Categories: ಬಂಟ್ವಾಳ

ಪ್ರಧಾನಮಂತ್ರಿ ಸಮ್ಮಾನ್ ಫಲಾನುಭವಿಗಳು ಆರ್.ಟಿ.ಸಿ.ಗೆ ಕ್ಯೂ ನಿಲ್ಲಬೇಕಾಗಿಲ್ಲ: ಶಾಸಕ ರಾಜೇಶ್ ನಾಯ್ಕ್

ಸುದ್ದಿ, ಲೇಖನಗಳಿಗೆ www.bantwalnews.comಸಂಪಾದಕ: ಹರೀಶ ಮಾಂಬಾಡಿ

ಬಂಟ್ವಾಳ: ಪ್ರಧಾನಮಂತ್ರಿ ಸಮ್ಮಾನ್ ಯೋಜನೆಯಡಿ ಅರ್ಜಿ ಸಲ್ಲಿಸುವ ಫಲಾನುಭವಿಗಳು ಆರ್.ಟಿ.ಸಿ. ಲಗತ್ತೀಕರಿಸುವುದು ಕಡ್ಡಾಯವಲ್ಲ ಸ್ವಘೋಷಣಾಪತ್ರವನ್ನು ನೀಡಿದರೆ ಸಾಕಾಗುತ್ತದೆಎಂದು ಜಿಲ್ಲಾಧಿಕಾರಿ ತಿಳಿಸಿದ್ದು, ಹೀಗಾಗಿ ಇದಕ್ಕಾಗಿ ಆರ್.ಟಿ.ಸಿ.ಗೆಂದು ಕ್ಯೂ ನಿಲ್ಲಬೇಕಾಗಿಲ್ಲ ಎಂದು ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಹೇಳಿದ್ದಾರೆ.

ಈ ಯೋಜನೆಯ ಫಲಾನುಭವಿಗಳು ಕಳೆದ ಕೆಲ ದಿನಗಳಿಂದ ಪಹಣಿಪತ್ರಕ್ಕಾಗಿ ಬಂಟ್ವಾಳ ಮಿನಿ ವಿಧಾನಸೌಧದಲ್ಲಿರುವ ಅಟಲ್ ನೆಮ್ಮದಿ ಕೇಂದ್ರದಲ್ಲಿ ಸಾಲುಗಟ್ಟಿದ್ದು, ವಿಷಯ ತಿಳಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಿನಿ ವಿಧಾನಸೌಧದಲ್ಲಿ ಸರ್ವರ್ ಸಮಸ್ಯೆ ಸಹಿತ ಹಲವು ತೊಂದರೆಗಳು ಇದ್ದು, ಅರ್ಹರಿಗೆ ಯೋಜನೆಯ ಸೌಲಭ್ಯವೂ ದೊರಕುವುದು ಕಷ್ಟ ಎಂದು ಫಲಾನುಭವಿಗಳು ದೂರಿಕೊಂಡ ಹಿನ್ನೆಲೆಯಲ್ಲಿ  ಶಾಸಕ ರಾಜೇಶ್ ನಾಯ್ಕ್ ಹಠಾತ್ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಆಲಿಸಿದ ಬಳಿಕ ವಿಷಯದ ಪರಿಹಾರಕ್ಕಾಗಿ ಜಿಲ್ಲಾಧಿಕಾರಿ ಜೊತೆ ದೂರವಾಣಿಯಲ್ಲಿ ಮಾತನಾಡಿದರು.

ಈ ಸಂದರ್ಭ ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್ ಶಾಸಕರಿಗೆ ಮಾಹಿತಿ ನೀಡಿ, ಆರ್.ಟಿ.ಸಿ. ಇಲ್ಲದಿದ್ದರೆ ಸ್ವಘೋಷಿತ ಪ್ರಮಾಣಪತ್ರವನ್ನು ನೀಡಿದರೆ ಸಾಕು ಎಂದು ಹೇಳಿದರು. ಈ ಮಾಹಿತಿಯನ್ಮು ಕೃಷಿ ಅಧಿಕಾರಿಗಳಿಗೂ ತಿಳಿಸಲಾಗಿದ್ದು, ಅವರು ಕೂಡ ಇದಕ್ಕೆ ಸ್ಪಂದಿಸಿದ್ದಾರೆ. ಫಲಾನುಭವಿಗಳು ಆರ್ ಟಿಸಿಗಾಗಿ ನೆಮ್ಮದಿ ಕೇಂದ್ರದಲ್ಲಿ ಸಾಲುಗಟ್ಟಿ ನಿಲ್ಲಬೇಕಾಗಿಲ್ಲ ಎಂದು ಮಾಧ್ಯಮಗಳಿಗೆ ಶಾಸಕರು ಈ ಸಂದರ್ಭ ತಿಳಿಸಿದರು.

ಇದೊಂದೇ ಸಮಸ್ಯೆಯಲ್ಲ:

ಒಂದೆಡೆ ಆಧಾರ್ ನೋಂದಣಿ,ಮತ್ತೊಂದೆಡೆ ವಿವಿಧ ಅರ್ಜಿಗಳ ಸಲ್ಲಿಕೆಗೆ ಜನರ ಸಂದಣಿ ಇದರ ಮಧ್ಯೆ ರೈತ ಸಮಾನ ಯೋಜನೆಯ ಸವಲತ್ತು ಪಡೆಯಲು ಪಹಣಿಪತ್ರ ಕ್ಕಾಗಿ ರೈತರು ಸಾಲುಗಟ್ಟಿ ನಿಲ್ಲುವುದರಿಂದ ಸಮಸ್ಯೆ ನಿರ್ಮಾಣವಾಗಿತ್ತು. ಕಳೆದೆರಡು ದಿನಗಳಿಂದ ಆಗಾಗ ವಿದ್ಯುತ್ ಮತ್ತು ಸರ್ವರ್ ಕೂಡ ಕೈ ಕೊಡುತ್ತಿರುವುದರಿಂದ ಆರ್ ಟಿಸಿ ಪಡೆಯಲು ಸಾಧ್ಯವಾಗದೆ ರೈತರು, ಸಾರ್ವಜನಿಕರು ಹಿಡಿಶಾಪ ಹಾಕಿ ಮರಳುತ್ತಿದ್ದ ಕುರಿತು ಶಾಸಕರಿಗೆ ದೂರು ನೀಡಲಾಗಿತ್ತು. ನೆಮ್ಮದಿಕೇಂದ್ರಲ್ಲಿ ಇತರ ಕೆಲಸ ಕಾರ್ಯಗಳು ವಿಳಂಬವಾಗುತ್ತಿರುವ ಬಗ್ಗೆ ಶಾಸಕರಲ್ಲಿ ಸಾರ್ವಜನಿಕರು ದೂರಿಕೊಂಡರು, ತಹಶೀಲ್ದಾರ್ ಸಣ್ಣ ರಂಗಯ್ಯ ಅವರಲ್ಲಿ ಶಾಸಕರು ಸೂಕ್ತ ಕ್ರಮಕ್ಕೆ ಸೂಚನೆ ನೀಡಿದರು.

ಶಾಸಕರ ಭೇಟಿಯ ವೇಳೆ ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವದಾಸ ಶೆಟ್ಟಿ, ಪ್ರ.ಕಾರ್ಯದರ್ಶಿ  ಮೋನಪ್ಪದೇವಸ್ಯ, ಪುರುಷೋತ್ತಮ ಶೆಟ್ಟಿ ವಾಮದಪದವು,ರಾಜಾರಾಮ ನಾಯಕ್,ಗುರುದತ್ತ ನಾಯಕ್ ಬಂಟ್ವಾಳ,ಮಹೇಶ್ ಶೆಟ್ಟಿ ಮೊದಲಾದವರಿದ್ದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ