆ ಸಂಗಬೆಟ್ಟು, ಮಧ್ಯಾಹ್ನ ಪಂಜಿಕಲ್ಲು, 21ರಂದು ಬೆಳಗ್ಗೆ ಕುಕ್ಕಿಪ್ಪಾಡಿ, ಸಂಜೆ ಇರ್ವತ್ತುರು, 22ರಂದು ಬೆಳಗ್ಗೆ ಪಿಲಾತಬೆಟ್ಟು, ಮಧ್ಯಾಹ್ನ ಬಡಗಕಜೆಕಾರು, 23ರಂದು ಬೆಳಗ್ಗೆ ಕಾವಳಮುಡೂರು, ಸಂಜೆ ಕಾವಳಪಡೂರು, 25ರಂದು ಬೆಳಗ್ಗೆ ಉಳಿ,ಮಧ್ಯಾಹ್ನ ಮಣಿನಾಲ್ಕೂರು, 26ರಂದು ಬೆಳಗ್ಗೆ ಸರಪಾಡಿ, ಮಧ್ಯಾಹ್ನ ನಾವುರು, 28ರಂದು ಬೆಳಗ್ಗೆ ಅಮ್ಟಾಡಿಯಲ್ಲಿ ಸ್ವೀಪ್ ಕಾರ್ಯಕ್ರಮ ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ನಡೆಯಲಿದೆ.
ಪಾಣೆಮಂಗಳೂರು ಹೋಬಳಿ ವಿವರ:
18ರಂದು ಬೆಳಗ್ಗೆ ಕರಿಯಂಗಳ , ಅಪರಾಹ್ನ ಅಮ್ಮುಂಜೆಯಲ್ಲಿ ಕಾರ್ಯಕ್ರಮ ನಡೆಯಲಿದೆ. 19ರಂದು ಬೆಳಗ್ಗೆ ಬಡಗಬೆಳ್ಖೂರು, ಅಪರಾಹ್ನ ಕಳ್ಳಿಗೆ, 20ರಂದು ಬೆಳಗ್ಗೆ ಮೇರಮಜಲು, 21ರಂದು ಬೆಳಗ್ಗೆ ತುಂಬೆ, ಮಧ್ಯಾಹ್ನ ನರಿಕೊಂಬು, 22ರಂದು ಮಧ್ಯಾಹ್ನ ಬಾಳ್ತಿಲ, 23ರಂದು ಬೆಳಗ್ಗೆ ಬರಿಮಾರು, ಮಧ್ಯಾಹ್ನ ಕಡೇಶ್ವಾಲ್ಯ, 25ರಂದು ಬೆಳಗ್ಗೆ ಸಜೀಪಮೂಡ, ಅಪರಾಹ್ನ ಸಜೀಪಮುನ್ನೂರು, 26ರಂದು ಬೆಳಗ್ಗೆ ಮಂಚಿ, ಅಪರಾಹ್ನ ಪುದು, 27ರಂದು ಬೆಳಗ್ಗೆ ಗೋಳ್ತಮಜಲು, 28ರಂದು ಮಧ್ಯಾಹ್ನ ಪಜೀರು, 29ರಂದು ಬೆಳಗ್ಗೆ ಬಾಳೇಪುಣಿ, ಮಧ್ಯಾಹ್ನ ನರಿಂಗಾನ, ಅದೇ ದಿನ ಬೆಳಗ್ಗೆ ಸಜೀಪನಡು, ಮಧ್ಯಾಹ್ನ ಕುರ್ನಾಡು, 30ರಂದು ಬೆಳಗ್ಗೆ ಸಜಿಪಪಡು ಅಪರಾಹ್ನ ಇರಾ ಗ್ರಾಪಂಗಳಲ್ಲಿ ಸ್ವೀಪ್ ಕಾರ್ಯಕ್ರಮ ನಡೆಯುವುದು.
ವಿಟ್ಲ ಹೋಬಳಿ ವಿವರ:
ವಿಟ್ಲ ಹೋಬಳಿಯ ಪುಣಚದಲ್ಲಿ 18ರಂದು ಬೆಳಗ್ಗೆ, ಕೇಪುವಿನಲ್ಲಿ ಮಧ್ಯಾಹ್ನ, ಪೆರ್ನೆಯಲ್ಲಿ ಬೆಳಗ್ಗೆ, ಕೆದಿಲದಲ್ಲಿ ಮಧ್ಯಾಹ್ನ 19ರಂದು ಕಾರ್ಯಕ್ರಮ ನಡೆಯಲಿದೆ. 20ರಂದು ಇಡ್ಕಿದುವಿನಲ್ಲಿ ಬೆಳಗ್ಗೆ ಮತ್ತು ವಿಟ್ಲಮುಡ್ನೂರಿನಲ್ಲಿ ಮಧ್ಯಾಹ್ನ ಕಾರ್ಯಕ್ರಮ ನಡೆಯುವುದು. 21ರಂದು ಪೆರಾಜೆಯಲ್ಲಿ ಬೆಳಗ್ಗೆ, 22ರಂದು ನೆಟ್ಲಮುಡ್ನೂರಿನಲ್ಲಿ ಬೆಳಗ್ಗೆ, ಅನಂತಾಡಿಯಲ್ಲಿ ಮಧ್ಯಾಹ್ನ, 23ರಂದು ವೀರಕಂಭದಲ್ಲಿ ಬೆಳಗ್ಗೆ, ಬೋಳಂತೂರಿನಲ್ಲಿ ಮಧ್ಯಾಹ್ನ, ಕೊಳ್ನಾಡುವಿನಲ್ಲಿ 25ರಂದು ಬೆಳಗ್ಗೆ, ವಿಟ್ಲಪಡ್ನೂರಿನಲ್ಲಿ ಮಧ್ಯಾಹ್ನ ಕಾರ್ಯಕ್ರಮ ನಡೆಯುವುದು. 26ರಂದು ಸಾಲೆತ್ತೂರಿನಲ್ಲಿ ಬೆಳಗ್ಗೆ, ಕನ್ಯಾನ, ಅಳಕೆಗಳಲ್ಲಿ ಮಧ್ಯಾಹ್ನ, 27ರಂದು ಕರೋಪಾಡಿಯಲ್ಲಿ ಬೆಳಗ್ಗೆ, ಅಳಿಕೆ, ಮಾಣಿಯಲ್ಲಿ ಮಧ್ಯಾಹ್ನ ಮತ್ತು 28ರಂದು ಬೆಳಗ್ಗೆ ಪೆರುವಾಯಿ ಮಧ್ಯಾಹ್ನ ಮಾಣಿಲದಲ್ಲಿ ಕಾರ್ಯಕ್ರಮ ನಡೆಯಲಿದೆ.