ಬಂಟ್ವಾಳ ತಾಲೂಕಿನ ಸರಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಮಜಿ ವೀರಕಂಭ ಶಾಲಾ ಮುಖ್ಯ ಶಿಕ್ಷಕ ನಾರಾಯಣ ಪೂಜಾರಿ ಆಯ್ಕೆಯಾಗಿದ್ದಾರೆ.
ಕಲ್ಲಡ್ಕದ ಜಿಪಂ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಕೆಂಪಯ್ಯ ಅನಂತಾಡಿ ಶಾಲೆ,ಮತ್ತು ಪ್ರೇಮಾ ಕೆ.ಕೆ.ಕಾವಳಮೂಡೂರು ಶಾಲೆ, ಪ್ರಧಾನ ಕಾರ್ಯದರ್ಶಿಯಾಗಿ ಪುಟ್ಟರಂಗನಾಥ ಟಿ .ಪೆರಾಜೆ ಶಾಲೆ ,ಜೊತೆ ಕಾರ್ಯದರ್ಶಿಯಾಗಿ ಶಂಕರ್ ನಾರ್ಶ ಶಾಲೆ ಮತ್ತು ದೇವಕಿ ಮೋಂತಿಮಾರು ಶಾಲೆ, ಖಜಾಂಚಿಯಾಗಿ ಆನಂದ ನಾಯ್ಕ ಪಲ್ಲಿಪಾಡಿ ಶಾಲೆ , ಸಂಘಟನಾ ಕಾರ್ಯದರ್ಶಿಯಾಗಿ ಅಶ್ರಫ್ ಕಲ್ಲಡ್ಕ ಶಾಲೆ ಅವರನ್ನು ಆಯ್ಕೆ ಮಾಡಲಾಯಿತು . ಎಲ್ಲಾ ಕ್ಲಸ್ಟರ್ ನಿಂದ ಓರ್ವ ಮುಖ್ಯ ಶಿಕ್ಷಕರನ್ನು ಪ್ರತಿನಿಧಿಗಳಾಗಿ ಆಯ್ಕೆ ಮಾಡಿ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.