ಕೊಲ್ಲೂರು ಸಮೀಪದ ಯಳಚಿತ್‌ನಲ್ಲಿ ಭಾನುವಾರ ರಾತ್ರಿ ಕಲಾಧರ ಮೇಳದಿಂದ ಭೀಷ್ಮ ವಿಜಯ ಪ್ರಸಂಗ ನಡೆಯುತ್ತಿತ್ತು. ರಂಗದ ಮೇಲೆ ಸಾಲ್ವ ಪಾತ್ರದಲ್ಲಿ ಅಭಿನಯಿಸುತ್ತಿದ್ದ ಪ್ರಸಿದ್ಧ ಕಲಾವಿದ ಹುಡಗೋಡು ಚಂದ್ರಹಾಸ ಇದ್ದಕ್ಕಿದ್ದಂತೆ ಕುಸಿದು ಬಿದ್ದರು. ‘ಭೀಷ್ಮಾ’ ಎಂದು ಉದ್ಗಾರ ತೆಗೆಯುತ್ತಲೇ ವೇದಿಕೆಯಲ್ಲಿ ಬಿದ್ದ ಚಂದ್ರಹಾಸ ಮತ್ತೆ ಮೇಲೇಳಲೇ ಇಲ್ಲ.
ರಾಜಕೀಯ ರಂಗಕ್ಕೆ ಕಾಲಿರಿಸಿದ್ದ ಚಂದ್ರಹಾಸ ಅವರು ಉತ್ತರಕನ್ನಡದ ಹಡಿನಬಾಳ ಗ್ರಾಮ ಪಂಚಾಯತ್ನ ಅಧ್ಯಕ್ಷರಾಗಿದ್ದರು. ರಾಜಕೀಯಕ್ಕೆ ಸೇರಿದ ಬಳಿಕ ಸಕ್ರಿಯ ಯಕ್ಷಗಾನ ವೃತ್ತಿಯಿಂದ ದೂರವಾಗಿ ಹವ್ಯಾಸಿಯಾಗಿ ಕಲಾ ಸೇವೆ ಮುಂದುವರಿಸಿದ್ದರು.
ರಾತ್ರಿ 11. 30 ರ ಸುಮಾರಿಗೆ ಈ ದುರ್ಘಟನೆ ನಡೆದಿದ್ದು ತಕ್ಷಣ ಅವರನ್ನು ಬೈಂದೂರಿನ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಹೃದಯಾಘಾತಕ್ಕೊಳಗಾಗಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೆ ಇಹದ ಬದುಕು ಮುಗಿಸಿದರು.
ಚಂದ್ರಹಾಸ ಅವರು ಫೇಸ್ ಬುಕ್ ನಲ್ಲಿ ಸಕ್ರಿಯರಾಗಿದ್ದರು. ಅವರ ಅಭಿನಯದ ಕೊನೇ ಕ್ಷಣಗಳು ಫೇಸ್‌ಬುಕ್ ಖಾತೆಯಿಂದ ಲೈವ್ ಆಗಿ ಬರುತ್ತಿತ್ತು.
ಕೆ.ಎನ್.ಆರ್. ಕನ್ಸಸ್ಟ್ರಕ್ಷನ್ಸ್ ಗುತ್ತಿಗೆ ವಹಿಸಿಕೊಂಡಿರುವ ಬಿ.ಸಿ.ರೋಡ್ ಭಾಗದ ಕಾಮಗಾರಿಯಲ್ಲಿ ಸೇತುವೆ ಪೂರ್ಣಗೊಳಿಸಿ ಓಡಾಟ ಆರಂಭಗೊಂಡಿರುವುದು ಮಹತ್ವದ ಹೆಜ್ಜೆಯಾಗಿದ್ದು, ಬಿ.ಸಿ.ರೋಡ್ ಸರ್ಕಲ್…