Categories: ಕಲ್ಲಡ್ಕ

ಅಮ್ಟೂರಿನಲ್ಲಿ ಯೋಧರಿಗೆ ನುಡಿ ನಮನ

ಬಂಟ್ವಾಳ: ಕಾಶ್ಮೀರದ ಪುಲ್ವಾಮದಲ್ಲಿ ಉಗ್ರಗಾಮಿಗಳ ಧಾಳಿಯಿಂದ ವೀರ ಮರಣ ಹೊಂದಿದ ವೀರ ಯೋಧರಿಗೆ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗ ದಳ ಹಾಗೂ ಶ್ರೀಕೃಷ್ಣ ಮಂದಿರ ಅಮ್ಟೂರು ವತಿಯಿಂದ ನುಡಿ ನಮನಮನ ಕಾರ್‍ಯಕ್ರಮ ನಡೆಯಿತು. ಕಾರ್‍ಯಕ್ರಮದ ಪ್ರಾರಂಭದಲ್ಲಿ ಭಾರತಮಾತೆಯ ಭಾವಚಿತ್ರದ ಮುಂಭಾಗದಲ್ಲಿ ಎಲ್ಲಾ ಕಾರ್‍ಯಕರ್ತರು ಹಣತೆ ಹಿಡಿದು ವೀರ ಯೋಧರಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು.

ಜಾಹೀರಾತು

ಕಾರ್‍ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಎಸ್.ಸಿ.ಮೋರ್ಚಾ ಅಧ್ಯಕ್ಷರಾದ ದಿನೇಶ್ ಅಮ್ಟೂರು ಮಾತನಾಡಿ ಇಂದಿನ ದಿನಗಳು ನಮಗೆ ಸವಾಲಿನ ದಿನಗಳಾಗಿವೆ. ಕಾಶ್ಮೀರದಲ್ಲಿ ನಿತ್ಯವೂ ನರಕಯಾತನೆ ಅಲ್ಲದೇ ಅಲ್ಲಿನ ಸ್ಥಳೀಯರೇ ಉಗ್ರರಿಗೆ ಬೆಂಬಲ ನೀಡುವುದು ನೋವಿನ ಸಂಗತಿಯಾಗಿದೆ. ಕಾಶ್ಮೀರ ಮಾತ್ರವಲ್ಲದೇ ನಮ್ಮ ಸುತ್ತು ಮುತ್ತಲಿನಲ್ಲಿಯೂ ಇಂತಹ ಘಟನೆಗಳು ಕಂಡು ಬಂದಲ್ಲಿ ನಾವು ವಿರೋಧಿಸಬೇಕಾಗಿದೆ. ನಾವೂ ಯಾವಾಗಲೂ ಎಚ್ಚರಿಕೆಯಿಂದ ಒಗ್ಗಟ್ಟಾಗಿದ್ದು ದೇಶ ರಕ್ಷಣೆಗೆ ಒಂದೂಡಬೇಕು ಎಂದರು.

ವಿಟ್ಲ ತಾಲೂಕು ಬಜರಂಗ ದಳ ಸಂಚಾಲಕ ಅಕ್ಷಯ್ ರಜಪೂತ್ ಮಾತನಾಡಿ ದೇಶದ ತುತ್ತ ತುದಿಯ ಸಮಸ್ಯೆ ಎಂದುಕೊಂಡು ಕುಳಿತರೆ ನಮ್ಮಲ್ಲಿಗೂ ಬರಬಹುದು. ಕಾಶ್ಮೀರ ಎಂಬುದು ನಮ್ಮ ದೇಶದ ಅವಿಭಾಜ್ಯ ಅಂಗ ಇದನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ. ಉಗ್ರರು ಎಲ್ಲೇ ಇರಲಿ ಅದರ ವಿರುದ್ದ ಧ್ವನಿಯೆತ್ತಲೇ ಬೇಕು ಎಂದು ಹೇಳಿದರು.

ಪಂಚಾಯತ್ ಸದಸ್ಯರುಗಳಾದ ಗೋಪಾಲ ಪೂಜಾರಿ ಮತ್ತು ಗೋಪಾಲಕೃಷ್ಣ ಪೂವಳ, ಬಜರಂಗ ದಳ ಅಮ್ಟೂರು ಘಟಕದ ಸಂಚಾಲಕ ಕೌಶಿಲ್ ಶೆಟ್ಟಿ, ಮನೀಶ್, ಮಂದಿರದ ಕಾರ್‍ಯದರ್ಶಿಯಾದ ಶ್ರೀಧರ ಸುವರ್ಣ, ಕುಶಾಲಪ್ಪ ಅಮ್ಟೂರು, ಮೋಹನ್ ಆಚಾರ್ಯ, ಮಂದಿರದ ಕಾರ್ಯಕರ್ತರು, ಬಜರಂಗದಳದ ಸದಸ್ಯರುಗಳು ಉಪಸ್ಥಿತರಿದ್ದರು. ಗೋಪಾಲ ಬಲ್ಯಾಯ ಕಾರ್‍ಯಕ್ರಮವನ್ನು ನಿರ್ವಹಿಸಿದರು.

 

 

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ಮಂಗಳೂರು ಕಡಲ ತೀರ ʼಕಡಲ ಪವನ ಶಕ್ತಿ ಉತ್ಪಾದನಾ ವಲಯʼವಾಗಿ ಅಭಿವೃದ್ಧಿಪಡಿಸಲು ಕೇಂದ್ರಕ್ಕೆ ಮನವಿ

ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)

19 hours ago