ಕಥೋಲಿಕ್ ಸಭಾ ಮಂಗಳೂರು ಮತ್ತು ಉಡುಪಿ ಕೇಂದ್ರದ ಮುಂದಾಳತ್ವದಲ್ಲಿ 22 ವರ್ಷಗಳಿಂದ ನಡೆಯುತ್ತಿರುವ ಉಡುಪಿ ಜಿಲ್ಲೆಯ ಪಾಂಬೂರು ಮಾನಸ ವಿಶೇಷ ಮಕ್ಕಳ ಶಾಲೆ, ವಸತಿ ಕೇಂದ್ರಕ್ಕೆ ಬಂಟ್ವಾಳ ತಾಲೂಕಿನ ಲೊರೆಟ್ಟೊ ಕಥೋಲಿಕ್ ಸಭಾ ಘಟಕದ ಸದಸ್ಯರು ಭೇಟಿ ನೀಡಿದರು. ಈ ಸಂದರ್ಭ 50 ಸಾವಿರ ರೂ ಮತ್ತು ದಿನಸಿ ಆಹಾರ ಪರಿಕರಗಳನ್ನು ನೀಡಲಾಯಿತು.
ಘಟಕ ದ ಅಧ್ಯಕ್ಷ ರಾದ ಮಾರ್ಕ್ ಲೋಬೊ,ಕಾರ್ಯದರ್ಶಿ ನೋಯೆಲ್ ಮೋನಿಸ್,ಲೋರೆಟ್ಟೋ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ರಿಚರ್ಡ್ ಮಿನೇಜಿಸ್,ಕಥೊಲಿಕ್ ಸಭಾ ಸ್ಥಾಪಕ್ದ್ಯಕ್ಷರದ ವಾಲ್ಟರ್ ನೋರೋನ್ಹ, ಬಂಟ್ವಾಳ ವಲಯ ಅಧ್ಯಕ್ಷ ರಾದ ಸ್ಟೇನಿ ಲೋಬೊ,ಕಾರ್ಯದರ್ಶಿ ಜೀವನ್ , ಮಾನಸ ಕೇಂದ್ರದ ವ್ಯವಸ್ಥಾಪಕರಾದ ಹೆನ್ರಿ ಮಿನೇಜಿಸ್ ಹಾಗೂ ಸಿಬಂದಿ ವರ್ಗದವರು ಉಪಸ್ಥಿತರಿದ್ದರು.