ಖಾಸಗಿ, ಸರಕಾರಿ ಬಸ್ ಗಳನ್ನು ಬಿ.ಸಿ.ರೋಡ್ ನ ಒಳರಸ್ತೆಗೆ ಸಂಚಾರವನ್ನು ನಿರ್ಬಂಧಿಸಿದ ಹಿನ್ನೆಲೆಯಲ್ಲಿ ಬಿ.ಸಿ.ರೋಡ್-ಕೈಕಂಬ ಆಟೋ ರಿಕ್ಷಾ ಚಾಲಕರು ಸೋಮವಾರ ಇಲ್ಲಿನ ಮೇಲ್ಸೆತುವೆಯಲ್ಲಿ ದಿಢೀರನೆ ಪ್ರತಿಭಟನೆ ನಡೆಸಿದರು.
ದಿಢೀರನೆ ಬಸ್ ಗಳ ಸಂಚಾರವನ್ನು ನಿರ್ಬಂಧಿಸಿರುವುದು ಸರಿಯಲ್ಲ. ಇದರಿಂದ ಆಟೋ ಚಾಲಕರು ತೊಂದರೆ ಅನುಭವಿಸುವಂತಾಗಿದೆ ಎಂದು ಆಟೊ ಚಾಲಕರು ದೂರಿಕೊಂಡರು.
ಬಳಿಕ ಆಟೊಚಾಲಕರು ಹೆದ್ದಾರಿ ಯಲ್ಲಿ ಬರುತ್ತಿದ್ದ ಬಸ್ ಗಳನ್ನು ತಡೆದು ನಿಲ್ಲಿಸಿ, ಬಿ.ಸಿ.ರೋಡಿನ ಕೆಳರಸ್ತೆಯಲ್ಲಿ ಸಂಚರಿಸುವಂತೆ ಮುಂದಾಗ ಪೊಲಿಸರು ತಡೆವೊಡ್ಡಿದರು. ಘಟನಾ ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಹಾಗೂ ಬಂಟ್ವಾಳ ಕ್ರೈಂ ಎಸ್ಸೈ ಸುಧಾಕರ್ ಜಿ.ತೋನ್ಸೆ ಧಾವಿಸಿ, ಆಟೊ ಚಾಲಕರೊಂದಿಗೆ ಮಾತುಕತೆ ನಡೆಸಿದರು.
ಬಸ್ಗಳ ಸಂಚಾರ ನಿರ್ಬಂಧಿಸಿದಕ್ಕೆ ಆಟೊ ಚಾಲಕರು ಆಕ್ಷೇಪ ವ್ಯಕ್ತಪಡಿಸಿದಾಗ, ಬಂಟ್ವಾಳ ಎಎಸ್ಪಿ ಅವರ ನಿರ್ದೇಶನ ಮೇರೆಗೆ ಬಿ.ಸಿ.ರೋಡ್ ಒಳರಸ್ತೆಯಲ್ಲಿ ಬಸ್ ಸಂಚಾರವನ್ನು ನಿರ್ಬಂಧಿಸಲಾಗಿದೆ. ಈ ಬಗ್ಗೆ ಎಎಸ್ಪಿ ಅವರೊಂದಿಗೆ ಮಾತುಕತೆಗೆ ತೆರಳುವಂತೆ ಹಾಗೂ ಪ್ರತಿಭಟನೆಯನ್ನು ಕೈಬಿಡುವಂತೆ ಎಸ್ಸೈ ಸುಧಾಕರ್ ಅವರು ಚಾಲಕರಿಗೆ ತಿಳಿಸಿದರು.
ಕೆ.ಎನ್.ಆರ್. ಕನ್ಸಸ್ಟ್ರಕ್ಷನ್ಸ್ ಗುತ್ತಿಗೆ ವಹಿಸಿಕೊಂಡಿರುವ ಬಿ.ಸಿ.ರೋಡ್ ಭಾಗದ ಕಾಮಗಾರಿಯಲ್ಲಿ ಸೇತುವೆ ಪೂರ್ಣಗೊಳಿಸಿ ಓಡಾಟ ಆರಂಭಗೊಂಡಿರುವುದು ಮಹತ್ವದ ಹೆಜ್ಜೆಯಾಗಿದ್ದು, ಬಿ.ಸಿ.ರೋಡ್ ಸರ್ಕಲ್…