ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಬಂಟ್ವಾಳ: ಭಾನುವಾರ ಸರಪಾಡಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದದಲ್ಲಿ ಪ್ರತಿಷ್ಠಾ ಮಹೋತ್ಸವದ ಪ್ರಥಮ ವರ್ಷದ ಅಂಗವಾಗಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಿತು.
ತಿರುಪತಿ ಶ್ರೀ ವೆಂಕಟೇಶ್ವರ ವೇದ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಬ್ರಹ್ಮ ಶ್ರೀ ವಿ.ಗಣೇಶ್ ಪ್ರಸಾದ್ ಮಾರ್ಗದರ್ಶನದಲ್ಲಿ ತಿರುಪತಿಯ ಪುರೋಹಿತ ವೃಂದದ ನೇತೃತ್ವದಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ಕೈಂಕರ್ಯಗಳು ನಡೆಯಿತು.
ತಿರುಪತಿಯಿಂದ ಆಗಮಿಸಿದ ಶ್ರೀ ತಿರುಪತಿ ವೆಂಕಟರಮಣ ಮತ್ತು ಶ್ರೀ ದೇವಿ, ಭೂ ದೇವಿಯ ಮೂರ್ತಿಯನ್ನು ಬೆಳಗ್ಗೆ ಪೂಪಾಡಿಕಟ್ಟೆ-ಪೆರ್ಲ ಬೀಯಪಾದೆ-ಎಕ್ಕಡೇಲು-ಸರಪಾಡಿ ಮಾರ್ಗವಾಗಿ ಬ್ಯಾಂಡ್, ವಾದ್ಯ, ಕೊಂಬು, ಚೆಂಡೆ ವಾದನದಲ್ಲಿ ಮೆರವಣಿಗೆ ಮೂಲಕ ಸರಪಾಡಿ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ತರಲಾಯಿತು. ಬಳಿಕ ಧಾರ್ಮಿಕ ಪೂಜಾ ಕಾರ್ಯಕ್ರಮ ನಡೆದವು.
ಸಂಚಾಲಕ ರವೀಂದ್ರ ಟಿ.ಸಿ. ಮಾವಿನಕಟ್ಟೆ ಮತ್ತು ವಿಶ್ವನಾಥ ಗೌಡ ದಂಪತಿ ಸೇವಾ ಕರ್ತೃಗಳಾಗಿ ಕಲ್ಯಾಣೋತ್ಸವ ನಡೆಸಿಕೊಟ್ಟರು.
ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವೇ.ಮೂ.ಶಿವ ಪ್ರಸಾದ ಐತಾಳ ಆರಮನೆ ನೇತೃತ್ವದಲ್ಲಿ ದ್ವಾದಶ ನಾಳೀಕೆರ ಯಾಗ ನಡೆಯಿತು. ಮಧ್ಯಾಹ್ನ ಮಹಾ ಅನ್ನ ಸಂತರ್ಪಣೆ ನಡೆಯಿತು. ಈ ಸಂದರ್ಭ ಮಾಜಿ ಸಚಿವ ಬಿ.ರಮಾನಾಥ ರೈ, ದೇವಸ್ಥಾನದ ಆಡಳಿತ ಮೊಕ್ತೇಸರ ಡಾ| ಎಚ್. ಶಂಕರ ನಾರಾಯಣ ರಾವ್, ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಎಸ್. ನರಸಿಂಹ ಐತಾಳ್, ಅರಮನೆ, ಅಧ್ಯಕ್ಷ ಎಸ್. ದಯಾನಂದ ಐತಾಳ್, ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಗೌರವಾಧ್ಯಕ್ಷ, ಜಿ.ಪಂ.ಸದಸ್ಯ ಬಿ. ಪದ್ಮಶೇಖರ ಜೈನ್ ಬಲ್ಲೋಡಿಗುತ್ತು, ಅಧ್ಯಕ್ಷ ಗಣೇಶ್ ಪೈ ಸರಪಾಡಿ, ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳಾದ ನಾರಾಯಣ ಶೆಟ್ಟಿ ಹೊಳ್ಳರಗುತ್ತು, ಪುಷ್ಪರಾಜ್ ಬಂಗೇರ ಹಲ್ಲಂಗಾರು,ಧನಂಜಯ ಶೆಟ್ಟಿ ನಾಡಬೆಟ್ಟು, ಸುರೇಶ ಶೆಟ್ಟಿ ಹಾಲಾಡಿ, ಪದ್ಮಪ್ಪ ಪೂಜಾರಿ ಹೆಗ್ಗಡೆಕೋಡಿ,ರಾಮಚಂದ್ರ ದರ್ಖಾಸು, ಚಂದ್ರಶೇಖರ ನಾಯ್ಕ, ಕಲ್ಯಾಣೊತ್ಸವ ಸಮಿತಿಯ ಪದಾಧಿಕಾರಿಗಳಾದ ಎಚ್. ಸುಂದರ ಶೆಟ್ಟಿ ಹೊಳ್ಳರ ಗುತ್ತು, ಎಚ್. ಸುಧಾಕರ ಶೆಟ್ಟಿ ಹೆಗ್ಗಡೆಕೋಡಿ, ಪ್ರದೀಪ್ ರೈ ಮಾವಿನಕಟ್ಟೆ, ಬಾಲಕೃಷ್ಣ ಪೂಜಾರಿ ಕೊಟ್ಟುಂಜ, ಮನೋಹರ ಪೂಜಾರಿ ಬೊಳ್ಳೂರು, ಚಂದ್ರಹಾಸ ಶೆಟ್ಟಿ ಹೊಳ್ಳರಗುತ್ತು, ಶಶಿಕಾಂತ ಶೆಟ್ಟಿ ಆರುಮುಡಿ, ವರದರಾಜ ಅಲ್ಲಿಪಾದೆ ಮತ್ತಿತರರು ಉಪಸ್ಥಿತರಿದ್ದರು. ಸಂಜೆ ಭಜನಾ ಕಾರ್ಯಕ್ರಮ, ರಾತ್ರಿ ಶ್ರೀ ಶರಭೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಪೂಜೆ, ಶ್ರೀ ವೆಂಕಟರಮಣ ದೇವರಿಗೆ ರಂಗಪೂಜೆ ನಡೆಯಿತು.