Categories: ಬಂಟ್ವಾಳ

ಡಾ. ಬಾಳಪ್ಪ ಜನ್ಮದಿನಾಚರಣೆ ಪ್ರಯುಕ್ತ ಸಮಾಜ ಸೇವಾ ಸಹಕಾರಿ ಸಂಭ್ರಮ

ಸುದ್ದಿ, ಲೇಖನಗಳಿಗೆ www.bantwalnews.comಸಂಪಾದಕ: ಹರೀಶ ಮಾಂಬಾಡಿ

ಬಂಟ್ವಾಳ: ಬಂಟ್ವಾಳ ಸಮಾಜ ಸೇವಾ ಸಹಕಾರಿ ಬ್ಯಾಂಕ್ ನಿಯಮಿತದ ಸಂಸ್ಥಾಪಕರಾದ ಸಮಾಜ ರತ್ನ , ಸ್ವಾತಂತ್ರ್ಯ ಯೋಧ ಡಾ. ಅಮ್ಮೆಂಬಳ ಬಾಳಪ್ಪ ಇವರ 97 ನೇ ಜನ್ಮ ದಿನಾಚರಣೆಯ ಅಂಗವಾಗಿ ಫೆ.24 ರಂದು‌‌‌ ” ಸಮಾಜ ಸೇವಾ ಸಹಕಾರಿ ಸಂಭ್ರಮ-2019 ಕಾರ್ಯಕ್ರಮ ಬಂಟ್ವಾಳ ಬೈಪಾಸ್ ನಲ್ಲಿರುವ ಸಮಾಜ ಸಹಕಾರಿ ಭವನ ನಡೆಯಲಿದೆ ಎಂದು ಬ್ಯಾಂಕ್ ನ ಅಧ್ಯಕ್ಷ ಸುರೇಶ್  ಕುಲಾಲ್ ತಿಳಿಸಿದ್ದಾರೆ.

ಜಾಹೀರಾತು

ಬುಧವಾರ ಸಂಜೆ  ಬ್ಯಾಂಕ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಕಾರ್ಯಕ್ರಮವನ್ನು ಶ್ರೀ ಧಾಮ ಮಾಣಿಲದ ಶ್ರೀ  ಮೋಹನದಾಸ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಶ್ರೀ ಕ್ಷೇತ್ರ ಮುಳಿಯದ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ ಉಪಸ್ಥಿತರಿದ್ದು ,ರೇಖಿ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡುವರು,ರಾ.ಸ್ವ. ಸೇ.ಸಂಘದ ಜಿಲ್ಲಾ ಸಹ ಕಾರ್ಯ ವಾಹ ಸುಭಾಶ್ಚಂದ್ರಕಳಂಜ,   ಯೋಗ ಶಿಕ್ಷಕ ಚೆನ್ನಕೇಶವ ಡಿ.ಆರ್. ,ಪುತ್ತೂರು ಪ್ರಶಾಂತಿ ಸದ್ಬಾವನ ಟ್ರಸ್ಟ್ ನ ಮಧುಸೂಧನ್ ನಾಯಕ್ ಅತಿಥಿಯಾಗಿ   ಭಾಗವಹಿಸುವರು ಎಂದು ತಿಳಿಸಿದರು.  ಕಾರ್ಯಕ್ರಮದಲ್ಲಿ ಆರೋಗ್ಯ ತಪಾಸಣಾ ಶಿಬಿರ , ಯೋಗ ಮುದ್ರಾ ಶಿಬಿರ, ಸ್ವ ಸಹಾಯ ಸಂಘಗಳ ಸಮಾವೇಶ, ವಿಧ್ಯಾರ್ಥಿ ವೇತನ ವಿತರಣೆ, ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಗಳು ನಡೆಯಲಿದೆಎಂದ  ಅವರು ಸಂಜೆ ನಡೆಯುವ ಸಮಾರೋಪ ‌ಸಮಾರಂಭದಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ,ಹಿರಿಯ ಪತ್ರಕರ್ತ ಅಮ್ಮೆಂಬಳ ಆನಂದ ಮೊದಲಾದವರು ಭಾಗವಹಿಸುವರು ಎಂದು ಹೇಳಿದರು. ಬ್ಯಾಂಕ್ ಸುಮಾರು 143 ಸ್ಬಸಹಾಯ ಸಂಘಗಳು ಹೊಂದಿದ್ದು , 1314 ಸದಸ್ಯರಿದ್ದಾರೆ, ಮುಂದಿನ ದಿನಗಳಲ್ಲಿ  ಇನ್ನೆರಡು ಶಾಖೆಗಳನ್ನು ತೆರೆಯಲು ನಿರ್ಧರಿಸಿದೆ. ತ್ವರಿತ ಸಾಲ ಸೌಲಭ್ಯ ಜಾರಿ,ಆನ್ ಲೈನ್ ಮೂಲಕ ಗ್ರಾಹಕರಿಗೆ ಸೇವೆ ನೀಡುವ ನಿಟ್ಟಿನಲ್ಲೂ ಯೋಜನೆ ಹಾಕಿಕೊಳ್ಳಲಾಗಿದೆ. ಸದಸ್ಯರ ಗಂಭೀರ ಕಾಯಿಲೆಗೆ ಆರ್ಥಿಕ ನೆರವು,ಪ್ರಧಾನ ಮಂತ್ರಿ ಭೀಮಾ ಸುರಕ್ಷಾ ಯೋಜನೆಯನ್ನು ಬ್ಯಾಂಕ್ ನಲ್ಲಿ ಅಳವಡಿಸಲಾಗಿದೆ ಎಂದರು.  3.04 ಕೋ.ರೂ.ಲಾಭ : ಬ್ಯಾಂಕ್ 146.27 ಕೋ.ರೂ.ದುಡಿಯುವ ಬಂಡವಾಳ ಹೊಂದಿದ್ದು,2018 ಮಾರ್ಚ್ ಅಂತ್ಯಕ್ಕೆ 3.04 ಕೋ.ರೂ.ಲಾಭಗಳಿಸಿ 2017-18 ರ ಸಾಲಿಗೆ  22ಶೇ.ಡಿವಿಡೆಂಡ್ ನೀಡಲಾಗಿದೆ ಎಂದು ಈ ಸಂದರ್ಭ ಹಾಜರಿದ್ದ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಬೋಜ ಮೂಲ್ಯ ಅವರು ಒಟ್ಟು 469ಕೋ.ರೂ.ಗೂ ಮಿಕ್ಕಿ ವ್ಯವಹಾರನಡೆಸಿದ್ಸು,ಸಾಲ ವಸೂಲಾತಿಯಲ್ಲು‌ ಶೇ.95.36 ಸಾಧನೆ ಮಾಡಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಉಪಾಧ್ತಕ್ಷ ವಿಶ್ವನಾಥ ಕೆ.ಬಿ ,ನಿರ್ದೇಶಕರಾದ  ಜನಾರ್ದನ ಕುಲಾಲ್, ವಿಶ್ವನಾಥ್, ವಿನಾಯಕ, ಅರುಣ್ ಕುಮಾರ್, ಪದ್ಮನಾಭ ವಿಟ್ಲ, ವಿಜಯ್ ಕುಮಾರ್, ಎಂ.ವಾಮನ ಟೈಲರ್, ವಿಜಯಲಕ್ಷ್ಮಿ, ಜಯಂತಿ, ವಿದ್ಯಾ ಉಪಸ್ಥಿತರಿದ್ದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.