ಬಂಟ್ವಾಳ: ಬಿ.ಸಿ.ರೋಡಿನ ಉದ್ಯಮಿ ಎಂ.ಪಾಂಡುರಂಗ ಪೈ(64) ಅಲ್ಪಕಾಲದ ಅನಾರೋಗ್ಯದಿಂದ ಫೆ.20ರಂದು ಬೆಳಗ್ಗೆ 8.30ಕ್ಕೆ ಸ್ವಗೃಹದಲ್ಲಿ ನಿಧನ ಹೊಂದಿದರು. ಪತ್ನಿ, ಪುತ್ರ ಹವ್ಯಾಸಿ ಕಲಾವಿದ ಸುಬ್ರಹ್ಮಣ್ಯ ಪೈ ಹಾಗೂ ಅಪಾರ ಬಂಧು ಬಳಗವನ್ನು ಅವರು ಅಗಲಿದ್ದಾರೆ. ಬಂಟ್ವಾಳ, ಬಿ.ಸಿ.ರೋಡಿನಲ್ಲಿ ಹಲವು ದಶಕಗಳಿಂದ ದಿನಪತ್ರಿಕೆ ವಿತರಣೆ ನಡೆಸಿದ್ದ ಅವರು, ಸ್ವಂತ ಉದ್ಯಮಿಯಾಗಿ ಯಶಸ್ವಿಯಾಗಿದ್ದರು. ಹವ್ಯಾಸಿಯಾಗಿ ಸೈಕಲ್ ರೇಸ್ ನಲ್ಲಿ ಪಾಲ್ಗೊಂಡು ಪದಕಗಳನ್ನೂ ಅವರು ಗಳಿಸಿದ್ದರು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…