ಬಂಟ್ವಾಳ: ಪೊಳಲಿಯಲ್ಲಿ ನಡೆಯಲಿರುವ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಬ್ರಹ್ಮಕಲಶದ ಹಿನ್ನೆಲೆಯಲ್ಲಿ ಮಾರ್ಚ್ 5ರಂದು ನಡೆಯಲಿರುವ ಹೊರೆಕಾಣಿಕೆ ಮೆರವಣಿಗೆ ಹಿನ್ನೆಲೆಯಲ್ಲಿ ನರಿಕೊಂಬು ಶಂಭೂರು ಪರಿಸರದ ಭಕ್ತರ ಪೂರ್ವಭಾವಿ ಸಭೆ ನಡೆಯಿತು.
ಶಂಭೂರು- ನರಿಕೊಂಬು – ಬೊಂಡಾಲ ಮತ್ತು ಎಲ್ಲಾ ಸ್ಥಳೀಯ ಭಗವಭಕ್ತರ, ವಿವಿಧ ಸಂಘ ಸಂಸ್ಥೆಗಳು ಒಟ್ಟುಗೂಡಿ ಹಸಿರು ಹೊರೆ ಕಾಣಿಕೆಯನ್ನು ಕೊಡಲು ಸಭೆಯಲ್ಲಿ ನಿರ್ಧರಿಸಲಾಯಿತ್ತು. ಹೊರೆ ಕಾಣಿಕೆ ಕೊಡಲಿಚ್ಚಿಸುವವರು ನಿಗದಿ ಪಡಿಸಿದ ನರಿಕೊಂಬು – ಮೋಗರ್ನಾಡ್ ಲಕ್ಷ್ಮೀ ನರಸಿಂಹ ದೇವಸ್ಥಾನ, ಪಾಣೆಮಗಳೂರು – ಕಲ್ಲುರ್ಟಿ ದೈವಸ್ಥಾನ , ಶಂಭೂರು ಶೇಡಿಗುರಿ ಬೊಂಡಾಲ- ಗಣೇಶೋತ್ಸವ ಸಮುದಾಯ ಭವನದಲ್ಲಿ ಬೆಳ್ಳಿಗೆ 11 ಗಂಟೆಯ ಮೊದಲು ಕೊಡಬೇಕು ಮತ್ತು ಮಾ.5ರಂದು ಬೆಳ್ಳಿಗೆ 11.30ಕ್ಕೆ ಶೇಡಿಗುರಿ ಗಣೇಶೋತ್ಸವ ಸಮುದಾಯ ಭವನದಿಂದ ಹೊರಡುವ ಹಸಿರು ಹೊರೆ ಕಾಣಿಕೆ ಮೆರವಣಿಗೆಯಲ್ಲಿ ಹಾಗೂ ಬಿ.ಸಿ. ರೋಡ್ ನಿಂದ ಹೊರಡುವ ಬಂಟ್ವಾಳ ತಾಲೂಕಿನ ಹೊರೆ ಕಾಣಿಕೆ ಮೆರವಣಿಗೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿನಂತಿಸಲಾಯಿತು.
ಸಭೆಯಲ್ಲಿ ಪ್ರಮುಖರಾದ ಬೊಂಡಾಲ ಸಚ್ಚಿದಾನಂದ ಶೆಟ್ಟಿ, ಪದ್ಮನಾಭ ಮಯ್ಯ ಎಳಬೆ, ಪ್ರಕಾಶ್ ಕಾರಂತ ನರಿಕೊಂಬು, ಪಂಚಾಯತ್ ಮಾಜಿ ಅಧ್ಯಕ್ಷರಾದ ಆನಂದ ಸಾಲ್ಯಾನ್, ತಾಲೂಕ್ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಆನಂದ ಶಂಭೂರು, ರಘು ಸಪಲ್ಯ, ಕೇಶವ ಪೂಜಾರಿ, ಸುಪ್ರೀತ್ ಶೆಟ್ಟಿ ಬೊಂಡಾಲ, ಕೃಷ್ಣಪ್ಪ ಪೂಜಾರಿ ನಾಟಿ, ಯಶೋಧರ ಬಂಗೇರ, ಗೋಪಾಲ ಮತ್ತು ಸ್ಥಳೀಯರು ಭಾಗವಹಿಸಿದ್ದರು.
ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ