ಅಂತರಾಷ್ಟ್ರೀಯ ಮಟ್ಟದಲ್ಲಿ ಪೋಲಿಯೊ ನಿರ್ಮೂಲನೆಗೆ ರೋಟರಿ ಶ್ರಮಿಸುತ್ತಿದೆ ಎಂದು ರೋಟರಿ ವಲಯ ಕಾರ್ಯದರ್ಶಿ ನಾರಾಯಣ ಹೆಗ್ಡೆ ಹೇಳಿದರು.
ರೋಟರಿ ಕ್ಲಬ್ ಬಂಟ್ವಾಳ ಟೌನ್ ವತಿಯಿಂದ ಬಿ.ಸಿ.ರೋಡಿನ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮದಲ್ಲಿ ೫ ತಿಂಗಳ ಮಗು ತಶ್ವಿಕಾಗೆ ಪೋಲಿಯೊ ಲಸಿಕೆ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಅಂಗ ವಿಕಲತೆ- ಜೀವ ಹಾನಿ ಮಾಡುವ ಮಾರಕ ಪೋಲಿಯೊ ನಿಯಂತ್ರಣ ಮಾಡುವಲ್ಲಿ ಕಳೆದ ೨ ದಶಕಗಳ ರೋಟರಿ ಶ್ರಮದ ಫಲವಾಗಿ ವಿಶ್ವದಾದ್ಯಂತ ಪಾಕಿಸ್ತಾನ-ಅಫ್ಘಾನಿಸ್ಥಾನ ಹೊರತುಪಡಿಸಿ ಶೂನ್ಯ ಕ್ಕೆ ತರಲಾಗಿದೆ ಹಾಗೂ ಪೋಷಕರು ಮಕ್ಕಳಿಗೆ ಲಸಿಕೆ ನೀಡುವಲ್ಲಿ ಅಲಕ್ಷ್ಯ ಮಾಡದೆ ಯೋಜನೆ ಸದುಪಯೋಗ ಮಾಡಬೇಕಿದೆ ಎಂದರು ರೋಟರಿ ಕ್ಲಬ್ ಬಂಟ್ವಾಳ ಟೌನ್ ಅಧ್ಯಕ್ಷ ಉಮೇಶ್ ನಿರ್ಮಲ್, ಕಾರ್ಯದರ್ಶಿ ಜಯರಾಜ್ ಬಂಗೇರ, ಪದಾಧಿಕಾರಿಗಳಾದ ದಯಾನಂದ ಶೆಟ್ಟಿ, ಮಹಮ್ಮದ್ ಹನೀಫ್,ಮಹಮ್ಮದ್ ಮುನೀರ್, ಪ್ರಕಾಶ್ ಆಳ್ವಾ, ಕಿಶೋರ್ ಕುಮಾರ್, ಸವಿತಾ ನಿರ್ಮಲ್, ಮನಿಷಾ ಜಯರಾಜ್ ಉಪಸ್ಥಿತರಿದ್ದರು.