ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಭಾನುವಾರ ಬೆಳಗ್ಗೆ 7.23ರಿಂದ 8.23ರವರೆಗಿನ ಮೀನ ಲಗ್ನ ಸುಮುಹೂರ್ತದಲ್ಲಿ ಪ್ರತಿಷ್ಠಾ ಕಾರ್ಯಗಳು, ಶ್ರೀ ದುರ್ಗಾಪರಮೇಶ್ವರಿ, ಶ್ರೀ ರಾಜರಾಜೇಶ್ವರಿ, ಶ್ರೀ ಸುಬ್ರಹ್ಮಣ್ಯ, ಶ್ರೀ ಗಣಪತಿ, ಶ್ರೀ ಭದ್ರಕಾಳಿ ದೇವರಿಗೆ ಜೀವಕಲಶಾಭಿಷೇಕ ಕಾರ್ಯಕ್ರಮಗಳ ಸಹಿತ ಸಕಲ ವೈದಿಕ ವಿಧಿ ವಿಧಾನಗಳು ನಡೆದವು. ಪ್ರಾಸಾದ ಪ್ರತಿಷ್ಠಾ ಕಾರ್ಯ, ನ್ಯಾಸ, ಪ್ರತಿಷ್ಠಾ ಪೂಜೆ, ಪ್ರತಿಷ್ಠಾ ಬಲಿ ನೆರವೇರಿದವು.
ಬೆಳಗ್ಗೆ 10.40ರ ವೃಷಭ ಲಗ್ನದ ಮುಹೂರ್ತದಲ್ಲಿ ಕ್ಷೇತ್ರಪಾಲ ಮತ್ತು ಸಪರಿವಾರ ದೈವಗಳ ಪ್ರತಿಷ್ಠೆ, ಅಂಕುರ ಪೂಜೆ, ಮಹಾಪೂಜೆಗಳು ಸಂಪನ್ನಗೊಂಡವು.
ಬಿಲ್ಲವ ಸಮಾಜಬಾಂಧವರು ಸೇವಾರೂಪದಲ್ಲಿ ಸಮರ್ಪಿಸಿದ ನೂತನ ಧ್ವಜಸ್ಥಂಭದ ಪ್ರತಿಷ್ಠಾಪನೆಯ ನೆರವೇರಿದ್ದು, ಚಿನ್ನದ ಲೇಪಿತ ನವಿಲಿನ ಮೂರ್ತಿಯನ್ನು ಕೊಡಿಮರದ ತುದಿಯಲ್ಲಿ ಪ್ರತಿಷ್ಠಾಪಿಸಲಾಯಿತು. ಈ ಸಂದರ್ಭ ಸಹಸ್ರಾರು ಭಕ್ತರು ಉಪಸ್ಥಿತರಿದ್ದರು.