ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಪುನಃಪ್ರತಿಷ್ಠೆ, ಅಷ್ಟಬಂಧ, ನೂತನ ಧ್ವಜಸ್ತಂಭ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮಗಳು ಆರಂಭಗೊಂಡಿದ್ದು, ಈ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ಬಂಟ್ವಾಳ ತಾಲೂಕಿನ ಎಲ್ಲ ಗ್ರಾಮಗಳಿಂದ ಸುಮಾರು ೬೦೦ಕ್ಕೂ ಅಧಿಕ ವಾಹನಗಳಲ್ಲಿ ಹೊರೆಕಾಣಿಕೆ ಮೆರವಣಿಗೆ ಬಂಟ್ವಾಳದ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಸಮೀಪ ಇರುವ ಮೈದಾನದಿಂದ ಪೊಳಲಿವರೆಗೆ ನಡೆಯಿತು.
ಬಂಟ್ವಾಳದಲ್ಲಿರುವ ಬ್ರಹ್ಮಶ್ರೀ ನಾರಾಯಣಗುರು ವೃತ್ತ ಸಮೀಪದ ಮೈದಾನದಲ್ಲಿ ಧಾರ್ಮಿಕ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ರಸ್ತೆಯ ಇಕ್ಕೆಲಗಳಲ್ಲೂ ಸಿಂಗಾರ, ಚಪ್ಪರದೊಂದಿಗೆ ಬಿ.ಸಿ.ರೋಡಿನಿಂದ ಪೊಳಲಿವರೆಗೆ ಮೆರವಣಿಗೆ ಆಕರ್ಷಕವಾಗಿ ಮೂಡಿಬಂತು.
ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ.ರಮಾನಾಥ ರೈ, ಹಿರಿಯ ಸಾಹಿತಿ, ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ಎ.ಸಿ.ಭಂಡಾರಿ, ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಸುದರ್ಶನ ಜೈನ್, ಹೊರೆಕಾಣಿಕೆ ಸಮಿತಿಯ ಬಂಟ್ವಾಳ ತಾಲೂಕು ಸಂಚಾಲಕ ಚಂದ್ರಹಾಸ ಶೆಟ್ಟಿ ರಂಗೋಲಿ, ಭುವನೇಶ್ ಪಚ್ಚಿನಡ್ಕ, ಜಿಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪದ್ಮಶೇಖರ ಜೈನ್, ಪ್ರಮುಖರಾದ ಜಗನ್ನಾಥ ಚೌಟ, ಸುಲೋಚನಾ ಜಿ.ಕೆ.ಭಟ್, ದಿನೇಶ್ ಅಮ್ಟೂರು, ಬಿ.ದೇವದಾಸ ಶೆಟ್ಟಿ, ಬೇಬಿ ಕುಂದರ್, ಮೋಹನ ರಾವ್, ಸುದೀಪ್ ಶೆಟ್ಟಿ ಮಾಣಿ, ಕೈಯೂರು ನಾರಾಯಣ ಭಟ್, ಅಶೋಕ್ ಬರಿಮಾರು ಸಹಿತ ವಿವಿಧ ರಾಜಕೀಯ, ಸಾಮಾಜಿಕ, ಧಾರ್ಮಿಕ ಮುಂದಾಳುಗಳು ಸಾರ್ವಜನಿಕರು ಉಪಸ್ಥಿತರಿದ್ದರು.
ಅಕ್ಕಿ, ಸಕ್ಕರೆ, ಹೆಸರುಬೇಳೆ, ಕಡ್ಲೆಬೇಳೆ, ಮೆಣಸು, ದಿನಸಿ ಸಾಮಾನು, ತೆಂಗಿನಕಾಯಿ, ಸುವರ್ಣಗಡ್ಡೆ, ಕುಂಬಳ, ಸಿಹಿಕುಂಬಳ, ಸೌತೆ, ಬದನೆ, ಬಾಳೆ ಎಲೆ, ಸೀಯಾಳ ಇತ್ಯಾದಿಗಳನ್ನು ಹೇರಿಕೊಂಡ ಸುಮಾರು 600ಕ್ಕೂ ಅಧಿಕ ವಾಹನಗಳು ಟೆಂಪೊ, ಆಟೋ, ಲಾರಿಗಳಲ್ಲಿ ಸಾಗಿದರು. ಚೆಂಡೆ ವಾದನ, ಗೊಂಬೆ ಕುಣಿತಗಳು, ತೆರೆದ ಜೀಪುಗಳಲ್ಲಿ ಜಯಘೋಷ ಮೆರವಣಿಗೆಯಲ್ಲಿ ಕಂಡುಬಂತು.
ಧಾರ್ಮಿಕ ಸೌಹಾರ್ದತೆ: ಪೊಳಲಿ ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಮೊಡಂಕಾಪು ಇನ್ಫೆಂಟ್ ಜೀಸಸ್ ಚರ್ಚ್ ನ ಕ್ರೈಸ್ತ ಬಾಂಧವರೂ ಟೆಂಪೋದಲ್ಲಿ ಹೊರೆಕಾಣಿಕೆಯನ್ನು ಸಾಗಿಸಿ ಸೌಹಾರ್ದತೆ ಮೆರೆದರು. ಮೊಡಂಕಾಪುವಿನಿಂದ ಪೊಳಲಿವರೆಗೂ ಹಬ್ಬದ ಕಳೆ ಇದ್ದು, ಈ ಸಂಭ್ರಮದಲ್ಲಿ ಕ್ರೈಸ್ತ ಬಾಂಧವರೂ ಭಾಗಿಯಾದರು.
ಕೆ.ಎನ್.ಆರ್. ಕನ್ಸಸ್ಟ್ರಕ್ಷನ್ಸ್ ಗುತ್ತಿಗೆ ವಹಿಸಿಕೊಂಡಿರುವ ಬಿ.ಸಿ.ರೋಡ್ ಭಾಗದ ಕಾಮಗಾರಿಯಲ್ಲಿ ಸೇತುವೆ ಪೂರ್ಣಗೊಳಿಸಿ ಓಡಾಟ ಆರಂಭಗೊಂಡಿರುವುದು ಮಹತ್ವದ ಹೆಜ್ಜೆಯಾಗಿದ್ದು, ಬಿ.ಸಿ.ರೋಡ್ ಸರ್ಕಲ್…