ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ವಿದ್ಯಾಭಿವರ್ದಕ ಸಂಘ ಮಾಣಿ ಇದರ ಆಶ್ರಯದಲ್ಲಿ ಕರ್ನಾಟಕ ಪ್ರೌಢಶಾಲೆಗೆ ಬಂಟ್ವಾಳ ರೋಟರಿ ಕ್ಲಬ್‌ನ ಸಹಕಾರದೊಂದಿಗೆ ನಿರ್ಮಾಣಗೊಂಡ ಆಂಗ್ಲಮಾಧ್ಯಮ ವಿಭಾಗದ ನೂತನ ಕೊಠಡಿಗಳ ಸಂಕೀರ್ಣದ ಉದ್ಘಾಟನಾ ಸಮಾರಂಭ ನಡೆಯಿತು.
ರೋಟರಿಯ ನಿಯೋಜಿತ ಜಿಲ್ಲಾ ಗವರ್ನರ್ ರಂಗನಾಥ್ ಭಟ್ ನೂತನ ಕಟ್ಟಡಗಳ ಸಂಕೀರ್ಣವನ್ನು ಉದ್ಘಾಟಿಸಿದರು.
ಶಾಲೆಗೆ ಕಟ್ಟವನ್ನು ಒದಗಿಸಿಕೊಡುವುದು ಶ್ರೇಷ್ಠವಾದ ಕಾರ್ಯ. ವ್ಯಕ್ತಿಗೆ ವಿದ್ಯೆಯಿದ್ದರೆ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು. ವಿದ್ಯಾರ್ಥಿಗಳು ಉತ್ತಮನಡವಳಿಕೆಯೊಂದಿಗೆ ಶಿಕ್ಷಣ ಮುನ್ನಡೆಸಿದಾಗ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಿದೆ ಎಂದು ಅವರು ಈ ಸಂದರ್ಭ ತಿಳಿಸಿದರು.
ಮಾಜಿ ಸಚಿವ ಬಿ.ರಮಾನಾಥ ರೈ ದೀಪ ಪ್ರಜ್ವಲಿಸಿ ಮಾತನಾಡಿ ಪ್ರತಿಯೊಬ್ಬ ವ್ಯಕ್ತಿಯೂ ಅಕ್ಷರ ಜ್ಞಾನಿಯಾಗಬೇಕು, ಎಲ್ಲರಿಗೂ ಮಾಲ್ಯಾಧಾರಿತ, ಗುಣಮಟ್ಟದ ಶಿಕ್ಷಣ ಸಿಗಬೇಕು. ಸಾಮಾಜಿಕ ನ್ಯಾಯದಿಂದ ವಂಚಿತರಾವರಿಗೂ ಶಿಕ್ಷಣ ನೀಡಿ ಶೋಷಣೆ ಮುಕ್ತ ಸಮಾಜ ನಿರ್ಮಾಣ ಮಾಡಬೇಕು ಎಂದರು. ವಿದ್ಯೆ ಸರ್ವಾಂಗಿಣ ಬೆಳವಣಿಗೆಗೆ ಅವಕಾಶ ನೀಡುತ್ತದೆ ಎಂದರು.
ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ ಬಂಟ್ವಾಳ ರೋಟರಿ ಕ್ಲಬ್ ಸುವರ್ಣ ವರ್ಷದ ಯೋಜನೆಯಾಗಿ ಈ ಶಾಲಾ ಕಟ್ಟಡ ನಿರ್ಮಾಣ ಮಾಡಲಾಗಿದೆ. ವಿದ್ಯೆಗೆ ಮೊದಲ ಪ್ರಾಶಸ್ಯ ರೋಟರಿ ಸಂಸ್ಥೆ ನೀಡುತ್ತಿದೆ. ಅಂಗನವಾಡಿ ಸಶಕ್ತೀಕರಣ, ಶುದ್ದ ಕುಡಿಯುವ ನೀರಿನ ಯೋಜನೆ ಮೂಲಕ ಸಾಕಷ್ಟು ಅಭಿವೃದ್ದಿ ಕಾರ್ಯಕ್ರಮಗಳನ್ನು ಬಂಟ್ವಾಳ ರೋಟರಿ ಕ್ಲಬ್ ಮಾಡಿದೆ ಎಂದರು. ಮಂಜುನಾಥ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಶಾಲೆಯ ಅಭಿವೃದ್ಧಿಗೆ ಸಹಕರಿಸಿದವರನ್ನು ಗೌರವಿಸಲಾಯಿತು.
ರೋಟರಿ ಸುವರ್ಣ ವರ್ಷಾಚರಣೆ ಸಮಿತಿ ಅಧ್ಯಕ್ಷ ಡಾ. ರಮೇಶಾನಂದ ಸೋಮಾಯಾಜಿ, ಕಾರ್ಯದರ್ಶಿ ಶಿವಾನಿ ಬಾಳಿಗ, ಹೈಕೋರ್ಟ್ ನ್ಯಾಯವಾದಿ ಸುಧಾಕರ ಪೈ ಎಂ, ಬಿಎಸ್‌ಎನ್‌ಎಲ್‌ನ ಸಹಾಯಕ ಜನರಲ್ ಮ್ಯಾನೇಜರ್ ಜನಾರ್ದನ ಪೂಜಾರಿ, ರೋಟರಿ ಕ್ಲಬ್ ಸಹಾಯಕ ಗವರ್ನರ್ ಪ್ರಕಾಶ್ ಕಾರಂತ, ವಿದ್ಯಾಭಿವರ್ಧಕ ಸಂಘದ ಕೋಶಾಧಿಕಾರಿ ಜಗನ್ನಾಥ ಚೌಟ, ಆನ್ಸ್ ಕ್ಲಬ್ ಅಧ್ಯಕ್ಷೆ ವಿದ್ಯಾ ಅಶ್ವನಿಕುಮಾರ್ ರೈ, ಗಂಗಾಧರ ರೈ, ನಿಕಟಪೂರ್ವ ಅಧ್ಯಕ್ಷ ಸಂಜೀವ ಪೂಜಾರಿ, ಮಾಜಿ ಅಧ್ಯಕ್ಷ ರಿತೇಶ್ ಬಾಳಿಗ, ಕರುಣಕರ ರೈ, ನಿಕಟಪೂರ್ವ ಕಾರ್ಯದರ್ಶಿ ಕೆ.ಎನ್ ಹೆಗ್ಡೆ ಮತ್ತಿತರ ಪ್ರಮುಖರು ಹಾಜರಿದ್ದರು.
ವಿದ್ಯಾಭಿವರ್ಧಕ ಸಂಘದ ಅಧ್ಯಕ್ಷ ಕಿರಣ್ ಹೆಗ್ಡೆ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು. ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಮಹಮ್ಮದ್ ಹಬೀಬ್ ವಂದಿಸಿದರು.
ಕೆ.ಎನ್.ಆರ್. ಕನ್ಸಸ್ಟ್ರಕ್ಷನ್ಸ್ ಗುತ್ತಿಗೆ ವಹಿಸಿಕೊಂಡಿರುವ ಬಿ.ಸಿ.ರೋಡ್ ಭಾಗದ ಕಾಮಗಾರಿಯಲ್ಲಿ ಸೇತುವೆ ಪೂರ್ಣಗೊಳಿಸಿ ಓಡಾಟ ಆರಂಭಗೊಂಡಿರುವುದು ಮಹತ್ವದ ಹೆಜ್ಜೆಯಾಗಿದ್ದು, ಬಿ.ಸಿ.ರೋಡ್ ಸರ್ಕಲ್…