ಪುಂಜಾಲಕಟ್ಟೆ : ತುಳು ನಾಟಕ ಸ್ಪರ್ಧೆ ಸಮಾರೋಪ, ಬಹುಮಾನ ವಿತರಣೆ

ಸುದ್ದಿ, ಲೇಖನಗಳಿಗೆ www.bantwalnews.comಸಂಪಾದಕ: ಹರೀಶ ಮಾಂಬಾಡಿ

  • ಮೇ 22 ನಾಟಕ ಪ್ರಥಮ, ಬರಂದೆ ಕುಲ್ಲಯೆ ದ್ವಿತೀಯ, ಶ್ರೀಮತಿ ತೃತೀಯ

ಪುಂಜಾಲಕಟ್ಟೆಯ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಮತ್ತು ಶ್ರೀ ಮುರುಘೇಂದ್ರ ವನಿತಾ ಸಮಾಜ ಆಶ್ರಯದಲ್ಲಿ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು ಇವರ ಸಹಕಾರದೊಂದಿಗೆ ಸಂಘ ಸ್ಥಾಪಕಾಧ್ಯಕ್ಷ ದಿ. ಪದ್ಮ ಮೂಲ್ಯ ಅನಿಲಡೆ ಸ್ಮರಣಾರ್ಥ ಒಂದು ವಾರ ನಡೆದ ..,ಉಡುಪಿ,ಕಾಸರಗೋಡು ಜಿಲ್ಲಾ ಮಟ್ಟದ ತುಳು ನಾಟಕ ಸ್ಪರ್ಧೆಯಲ್ಲಿ ಕಾರ್ಕಳ ಬೈಲೂರು ಚೈತನ್ಯಕಲಾವಿದರು ತಂಡದ ಮೇ 22 ನಾಟಕ ಪ್ರಥಮ ಸ್ಥಾನ ಪಡೆದಿದೆ.

ಜಾಹೀರಾತು

 

ಅಭಿನಯ ಕಲಾವಿದರು ಉಡುಪಿ ತಂಡದ ಬರಂದೆ ಕುಲ್ಲಾಯೆ ನಾಟಕ ದ್ವಿತೀಯ ಸ್ಥಾನ ಮತ್ತು ತುಳುವೆರೆಉಡಲ್ ಜೋಡುಕಲ್ಲು ತಂಡದ ಶ್ರೀಮತಿ ನಾಟಕ ತೃತೀಯ ಸ್ಥಾನ ಪಡೆದಿದೆ. ಮಾ.2ರಂದು ರಾತ್ರಿ ನಡೆದ ಸಮಾರೋಪದಲ್ಲಿ ಪ್ರಶಸ್ತಿ ವಿತರಿಸಲಾಯಿತು.   

ಜಾಹೀರಾತು

ಬೆಂಗಳೂರು ಜಿಲ್ಲಾ ನ್ಯಾಯಾಧೀಶ ದಿನೇಶ್ ಹೆಗ್ಡೆ ಬದ್ಯಾರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಮಾಜಿಕ ಸೇವಾ ಉದ್ದೇಶ ಹೊಂದಿದ ಸಂಘ ಸಂಸ್ಥೆಗಳಿಂದ ಯುವ ಜನತೆ ಉತ್ತಮ ದಾರಿಯಲ್ಲಿ ನಡೆಯಲು ಪ್ರೇರಣೆ ನೀಡುವುದರ ಜೊತೆ ಸಮಾಜದ ಅಭಿವೃದ್ಧಿಗೆ ಕಾರಣವಾಗುವುದು. ಪುಂಜಾಲಕಟ್ಟೆಯಲ್ಲಿ ಇಂತಹ ಸಂಘ ಸಂಸ್ಥೆಗಳ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂದು ಹೇಳಿದರು.

ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ, ಕಲಾವಿದರಿಗೆ ಪ್ರೋತ್ಸಾಹ ನೀಡುವುದರಿಂದ ಕಲೆಯ ಬೆಳವಣಿಗೆ ಸಾಧ್ಯ ದೇಶದ ಗಡಿ ಕಾಯುವ ಯೋಧರನ್ನು ಗುರುತಿಸಿ ಗೌರವಿಸಬೇಕು.ಇಂತಹ ಕಾರ್ಯಗಳನ್ನು ಸಂಘ ಸಂಸ್ಥೆಗಳು ನಡೆಸಿದಾಗ ಇತರರಿಗೆ ಪ್ರೇರಣೆಯಾಗುವುದು ಎಂದು ಹೇಳಿದರು.   

ಬಂಟ್ವಾಳ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಹರೀಶ್ ಮಾಂಬಾಡಿ ಮಾತನಾಡಿ, ಊರಿನ ಅಭಿವೃದ್ಧಿಯಲ್ಲಿ ಸಾಂಸ್ಕೃತಿಕ ಬೆಳವಣಿಗೆಯೂ ಮಹತ್ವದ್ದಾಗಿದೆ. ಕಲೆ, ಸಂಸ್ಕೃತಿಗೆ ಉತ್ತೇಜನ ನೀಡುವುದರಿಂದ ಸಾಮಾಜಿಕ ಬದಲಾವಣೆಗಳಾಗುತ್ತದೆ. ಇದಕ್ಕೆ ಸದಭಿರುಚಿಯ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಉತ್ತಮ ನಾಟಕ, ಸಿನಿಮಾಗಳ ರಚನೆಯಾಗಲಿ ಎಂದು ಹೇಳಿದರು.

ಜಾಹೀರಾತು

ತೀರ್ಪುಗಾರರ ಪರವಾಗಿ ಮಾತನಾಡಿದ ಶಿಕ್ಷಕ ರಾಮಚಂದ್ರ ರಾವ್, ಜೀವನದಲ್ಲಿ ಕಲೆ ಅವಿನಾಭಾವ ಸಂಬಂಧ ಹೊಂದಿದೆ. ನಾಟಕ ಕಲೆ ಮಾನವನ ಉನ್ನತಿಗೆ ಅದ್ಭುತ ಮಾಧ್ಯಮವಾಗಿದೆ. ಕಲಾವಿದರಿಗೆ ಸೃಜನ ಶೀಲತೆ ಮತ್ತು ಬದ್ಧತೆ ಅಗತ್ಯ ಎಂದರು.

ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಸುದರ್ಶನ ಜೈನ್,.. ಮತ್ತು ಉಡುಪಿ ಜಿಲ್ಲಾ ಹಾಪ್ ಕಾಮ್ಸ್ ಅಧ್ಯಕ್ಷ ಲಕ್ಷ್ಮಿ ನಾರಾಯಣ ಉಡುಪ, ಬಂಟ್ವಾಳ ಅಮೆಚೂರ್ ಕಬಡ್ಡಿ ಎಸೋಸಿಯೇಶನ್ ಅಧ್ಯಕ್ಷ ಬೇಬಿ ಕುಂದರ್,ವಾಮದಪದವು ವ್ಯ.ಸೇ. . ಸಂಘದ ಅಧ್ಯಕ್ಷ ಯಶೋಧರ ಶೆಟ್ಟಿ ದಂಡೆ, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಗೋಪಾಲ್ ಅಂಚನ್ ಆಲದಪದವು, ಬುರೂಜ್ ಇಂಗ್ಲಿಷ್ಮೀಡಿಯಂ ಸ್ಕೂಲ್ಸಂಚಾಲಕ ಶೇಖ್ ರಹಮತ್ತುಲ್ಲಾ, ಬೆಳ್ತಂಗಡಿ ಎಪಿಎಂಸಿ ಸದಸ್ಯೆ ಸೆಲೆಸ್ಟಿನ್ ಸಿಲ್ವಿಯಾ ಡಿಸೋಜ, ವಸ್ತ್ರೊದ್ಯಮಿ ಮೋಹನ್ ಚೌಧುರಿ, ಉದ್ಯಮಿ ಅಬ್ದುಲ್ ಶುಕೂರ್, ಸಂಘದ ಗೌರವಾಧ್ಯಕ್ಷ ಮೋಹನ ಸಾಲ್ಯಾನ್, ವನಿತಾ ಸಮಾಜದ ಅಧ್ಯಕ್ಷೆ ಆಶಾ ದಿನಕರ ಶೆಟ್ಟಿ, ಗೌರವಾಧ್ಯಕ್ಷೆ ಅಮೃತಾ ಎಸ್. ಉಪಸ್ಥಿತರಿದ್ದರು.

ಇದೇ ಸಂದರ್ಭ ಕಲಾವಿದೆ ಕವಿತಾ ದಿನಕರ್, ಸತೀಶ್ ಶೆಟ್ಟಿ ಪಟ್ಲ, ತೀರ್ಪುಗಾರರಾದ ಡಿ.ಎಸ್.ಬೋಳೂರು,ರಾಮಚಂದ್ರ ರಾವ್,ಬಿ., ಚೇತನ್ ರೈ ಮಾಣಿ ಅವರನ್ನು ಸನ್ಮಾನಿಸಲಾಯಿತು.

ಜಾಹೀರಾತು

ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಸ್ವಾಗತಿಸಿದರು. ರಾಜೇಂದ್ರ ಕೆ.ವಿ. ವಂದಿಸಿದರು. ಉಮಾ ಡಿ. ಗೌಡ ಸನ್ಮಾನ ಪತ್ರ ವಾಚಿಸಿದರು. ದೇವದಾಸ್ ಕಜೆಕಾರ್ ಕಾರ್ಯಕ್ರಮ ನಿರೂಪಿಸಿದರು. ರಂಗಕಲಾವಿದ, ಪತ್ರಕರ್ತ ರತ್ನದೇವ್ ಪುಂಜಾಲಕಟ್ಟೆ ನಾಟಕೋತ್ಸವದ ಅವಲೋಕನ ಮಾಡಿದರು.

ಫಲಿತಾಂಶ: ನಿರ್ದೇಶನಪ್ರಥಮ: ಪ್ರಸನ್ನ ಶೆಟ್ಟಿ ಬಲೂರು (ಮೇ 22ಚೈತನ್ಯ ಕಲಾವಿದರು ಬೈಲೂರು) ದ್ವಿತೀಯ: ದಿನೇಶ್ ಅತ್ತಾವರ್-(ಬರಂದೆ ಕುಲ್ಲಾಯೆಅಭಿನಯ ಕಲಾವಿದರು ಉಡುಪಿ). ಸಂಗೀತಪ್ರ: ಬರಂದೆ ಕುಲ್ಲಾಯೆ, ದ್ವಿ: ಶ್ರೀಮತಿ . ರಂಗವಿನ್ಯಾಸಪ್ರ: ಚೈತನ್ಯ ಕಲಾ ಆರ್ಟ್ಸ್, ದ್ವಿ: ಅಭಿನಯ ಕಲಾವಿದರು. ಪ್ರಸಾದನಪ್ರ: ಚೈತನ್ಯ, ದ್ವಿ: ತುಳುವೆರೆ ಉಡಲ್) ಶ್ರೇಷ್ಠ ನಟಪ್ರ: ವೇಣು ಶೆಟ್ಟಿ ಮೂಲ್ಕಿ (ಶ್ರೀಮತಿ ),ದ್ವಿ: ದೇವಿಪ್ರಸಾದ್ ಕೆಮ್ಮಣ್ಣು(ಬರಂದೆ ಕುಲ್ಲಯೆ). ಶ್ರೇಷ್ಟ ನಟಿಪ್ರ: ಪೂಜಾ ಬಲೂರು(ಬರಂದೆ ಕುಲ್ಲಾಯೆ), ದ್ವಿ: ಸುರೇಶ್ ಜೋಡುಕಲ್ಲು (ಶ್ರೀಮತಿ). ಶ್ರೇಷ್ಠ ಹಾಸ್ಯ ನಟಪ್ರ: ರಾಕೇಶ್ ಕಟಪಾಡಿ(ಬರಂದೆ ಕುಲ್ಲಾಯೆ),ದ್ವಿ: ಹರೀಶ್ ಜೋಡುರಸ್ತೆ (ಮೇ ೨೨). ಶ್ರೇಷ್ಠ ಹಾಸ್ಯ ನಟಿ: ಯಾರೂ ಪರಿಗಣಿತವಾಗಿಲ್ಲ . ಶ್ರೇಷ್ಠ ಪೋಷಕ ನಟಪ್ರ: ರಮಾ ಬಿ.ಸಿ.ರೋಡ್ (ಮಗೆ ದುಬಾಯಿಡ್),ದ್ವಿ: ದಿನೇಶ್ ಕಾಜರ ಬಲ್(ಮೇ.೨೨), ಶ್ರೇಷ್ಠ ಪೋಷಕ ನಟಿಪ್ರ: ರಾಕೇಶ್ ಹೂಡೆ(ಮೇ ೨೨. ),ದ್ವಿ: ಬಾಲಕೃಷ್ಣ ಗಟ್ಟಿ (ಶ್ರೀಮತಿ).೧೪ ಮಂದಿಗೆ ತೀರ್ಪುಗಾರರ ವಿಶೇಷ ಬಹುಮಾನಚೈತನ್ಯ ಕಲಾವಿದರು ಬಲೂರು ಕಾರ್ಲ ತಂಡ ಪ್ರಥಮ ಪ್ರಶಸ್ತಿ ಪಡೆದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ