ಬಂಟ್ವಾಳ: ಸುಖ ಬಂದಾಗ ಹಿಗ್ಗದೆ ದುಖಃ ಬಂದಾಗ ಕುಗ್ಗದೆ ಸದಾ ಸ್ಥಿತಪ್ರಜ್ಞರಾಗಿದ್ದು ಭಗವ್ತ್‌ದರ್ಪಣ ಬುದ್ಧಿಯಿಂದ ಬಾಳಿದರೆ ನೆಮ್ಮದಿ ಶಾಂತಿ ಲಭ್ಯವಾಗುತ್ತದೆ ಎಂದು ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಮಿತಿ, ಬಿ.ಸಿ.ರೋಡು ಆಶ್ರಯದಲ್ಲಿ ಬಿ.ಸಿ.ರೋಡಿನ ಗೀತಾಂಜಲಿ ಕಲ್ಯಾಣ ಮಂಟಪದಲ್ಲಿ ನಡೆದ ಶ್ರೀ ಸತ್ಯನಾರಾಯಣ ಪೂಜಾಮಹೋತ್ಸವ ಕಾರ್‍ಯಕ್ರಮದಲ್ಲಿ ಶ್ರೀ ಕಾಶೀ ಮಠಾಧೀಶ ಶ್ರೀಮತ್ ಸಂಯಮೀಂದ್ರತೀರ್ಥ ಸ್ವಾಮೀಜಿ ನುಡಿದರು.
ಸಂಸಾರವೆಂಬ ಸಾಗರದಲ್ಲಿ ಸುಖ-ಕಷ್ಟ ನೋವು-ನಲಿವು ಇದ್ದೇ ಇರುತ್ತದೆ. ಆದರೆ ಅದನ್ನು ನಿಭಾಯಿಸಿಕೊಂಡು ಬಾಳುವುದೇ ಪ್ರಮುಖವಾದ ವಿಚಾರ ಎಂದು ಅವರು ಆಶೀರ್ವದಿಸಿದರು.
ಸಮಿತಿಯ ಅಧ್ಯಕ್ಷ ಯು. ಸುರೇಶ್ ನಾಯಕ್ ಸ್ವಾಮೀಜಿಯವರನ್ನು ಸ್ವಾಗತಿಸಿದರು. ಸಮಿತಿಯ ಸರ್ವ ಸದಸ್ಯರು ಮತ್ತು ಯುವಕ ವೃಂದದವರು ಸಹಕರಿಸಿದರು. ಮಧುಕರ್ ಮಲ್ಯ ಪ್ರಸ್ತಾವನೆಗೈದು ಕಾರ್ಯಕ್ರಮ ನಿರೂಪಿಸಿದರು. ರಮೇಶ್ ಪ್ರಭು ವಂದಿಸಿದರು.