ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಬಂಟ್ವಾಳ: ದೇಶ ಕಾಯುವ ನಮ್ಮ ವೀರ ಸೈನಿಕರ ನೈತಿಕ ಸ್ಥೈರ್ಯ ವೃದ್ಧಿಸುವ ಕೆಲಸವಾಗಬೇಕು ಎಂದು ಹಿಂದು ಜಾಗರಣಾ ವೇದಿಕೆ ಪ್ರಮುಖ ಸತ್ಯಜಿತ್ ಸುರತ್ಕಲ್ ಹೇಳಿದರು.
ಬಂಟ್ವಾಳ ಹಿಂದು ಜಾಗರಣಾ ವೇದಿಕೆ ವತಿಯಿಂದ ಬಿ.ಸಿ.ರೋಡಿನ ಬಸ್ ನಿಲ್ದಾಣದಲ್ಲಿ ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭ ಮೌನ ಪ್ರಾರ್ಥನೆ ಬಳಿಕ, ವೀರಯೋಧರ ಭಾವಚಿತ್ರ ಕ್ಕೆ ಪುಷ್ಪಾಂರ್ಚನೆ ಸಲ್ಲಿಸಿ ಮಾತನಾಡಿದ ಸತ್ಯಜಿತ್ ಸುರತ್ಕಲ್, ದೇಶ ಕಾಯುವ ನಮ್ಮ ವೀರ ಸೈನಿಕರು ಹೇಡಿ ಉಗ್ರರ ದಾಳಿಗೆ ಬಲಿಯಾದ ಕ್ಷಣ ಇಡೀ ದೇಶದ ಜನತೆಯನ್ನು ಕಣ್ಣೀರು ಹಾಕುವಂತೆ ಮಾಡಿದೆ. ಪ್ರತಿಯೊಬ್ಬ ಸೈನಿಕರ ಬಲಿದಾನವು ನಮಗೆ ನೋವು ತಂದಿದೆ. ಮಾನವ ಹಕ್ಕುಗಳ ಹೆಸರಿನಲ್ಲಿ ಸೈನಿಕರ ಮೇಲೆ ಆಕ್ರಮಣ, ಕೆಲವು ರಾಜಕೀಯ ಪಕ್ಷಗಳ ತೊಂದರೆ , ಪ್ರತಿಕೂಲ ಪರಿಸ್ಥಿತಿ ಯ ಜೊತೆ ಹೋರಾಟ ಇವೆಲ್ಲವುಗಳ ಮಧ್ಯೆ ದೇಶ ರಕ್ಷಣೆ ಮಾಡುವ ಸೈನಿಕರ ಬಗ್ಗೆ ನಾವು ಒಂದು ದಿನವೂ ಯೋಚನೆ ಮಾಡಿಲ್ಲ, ಅವರ ಕುಟುಂಬದ ಸ್ಥಿತಿ ಯನ್ನು ನೋಡಿಲ್ಲ. ದೇಶದ ರಕ್ಷಣೆ ಗೋಸ್ಕರ ಪ್ರತಿಕ್ಷಣವೂ ತುಡಿತದಲ್ಲಿರುವ ಸೈನಿಕರಿಗೆ ಶಕ್ತಿತುಂಬುವ ಕೆಲಸ ನಾವೆಲ್ಲ ರೂ ಮಾಡಬೇಕಾಗಿದೆ. ದೇಶದ್ರೋಹಿಗಳಿಗೆ ಆಶ್ರಯ ನೀಡುವ ಭಯೋತ್ಪಾದಕ ರು ನಮ್ಮ ನೆರೆಹೊರೆಯಲ್ಲಿದ್ದಾರೆ ಎಂಬುದು ವಿಷಾದನೀಯ ಎಂದರು. ಪ್ರಮುಖರಾದ ರಾಧಾಕೃಷ್ಣ ಅಡ್ಯಂತಾಯ, ರವಿರಾಜ್ ಬಿಸಿರೋಡ್, ಚಂದ್ರಕಲಾಯಿ, ರತ್ನಾಕರ ಶೆಟ್ಟಿ, ಮಚ್ಚೇಂದ್ರ ಸಾಲಿಯಾನ್, ಶೇಖರ್ ಶೆಟ್ಟಿ, ಯೋಗೀಶ್ ತುಂಬೆ ಮತ್ತಿತರ ರು ಉಪಸ್ಥಿತರಿದ್ದರು.