ಆರೆಸ್ಸೆಸ್ ಎರಡನೇ ಸರಸಂಘಚಾಲಕ ಗುರೂಜಿ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಶಿಕ್ಷಣ ಪಡೆಯುತ್ತಿರುವ ಎಲ್ಲ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಒಟ್ಟಾಗಿ ಸೇರಿಸುವ ಶ್ರೀರಾಮ ಪರಿವಾರ ಸಂಗಮ ನಡೆಯಿತು.
ರಾಮಕೃಷ್ಣ ಮಠದ ಅಧ್ಯಕ್ಷ ಜಿತಕಾಮಾನಂದಜಿ ಮಾತನಾಡಿ, ಟಿ.ವಿ ಮತ್ತು ಮೊಬೈಲ್ ನಿಂದ ಮಕ್ಕಳನ್ನು ದೂರವಿಡುವುದು ಪೋಷಕರ ಜವಾಬ್ದಾರಿ ಎಂದರು.
ಪೊಳಲಿ ರಾಮಕೃಷ್ಣ ತಪೋವನದ ಅಧಕ್ಷರಾದ ವಿವೇಕ ಚೈತನ್ಯನಾಂದ ಸ್ವಾಮೀಜಿ ಮಾತನಾಡಿ, ಪೋಷಕರು ಶಾಲೆಯ ಚಟುವಟಿಕೆಗಳೊಂದಿಗೆ ಕೈಜೋಡಿಸಿದರೆ, ಶಾಲೆ ಮತ್ತು ಮಕ್ಕಳ ವಿಕಸನ ಸಾಧ್ಯ ಎಂದರು.
ಪ್ರಾಸ್ತಾವಿಕವಾಗಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿದರು. ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಗೆ ೩೦ ವರ್ಷತುಂಬಿದ ಸವಿ ನೆನಪಿಗೆ ಇಲ್ಲಿನ ಶೈಕ್ಷಣಿಕ ಚಟುವಟಿಕೆಗಳನ್ನೊಳಗೊಂಡ ಸತ್ಯಂ ಎಂಬ ಹೆಸರಿನ ಸ್ಮರಣಾ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಸಂಚಿಕೆ ಕುರಿತು ಪ್ರಧಾನ ಸಂಪಾದಕ ವಸಂತ ಕಜೆ ಮತ್ತು ಸಂಪಾದಕ ಸೂರ್ಯನಾರಾಯಣ ಕಶೆಕೋಡಿ ಮಾತನಾಡಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಶ್ರೀರಾಮ ಶಿಶು ಮಂದಿರದ ೨೧೦ ಪುಟಾಣಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು, ೧ರಿಂದ ೪ನೇ ತರಗತಿಯ ಪೂರ್ವಗುರುಕುಲದ ವಿದ್ಯಾರ್ಥಿಗಳಿಂದ ವೈವಿಧಮಯ ನೃತ್ಯ ಪ್ರದರ್ಶನ ನಡೆಯಿತು.ನಾಲ್ಕನೇ ತರಗತಿಯ ವಿದ್ಯಾರ್ಥಿಗಳ ನೃತ್ಯವನ್ನು ಪುಲ್ವಾಮ ದಾಳಿಯಿಂದ ಹುತಾತ್ಮರಾದಯೋಧರಿಗೆ ಅರ್ಪಣೆ ಮಾಡಲಾಯಿತು. ಪರಿವಾರ ಸಂಗಮದಲ್ಲಿ ವಿದ್ಯಾಕೇಂದ್ರದ ೩೩೫೦ ವಿದ್ಯಾರ್ಥಿಗಳ ಪೋಷಕರು ಭಾಗವಹಿಸಿದ್ದರು.
ಸಂಸ್ಥೆಯ ಅಧ್ಯಕ್ಷರಾದ ಬಿ.ನಾರಾಯಣ ಸೋಮಯಾಜಿ, ಸಂಚಾಲಕರಾದ ವಸಂತ ಮಾಧವ, ಸಹಸಂಚಾಲಕರಾದ ರಮೇಶ್‌ಎನ್. ಉಪಸ್ಥಿತರಿದ್ದರು. ಪದವಿ ವಿಭಾಗದ ಪ್ರಾಚಾರ್ಯರಾದ ಕೃಷ್ಣಪ್ರಸಾದ್ ಕಾಯರ್‌ಕಟ್ಟೆ ನಿರೂಪಣೆ ಮಾಡಿ, ಶಿಶು ಮಂದಿರ ವ್ಯವಸ್ಥಾಪಕಿಯಾದ ಸುಧಾಭಟ್ ಕಶೆಕೋಡಿ ಸ್ವಾಗತಿಸಿದರು. ಮಾತೃಭಾರತಿಯ ಅಧ್ಯಕ್ಷೆ ಅರುಣೋದಯ ವಂದಿಸಿದರು.
ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ