ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಬಂಟ್ವಾಳ ತಿರುಮಲ ವೆಂಕಟರಮಣ ಸ್ವಾಮೀ ದೇವಸ್ಥಾನ ಬ್ರಹ್ಮರಥೋತ್ಸವ ಪ್ರಯುಕ್ತ ಬುಧವಾರ ಸಂಜೆ ಸೇರಿದ್ದ ಸಹಸ್ರಾರು ಭಕ್ತರು ರಥಾರೋಹಣದ ದೃಶ್ಯವನ್ನು ಕಣ್ತುಂಬಿಕೊಂಡರು. ಈ ಸಂದರ್ಭ ಮಲ್ಲಿಗೆಪ್ರಿಯ ವೆಂಕಟರಮಣ ದೇವರಿಗೆ ಮಲ್ಲಿಗೆ ಸೇವೆ ಸಮರ್ಪಣೆ ನಡೆಯಿತು. ಬುಧವಾರ ಮಹಾಪ್ರಾರ್ಥನೆ, ಯಜ್ಞಾರಂಭ, ರಥಾರೋಹಣ, ಸಮಾರಾಧನೆ, ರಥೋತ್ಸವ, ದೀಪ ನಮಸ್ಕಾರ, ಬೆಳ್ಳಿ ಪಲ್ಲಕಿ ಉತ್ಸವ, ವಸಂತ ಪೂಜೆ ನಡೆದವು. ಮಾ.14ರಂದು ಅವಭೃತ ಉತ್ಸವ ನಡೆಯಲಿದೆ.
ಬಂಟ್ವಾಳದ ಹಲವೆಡೆ ಸಂಸಾರ ಜೋಡುಮಾರ್ಗ ತಂಡದಿಂದ ಕಾರ್ಯಕ್ರಮ, ಸಾರ್ವಜನಿಕರಿಗೆ ಮಾಹಿತಿ (more…)