ತಾಯಿಗೆ ನೀಡುವ ಗೌರವ ಮಾತೃಭಾಷೆಗೂ ನೀಡಬೇಕು. ಭಾಷೆಗಳಲ್ಲಿ ಮೇಲು-ಕೀಳು ಎಂಬುದು ಇಲ್ಲ. ಎಲ್ಲ ಭಾಷೆಗೂ ಅದರದ್ದೇ ಆದ ಸತ್ವವಿದೆ. ಎಲ್ಲ ಭಾಷೆಗಳನ್ನೂ ಗೌರವಿಸಿ ಪ್ರೀತಿಸಿ ಎಂದು ನಿವೃತ್ತ ಸಂಸ್ಕೃತ ಅಧ್ಯಾಪದ ಶಂಕರ್ ಭಟ್ ಹೇಳಿದರು. ಬಂಟ್ವಾಳದ ಬಿ.ಆರ್.ಎಂ.ಪಿ.ಸಿ.ಪಿ. ಶಾಲೆಯಲ್ಲಿ ನಡೆದ ಅಂತರಾಷ್ಟ್ರೀಯ ಮಾತೃಭಾಷಾ ದಿನಾಚರಣೆಯ ಅಂಗವಾಗಿ ನಡೆದ ಕಾರ್‍ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಪ್ರಿನ್ಸಿಪಾಲ್ ರಮಾಶಂಕರ್ ಹಾಗೂ ಶಿಕ್ಷಕ ವರ್ಗದವರು ಈ ಕಾರ್‍ಯಕ್ರಮದಲ್ಲಿ ಪಾಲ್ಗೊಂಡರು. ಗುಜರಾಥಿ, ಒರಿಯಾ, ಮರಾಠಿ, ಭಾಷೆಗಳ ಭಾಷಣ, ತಮಿಳು, ತೆಲುಗು, ಮಲಯಾಳಿ ಭಾಷೆಗಳ ಭಾಷಾ ವೈಶಿಷ್ಟ್ಯತೆ ಸಾರುವ ಭಾಷಣ ಹಾಗೂ ಪ್ರಹಸನಗಳು ಕೊಂಕಣಿ ಭಾಷೆಯ ಸಮೂಹಗಾಯನ, ಲೇಖನಗಳು, ತುಳುಭಾಷೆಯ ಸಂಸ್ಕೃತಿಯನ್ನು ಸಾರುವ ಭಾಷಣ, ಒಗಟುಗಳು, ಗಾದೆಗಳು, ನಾಟಕಗಳುಜರುಗಿದವು. ಶಿವಳ್ಳಿ ತುಳು ಭಾಷೆಯ ಪ್ರಹಸನ ಪ್ರದರ್ಶಿಸಲಾಯಿತು. ಮೈಸೂರು ಕನ್ನಡ, ಕುಂದಾಪುರ ಕನ್ನಡ, ಕೋಟಕನ್ನಡ, ಹವ್ಯಕ ಕನ್ನಡ ಭಾಷೆಯ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಬ್ಯಾರಿ ಸಾಹಿತ್ಯದ ಒಂದು ವಿಶೇಷತೆಯಾದ ಬುರ್ದಾ ಹಾಡನ್ನು ವಿದ್ಯಾರ್ಥಿಗಳು ಧಾರ್ಮಿಕ ರೀತಿಯಲ್ಲಿ ಪಠಣ ಮಾಡಿದರು. ೮ನೇ ತರಗತಿಯ ಬಿ.ಶ್ರೇಯಸ್ ಶೆಣೈ ಮತ್ತು ಆದೀಶ್ ಇಂದ್ರ ಕಾರ್‍ಯಕ್ರಮ ನಿರ್ವಹಿಸಿದರು.