ಲೋರೆಟ್ಟೊ ಫ್ರೆಂಡ್ಸ್ ಕ್ಲಬ್(ರಿ),ಲೋರೆಟ್ಟೋ ಮಾತಾ ಚರ್ಚ್,ಭಾರತೀಯ ಯುವ ಸಂಚಲನ ಜಂಟಿ ಆಶ್ರಯದಲ್ಲಿ ಸ್ತ್ರೀ ರೋಗಗಳ ಕುರಿತು ಮಾಹಿತಿ ಕಾರ್ಯಕ್ರಮ ಲೊರೆಟ್ಟೋ ಚರ್ಚ್ ಹಾಲ್ ನಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಡಾ. ವೆಂಕಟೇಶ್ ಸಂಜೀವ್ ಆಗಮಿಸಿದ್ದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಚರ್ಚ್ ನ ಧರ್ಮ ಗುರುಗಳಾದ ವಂ. ಎಲಿಯಸ್ ಡಿಸೋಜಾ, ಇಂಥ ಮಹತ್ವದ ಶಿಬಿರಗಳಲ್ಲಿ ಭಾಗವಹಿಸಿ ತಮ್ಮ ಆರೋಗ್ಯವನ್ನು ತಾವೇ ಕಾಪಾಡಿಕೊಂಡು ಆರೋಗ್ಯವಂತ ನಾಗರಿಕರಾಗಲು ಕರೆ ನೀಡಿದರು.
ಲೋರೆಟ್ಟೋ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ರಿಚಾರ್ಡ್ ಮಿನೇಜಿಸ್, ಕಾರ್ಯದರ್ಶಿ ಸಿಪ್ರಿಯನ್ ಡಿಸೋಜಾ, ಲೋರೆಟ್ಟೋ ಫ್ರೆಂಡ್ಸ್ ಕ್ಲಬ್ ಉಪಾಧ್ಯಕ್ಷರಾದ ರೋಬಿನ್ ಬರ್ಬೋಜ, ಐಸಿವೈಮ್ ಅಧ್ಯಕ್ಷೆ ಫ್ರೋಯಿಡಿ ಫೆರ್ನಾಂಡಿಸ್ ಉಪಸ್ಥಿತರಿದ್ದರು. ಅಲ್ವಿನ್ ಪಿಂಟೋ ಸ್ವಾಗತಿಸಿದರು. ಫ್ರೋಯಿಡಿ ಫೆರ್ನಾಂಡಿಸ್ ವಂದಿಸಿದರು. ಸ್ವಾತಿ ಕಾರ್ಲೊ ಕಾರ್ಯಕ್ರಮ ನಿರೂಪಿಸಿದರು.